12.19.2006

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಎಲ್ಲ ಸದಸ್ಯರ ಸಭೆ

ಗೆಳೆಯರೆ,

"ಮಾಹಿತಿ ತಂತ್ರಜ್ಞಾನದ ಸಂದರ್ಭ‌ದಲ್ಲಿ ದೇಸಗತಿ ಭಾಷೆಗಳು ಮತ್ತು ಸಂಸ್ಕೃತಿ" - ಈ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವೊಂದನ್ನು, ನಡೆಸುವ ಪ್ರಸ್ತಾವನೆಯೊಂದಿಗೆ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದವರು ಕಳೆದ ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ಸಭೆಯೊಂದನ್ನು ನಡೆಸಿ, ಅಲ್ಲಿ, ಈ ಪ್ರಸ್ತಾವನೆಯನ್ನು ಚರ್ಚೆ‌ಗೆತ್ತಿಕೊಂಡು, ಸಭೆಯು ಸರ್ವಾ‌ನುಮತದಿಂದ ವಿಚಾರಸಂಕಿರಣವನ್ನು ನಡೆಸಲು ತೀರ್ಮಾನಿಸಿತು. ಇದರ ತಾರ್ಕಿಕ ಬೆಳವಣಿಗೆಯಾಗಿ, ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಹಲವಾರು ಸ್ವಯಂಪ್ರೇರಿತ ಸದಸ್ಯರು ವಹಿಸಿಕೊಂಡಿದ್ದು, ವಿಚಾರಸಂಕಿರಣದ ಸಿದ್ಧತೆಗಳಲ್ಲಿ ತೊಡಗಿದ್ದಾರೆ.

ನಂತರದ ಬೆಳವಣಿಗೆಯಲ್ಲಿ, ಬೆಂಗಳೂರಿನ 'ಕ್ರೈಸ್ಟ್ ಕಾಲೇಜ್ ಆಫ್ ಲಾ', ಇವರು ಈ ವಿಚಾರಸಂಕಿರಣದ ಸಹ-ಪ್ರಾಯೋಜಕರಾಗಿರಲು ಮುಂದೆ ಬಂದಿದ್ದು, ಎರಡು ದಿನಗಳ ಈ ವಿಚಾರಸಂಕಿರಣಕ್ಕೆ ತಮ್ಮ ಕಾಲೇಜಿನ ಆಡಿಟೋರಿಯಂ ಅನ್ನು, ಹಾಗೂ ದೃಶ್ಯ, ಶ್ರವಣ ವ್ಯವಸ್ಥೆಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿರುತ್ತಾರೆ.

ಇದೀಗ ವಿವಿಧ ಸಮಿತಿಗಳಲ್ಲಿ ಆಗಿರುವ ಕಾರ್ಯ‌ಗಳ ಅವಲೋಕನ ಮಾಡುವ ಹಾಗೂ ಮುಂದಿನ ಕೆಲಸಗಳನ್ನು ಯೋಜಿಸುವ ಉದ್ದೇಶದಿಂದ, ಈ ವಿಚಾರಸಂಕಿರಣದ ಆಯೋಜಿಸುವಿಕೆಯಲ್ಲಿ ತೊಡಗಿಸಿಕೊಂಡಿರುವವರ ಹಾಗೂ ತೊಡಗಿಸಿಕೊಳ್ಳಲು ಇಚ್ಛಿಸುವವರ, ಹಾಗೂ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಎಲ್ಲ ಸದಸ್ಯರ ಸಭೆ ನಡೆಸಲಾಗುತ್ತಿದೆ. ಸಭೆಯ ವಿವರಗಳು ಕೆಳಕಂಡಂತಿವೆ.

ಸಮಯ: ಸಂಜೆ 5.30 ಕ್ಕೆ
ದಿನಾಂಕ: 23.12.2006 ಶನಿವಾರದಂದು
ಸ್ಥಳ: ಕ್ರೈಸ್ಟ್ ಕಾಲೇಜು ಆವರಣ,
ಬೆಂಗಳೂರು ಡೈರಿ ಎದುರು, ಹೊಸೂರು ರಸ್ತೆ,
ಬೆಂಗಳೂರು - 29


ಗಮನಿಸಿ: ವಿವಿಧ ಭೌಗೋಳಿಕ ನೆಲೆಗಳಲ್ಲಿರುವ ಕನ್ನಡಸಾಹಿತ್ಯ.ಕಾಂ ಬೆಂಬಲಿಗರಿಗೂ ಹಾಗೂ ಆಸಕ್ತರಿಗೂ ಈ ಸಭೆಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಡುವ ಪ್ರಯತ್ನವಾಗಿ, ಅಂತರ್ಜಾಲದ ಹಾಗೂ ವೆಬ್ಕ್ಯಾಮ್ ಬಳಸಿ ಕಾನ್ಫರೆನ್ಸಿಂಗ್ ನಡೆಸಲಾಗುತ್ತಿದೆ.

ಯಾಹೂ ಮೆಸಂಜರಿನಲ್ಲಿರುವ, ಧ್ವನಿ ಹಾಗೂ ದೃಶ್ಯ ಬಿತ್ತರಣಾ ವ್ಯವಸ್ಥೆಯನ್ನು ಬಳಸಿಕೊಳ್ಳಲು. ಆಸಕ್ತರು, ಭಾಗವಹಿಸುವ ಉದ್ದೇಶವುಳ್ಳವರು ದಯಮಾಡಿ, ತಮ್ಮ ಮೆಸಂಜರಿನ ಸ್ನೇಹಿತರ ಪಟ್ಟಿಗೆ shekarpoorna@ yahoo.com ಐಡಿಯನ್ನು ಸೇರಿಸಿಕೊಂಡು, ಶನಿವಾರದ ದಿನ ಸಭೆಯ ವೇಳೆ, ಭಾರತೀಯ ಕಾಲಮಾನ ೫.೦೦ ಕ್ಕೆ ತಮ್ಮ ಮೆಸಂಜರಿಗೆ ಲಾಗಿನ್ ಆಗಿ ಕಾನ್ಫರೆನ್ಸಿಂಗ್ನಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಅಲ್ಲದೆ, ಸದಸ್ಯರ ಬಳಿ ವೆಬ್ಕ್ಯಾಮ್ , ಮೈಕ್, ಹೆಡ್ಫೋನುಗಳ ಸೌಲಭ್ಯವಿದ್ದರೆ, ಅವುಗಳನ್ನು ಈ ಸಭೆಯಲ್ಲಿ ಬಳಸಿಕೊಳ್ಳಬೇಕಾಗಿ ಕೋರಿಕೆ..

ಈ ಪ್ರಯತ್ನವು, ತಾಂತ್ರಿಕವಾಗಿ ಲಭ್ಯವಿರುವ ಸೌಲಭ್ಯಗಳನ್ನೆಲ್ಲ ಅರ್ಥಪೂರ್ಣವಾಗಿ ಬಳಸಿಕೊಂಡು, ಕಸಾಕಾಂ ಸಮುದಾಯದಲ್ಲಿ ಹೆಚ್ಚಿನ ಸಂವಹನಕ್ಕೆ ಎಡೆಮಾಡಿಕೊಡುವ ಸಣ್ಣ ಪ್ರಯೋಗವಾಗಿದ್ದು, ಇದನ್ನು ಯಶಸ್ವಿಯಾಗಿಸುವಲ್ಲಿ ತಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇವೆ.

ಈ ವಿಚಾರಸಂಕಿರಣವು ನಿಂತನೀರಾಗಿರುವ ಚಿಂತನಾ ಕ್ಷೇತ್ರವನ್ನು, ಹಾಗೂ ತಾಂತ್ರಿಕ ಕ್ಷೇತ್ರವನ್ನು ಪರಸ್ಪರ ಮುಖಾಮುಖಿಯಾಗಿಸಿ, ಆ ಮೂಲಕ ತಂತ್ರಜ್ಞಾನವನ್ನು ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಜನೋಪಯೋಗಿಯಾಗಿಸುವ ನಿಟ್ಟಿನಲ್ಲಿ ಅಗತ್ಯವಾದ ಹೊಸ ಆಲೋಚನೆ, ಚಿಂತನೆಗಳಿಗೆ ದಿಕ್ಸೂಚಿಯಾಗಲಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ದೇಶದಲ್ಲಿ ಹೊಸ ಆರ್ಥಿ‌ಕ ಉತ್ಕ್ರಾಂತಿಗೆ ಕಾರಣವಾದ, ಬೆಂಗಳೂರು, ಕರ್ನಾ‌ಟಕ ಹಾಗೂ ಕನ್ನಡಿಗರು ಇಂತಹ ವಿಶಿಷ್ಟ ಪ್ರಯೋಗಮಾಡಹೊರಟಿರುವುದು, ಕನ್ನಡಿಗರೆಂಬ ನಮ್ಮ ಅಭಿಮಾನಕ್ಕೆ ಮತ್ತೊಂದು ಗರಿ.


ಈ ಪ್ರಯೋಗದಲ್ಲಿ ಭಾಗಿಯಾಗಲು, ಆಸಕ್ತರಾದ, ಇಂತಹ ಕಾರ್ಯ‌ವೊಂದರಲ್ಲಿ ಭಾಗವಹಿಸಿ, ನಮ್ಮ ಸಮಾಜಕ್ಕೆ ಹೆಚ್ಚು ಹತ್ತಿರವಾಗುವ, ಮುಕ್ತ ಮನಸ್ಸಿನ ಎಲ್ಲರಿಗೂ ತೆರೆದ ಬಾಗಿಲಿನ ಸ್ವಾಗತ..

ಕ್ರೈಸ್ಟ್ ಕಾಲೇಜಿನ ಆವರಣದಲ್ಲಿ ಭೇಟಿಯಾಗೋಣ..

ಶೇಖರ್ ಪೂರ್ಣ‌
ksctanda@gmail. com

ಮೊಬೈಲ್: 9321430015
ಮನೆ: ೦೮೦ ೨೬೪೮೪೬೧೭

12.04.2006

ಕನ್ನಡಸಾಹಿತ್ಯಡಾಟ್‌ಕಾಂ ಮನವಿ: ವಿವಿಧ ಕ್ಷೇತ್ರಗಳಲ್ಲಿ ಸಂಚಲನ

ಕನ್ನಡಸಾಹಿತ್ಯಡಾಟ್‌ಕಾಂ ಸಲ್ಲಿಸಲಿರುವ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿದೆ.
ಈ ವಾರ ಬೆಂಬಲ ಸೂಚಿಸಿದ ಗಣ್ಯರ ಹೆಸರುಗಳು ಇಂತಿವೆ:
೧.ಯು.ಆರ್.ಅನಂತಮೂರ್ತಿಯವರು,ಚಿಂತಕರು,ಜ್ಞಾನಪೀಠ ಪ್ರಶಸ್ತಿ ವಿಜೇತರು
೨.ಟಿ.ಎನ್.ಸೀತಾರಾಂ,ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು
೩.ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!
೪.ಸಿ ಆರ್ ಸಿಂಹ,
೫.ಜಯಂತ್ ಕಾಯ್ಕಿಣಿ, ಕಥೆಗಾರರು
೬.ಚಿರಂಜೀವಿ ಸಿಂಗ್ IAS,ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ
೭.ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು,ಎನ್‌ಎಂಕೆ‌ಆರ್‌ವಿ ಕಾಲೇಜು
೮.ಎ ಎನ್ ಪ್ರಸನ್ನ, ರಂಗಕರ್ಮಿಗಳು
೯.ಸರ್ವಮಂಗಳ, ಅನುವಾದಕಿ
೧೦.ನಾಗರಾಜ ವಸ್ತಾರೆ,ಬರಹಗಾರರು
೧೧.ರಘುನಂದನ,ರಂಗ ನಿರ್ದೇಶಕರು
೧೨.ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-'ದೇಶಕಾಲ'ಸಾಹಿತ್ಯಿಕ ಪತ್ರಿಕೆ
೧೩.ವಿಜಯ್ ಭಾರಧ್ವಾಜ್ ,ಕ್ರಿಕೆಟ್ ತಾರೆ
೧೪.ವಸುಧೇಂದ್ರ, ಬರಹಗಾರರು,'ಛಂದ' ಪುಸ್ತಕ ಪ್ರಕಾಶನ
೧೫.ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ
೧೬.ಪವಿತ್ರ ಲೋಕೇಶ್,ಹಿರಿ-ಕಿರು ತೆರೆ ಕಲಾವಿದೆ
೧೭.ರೇಖಾ ದಾಸ್, ಹಿರಿ-ಕಿರು ತೆರೆ ಕಲಾವಿದೆ
೧೮.ಕೆ ಎಸ್ ಎಲ್ ಸ್ವಾಮಿ(ರವೀ),ಚಲನಚಿತ್ರ ನಿರ್ದೇಶಕರು
೧೯.ಕುಲಶೇಖರಿ, ಬರಹಗಾ(ರ)ರ್ತಿ
೨೦.ಎಸ್ ಶೆಟ್ಟರ್, ಇತಿಹಾಸಕಾರರು
೨೧.ಪದ್ಮರಾಜ ದಂಡಾವತೆ,ಸಹ ಸಂಪಾದಕರು, ಪ್ರಜಾವಾಣಿ
೨೨.ಕೆ ಸುಚೇಂದ್ರ ಪ್ರಸಾದ್, ಕಿರು-ಹಿರಿ ತೆರೆ ಕಲಾವಿದರು
೨೩.ಮಾನಸ ನಯನ, ಸಂಗೀತಗಾರರು
೨೪.ಗಣೇಶ್, ರಂಗತಜ್ಞರು
೨೫. ಎಸ್ ಕೆ ಶ್ಯಾಮಸುಂದರ್, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ
೨೬.ಸಚ್ಛಿದಾನಂದ ಹೆಗ್ಗಡೆ ಬರಹಗಾರರು
೨೭.ಕೆ ಆರ್ ಚಂದ್ರಶೇಖರ್, ಹಿರಿಯ ವ್ಯವಸ್ಥಾಪಕರು, ಐ ಟಿ ಸಂಸ್ಥೆ('ನೂರೆಂಟು ಸುಳ್ಳು'-ಬ್ಲಾಗಕರ್ತರು)

11.22.2006

ಕನ್ನಡಸಾಹಿತ್ಯಡಾಟ್‌ಕಾಂ ಮನವಿಗೆ ಅಭೂತಪೂರ್ವ ಬೆಂಬಲ

ಕಂಪ್ಯೂಟಿಂಗ್ ವಾತಾವರಣದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕನ್ನಡಸಾಹಿತ್ಯಡಾಟ್‌ಕಾಂ ಸರ್ಕಾರಕ್ಕೆ ಸಲ್ಲಿಸಲಿರುವ ಮನವಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.
ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ಗಣಕಗಳಲ್ಲಿ, ಸೈಬರ್ ಕೆಫೆಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ (ಕಂಪ್ಯೂಟರ್) ಕನ್ನಡ ತಂತ್ರಾಶಗಳಾದ `ನುಡಿ' ಹಾಗು`ಬರಹ'ಗಳನ್ನು ಖಡ್ಡಾಯವಾಗಿ ಅನುಸ್ಥಾಪಿಸುವಂತೆ ಆದೇಶ ಕೋರಿ ಕನ್ನಡಸಾಹಿತ್ಯ.ಕಾಂ ಸರ್ಕಾರಕ್ಕೆ ಇದೇ ತಿಂಗಳು ಮನವಿಯೊಂದನ್ನು ಸಲ್ಲಿಸುತ್ತಿದೆ. ಮನವಿಗೆ ಐ.ಟಿ ವಲಯದ ನೂರಾರು ತಂತ್ರಜ್ಞರು, ವಿಜ್ಞಾನಿಗಳು, ಲೇಖಕರು, ಕವಿ-ಸಾಹಿತಿಗಳು, ಪತ್ರಕರ್ತರು, ವಿದ್ಯಾರ್ಥಿಗಳು ಹೀಗೆ ಎಲ್ಲರಿಂದ ಬೆಂಬಲದ ಮಹಾಪೂರ ಹರಿದು ಬರುತ್ತಿದೆ...
ದೂರದ ಅಮೇರಿಕ, ಆಸ್ಟ್ರೇಲಿಯ, ಸಿಂಗಾಪುರಗಳಿಂದಲೂ ಕನ್ನಡಿಗರು ಬೆಂಬಲ ವ್ಯಕ್ತಪಡಿಸಿ ಸಹಿ ಕಳಿಸುತ್ತಿದ್ದಾರೆ.
ಶಿವಮೊಗ್ಗ, ಮೈಸೂರು, ತುಮಕೂರು ಮುಂತಾದೆಡೆಗಳಲ್ಲೂ ಕನ್ನಡಸಾಹಿತ್ಯ.ಕಾಂ ಬಳಗದ ಸದಸ್ಯರು ಬೆಂಬಲದ ಸಹಿಗಳನ್ನು ಸಂಗ್ರಹಿಸುತ್ತಿದ್ದಾರೆ.
ಈಗಾಗಲೇ ಮನವಿಗೆ ಬೆಂಬಲ ಸೂಚಿಸಿ ಸಹಿ ಮಾಡಿರುವ ಗಣ್ಯರ ಪಟ್ಟಿ ಕೆಳಕಂಡಂತಿದೆ.
ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು

ಕನ್ನಡಸಾಹಿತ್ಯ.ಕಾಂ ಮನವಿಗೆ ಬೆಂಬಲ ಸೂಚಿಸಿ ಸಹಿ ಹಾಕಿರುವವರ ಪಟ್ಟಿಯಲ್ಲಿನ ಗಣ್ಯರು:
ಅಕ್ಷರ ಕೆ ವಿ,ನೀನಾಸಂ, ಹೆಗ್ಗೋಡು, 'ಅಕ್ಷರ' ಪ್ರಕಾಶನ
ಅನಂತ ಮೂರ್ತಿ ಯು ಆರ್, ಚಿಂತಕರು, ಜ್ಞಾನಪೀಠ ಪ್ರಶಸ್ತಿ ವಿಜೇತರು
ಅಶ್ವಿನಿ, ಕಾದಂಬರಿಗಾರ್ತಿ ,
ಕುಲಶೇಖರಿ, ಬರಹಗಾ(ರ)ರ್ತಿ
ಕೃಷ್ಣ ಪ್ರಸಾದ್ - ಸಂಪಾದಕರು, ವಿಜಯ ಟೈಮ್ಸ್
ಕೃಷ್ಣಮೂರ್ತಿ-ಜನರಲ್ ಮೇನೇಜರ್, ಮ್ಯಾಕ್‌ಮಿಲನ್(ಇಂಡಿಯ)ಲಿಮಿಟೆಡ್
ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು 'ಪ್ರಜಾನುಡಿ' ದಿನಪತ್ರಿಕೆ, ಮೈಸೂರು
ಗಂಗಾಧರ ಮೊದಲಿಯಾರ್, ಸುದ್ಧಿ ಸಂಪಾದಕರು, ಪ್ರಜಾವಾಣಿ
ಗಣೇಶ್, ರಂಗತಜ್ಞರು
ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು
ಗೀತಾ ನಾಗಭೂಷಣ್-ಲೇಖಕಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ
ಚಂದ್ರಶೇಖರ್ ಕೆ ಆರ್-ಲೇಖಕರು
ಚಂದ್ರಶೇಖರ್ ಬಿ ಕೆ,ಮಾಜಿ ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು
ಚಂದ್ರಶೇಖರ ಪಾಟೀಲ, ಅಧ್ಯಕ್ಷರು, ಕನ್ನಡಸಾಹಿತ್ಯ ಪರಿಷತ್
ಚಿ ವಿ ಶ್ರೀನಾಥಶಾಸ್ತ್ರಿ-ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್
ಚಿರಂಜೀವಿ ಸಿಂಗ್ ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ
ಜಯಂತ್ ಕಾಯ್ಕಿಣಿ, ಕಥೆಗಾರರು
ದಿವಾಕರ್ ಎಸ್, ಲೇಖಕರು-ಪತ್ರಕರ್ತರು
ದೊಡ್ಡರಂಗೇ ಗೌಡ- ಕವಿ ಮತ್ತು ಗೀತ ರಚನೆಕಾರರು,
ನರಸಿಂಹಮೂರ್ತಿ ಜಿ ಎನ್-ಕಾರ್ಯದರ್ಶಿಗಳು-ಕನ್ನಡ ಗಣಕ ಪರಿಷತ್
ನಾ ಡಿಸೋಜ, ಪ್ರಸಿದ್ಧ ಸಾಹಿತಿಗಳು
ನಾಗಣ್ಣ ಎಸ್-ಸಂಪಾದಕರು, ಪ್ರಜಾಪ್ರಗತಿ ದಿನಪತ್ರಿಕೆ
ನಾಗರಾಜ ವಸ್ತಾರೆ, ಬರಹಗಾರರು
ನಾಗಾಭರಣ ಟಿ ಎಸ್, ಪ್ರಸಿದ್ಧ ಚಿತ್ರ ನಿರ್ದೇಶಕರು
ಪ ಸ ಕುಮಾರ್, ಕಲಾವಿದರು, ಕನ್ನಡ ಪ್ರಭ,
ಪದ್ಮರಾಜ ದಂಡಾವತೆ, ಸಹ ಸಂಪಾದಕರು, ಪ್ರಜಾವಾಣಿ
ಪವಿತ್ರ ಲೋಕೇಶ್, ಹಿರಿ-ಕಿರು ತೆರೆ ಕಲಾವಿದೆ
ಪೂರ್ಣಿಮ ಆರ್ - ಸಂಪಾದಕರು , ಉದಯವಾಣಿ
ಪೊನ್ನಪ್ಪ ಎಂ ಎ-ಅಧ್ಯಕ್ಷರು, ಬೆಂಗಳೂರು ಪ್ರೆಸ್ ಕ್ಲಬ್
ಪ್ರಸನ್ನ ಕೆ ವಿ, ರಂಗಕರ್ಮಿಗಳು
ಪ್ರೇಮಾ ಕಾರಾಂತ್ - ಚಲನಚಿತ್ರ ನಿರ್ದೇಶಕರು, ರಂಗ ನಿರ್ದೆಶಕರು
ಬಸವರಾಜು ಜಿ ಪಿ, ಮುಖ್ಯ ಉಪ ಸಂಪಾದಕರು, ಮಯೂರ ಮಾಸಿಕ,
ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ
ಬಾಗೇಶ್ರಿ - ಮುಖ್ಯ ವರದಿಗಾರರು, ದಿ ಹಿಂದೂ
ಭಾಸ್ಕರ ರಾವ್ ಎಂ ಕೆ, ಮುಖ್ಯ ಉಪಸಂಪಾದಕರು, ಪ್ರಜಾವಾಣಿ,
ಭೂಮಿಕ, ಉಪ ಸಂಪಾದಕರು, ದಿ ಹಿಂದೂ,
ಮಂಜುಳ ಸಿ ಜಿ, ಸಹಾಯಕ ಸಂಪಾದಕರು, ಸುಧಾ ವಾರಪತ್ರಿಕೆ,
ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು, ಎನ್‌ಎಂಕೆ‌ಆರ್‌ವಿ ಕಾಲೇಜು
ಮಲ್ಲಿಕಾರ್ಜುನಯ್ಯ, ಸುದ್ಧಿ ಸಂಪಾದಕರು, ಕನ್ನಡ ಪ್ರಭ,
ಮಹಾಬಲಮೂರ್ತಿ ಕೊಡ್ಲೆಕೆರೆ-ಲೇಖಕರು
ಮಾನಸ ನಯನ, ಸಂಗೀತಗಾರರು
ಯಶವಂತ ಚಿತ್ತಾಲ, ಹಿರಿಯ ಲೇಖಕರು,
ರಂಗನಾಥ್ - ಸಂಪಾದಕರು, ಕನ್ನಡಪ್ರಭ
ರಘುನಂದನ,ರಂಗ ನಿರ್ದೇಶಕರು
ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!
ರವಿ ಭಟ್-ಕಿರುತೆರೆ ಕಲಾವಿದರು
ರಾಜಶೇಖರ ಕೋಟಿ, ಸಂಪಾದಕರು, 'ಆಂದೋಲನ' ದಿನಪತ್ರಿಕೆ, ಮೈಸೂರು
ರಾಮಕೃಷ್ಣ ಉಪಾಧ್ಯ ಪಿ- ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್
ರಾಮಕೃಷ್ಣ ಉಪಾಧ್ಯ-ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್ ದೈನಿಕ
ರಾಮಕೃಷ್ಣ ಎಸ್ ಅರ್, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ,
ರೇಖಾ ರಾವ್, ಹಿರಿ-ಕಿರು ತೆರೆ ಕಲಾವಿದೆ
ಲಕ್ಷ್ಮಿ ಚಂದ್ರಶೇಖರ್-ರಂಗಭೂಮಿ, ಕಿರುತೆರೆ ಕಲಾವಿದೆ ಹಾಗು ಅನುವಾದಕಿ
ಲಿಂಗದೇವರು ಹಳೆ ಮನೆ, ಪ್ರಾಧ್ಯಾಪಕರು, ಸಿ ಐ ಐ ಎಲ್, ಮೈಸೂರು
ಲಿಂಗದೇವರು ಹಳೆಮನೆ - ಚಲನಚಿತ್ರ ನಿರ್ದೇಶಕರು (ಮೌನಿ)
ವಸುಧೇಂದ್ರ, ಬರಹಗಾರರು, 'ಛಂದ' ಪುಸ್ತಕ ಪ್ರಕಾಶನ
ವಿಜಯ್ ಭಾರಧ್ವಾಜ್, ಕ್ರಿಕೆಟ್ ತಾರೆ
ವಿಜಯಾ, ಹಿರಿಯ ಪತ್ರಕರ್ತರು,
ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-'ದೇಶಕಾಲ'ಸಾಹಿತ್ಯಿಕ ಪತ್ರಿಕೆ
ವಿಶ್ವೇಶ ತೀರ್ಥ ಸ್ವಾಮೀಜಿ - ಪೇಜಾವರ ಮಠ, ಉಡುಪಿ,
ವಿಶ್ವೇಶರ ಭಟ್ - ಸಂಪಾದಕರು, ವಿಜಯ ಕರ್ನಾಟಕ
ವೆಂಕಟೇಶ್ ವಿ, ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,
ಶರಧಿಚಂದ್ರ ಬಾಬು-ಪಾಲುದಾರರು, `ಅದಮ್ಯ' ಟೆಕ್ನಾಲಜೀಸ್
ಶಿಲ್ಪ, ಹಿರಿಯ ಉಪ ಸಂಪಾದಕರು, ದಿ ಹಿಂದೂ,
ಶಿವರುದ್ರಪ್ಪ ಜಿ ಎಸ್ - ರಾಷ್ಟ್ರ ಕವಿ,
ಶೆಟ್ಟರ್ ಎಸ್, ಇತಿಹಾಸಕಾರರು
ಶೇಷಾದ್ರಿ ಪಿ - ಚಲನ ಚಿತ್ರ ನಿರ್ದೇಶಕರು
ಶ್ಯಾಮಸುಂದರ್ ಎಸ್ ಕೆ, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ, ಅಂತರ್ಜಾಲ ಪತ್ರಿಕೆ
ಸಚ್ಛಿದಾನಂದ ಹೆಗ್ಗಡೆ, ಬರಹಗಾರರು
ಸರ್ವಮಂಗಳ, ಅನುವಾದಕಿ
ಸಿಂಹ ಸಿ ಆರ್, ನಟ, ಚಲನಚಿತ್ರ-ರಂಗ ನಿರ್ದೇಶಕರು
ಸೀತಾರಾಂ ಟಿ ಎನ್, ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು
ಸುಗಂಧಿ- ಸಹಾಯಕ ಸಂಪದಕರು, ದಿ ಹಿಂದೂ
ಸುಚೇಂದ್ರ ಪ್ರಸಾದ್ ಕೆ, ಕಿರು-ಹಿರಿ ತೆರೆ ಕಲಾವಿದರು
ಸ್ವಾಮಿ ಕೆ ಎಸ್ ಎಲ್(ರವೀ), ಚಲನಚಿತ್ರ ನಿರ್ದೇಶಕರು
ಕನ್ನಡಸಾಹಿತ್ಯ.ಕಾಂ ಮನವಿಗೆ ಬೆಂಬಲ ಸೂಚಿಸಿ ಸಹಿ ಹಾಕಿರುವವರ ಪಟ್ಟಿಯಲ್ಲಿನ ಗಣ್ಯರು:
ಅಕ್ಷರ ಕೆ ವಿ,ನೀನಾಸಂ, ಹೆಗ್ಗೋಡು, 'ಅಕ್ಷರ' ಪ್ರಕಾಶನ
ಅನಂತ ಮೂರ್ತಿ ಯು ಆರ್, ಚಿಂತಕರು, ಜ್ಞಾನಪೀಠ ಪ್ರಶಸ್ತಿ ವಿಜೇತರು
ಅಶ್ವಿನಿ, ಕಾದಂಬರಿಗಾರ್ತಿ ,
ಕುಲಶೇಖರಿ, ಬರಹಗಾ(ರ)ರ್ತಿ
ಕೃಷ್ಣ ಪ್ರಸಾದ್ - ಸಂಪಾದಕರು, ವಿಜಯ ಟೈಮ್ಸ್
ಕೃಷ್ಣಮೂರ್ತಿ-ಜನರಲ್ ಮೇನೇಜರ್, ಮ್ಯಾಕ್‌ಮಿಲನ್(ಇಂಡಿಯ)ಲಿಮಿಟೆಡ್
ಕೃಷ್ಣವಟ್ಟಮ್ , ಪ್ರಧಾನ ಸಂಪಾದಕರು 'ಪ್ರಜಾನುಡಿ' ದಿನಪತ್ರಿಕೆ, ಮೈಸೂರು
ಗಂಗಾಧರ ಮೊದಲಿಯಾರ್, ಸುದ್ಧಿ ಸಂಪಾದಕರು, ಪ್ರಜಾವಾಣಿ
ಗಣೇಶ್, ರಂಗತಜ್ಞರು
ಗಿರೀಶ್ ಕಾಸರವಳ್ಳಿ - ಚಲನಚಿತ್ರ ನಿರ್ದೇಶಕರು
ಗೀತಾ ನಾಗಭೂಷಣ್-ಲೇಖಕಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ
ಚಂದ್ರಶೇಖರ್ ಕೆ ಆರ್-ಲೇಖಕರು
ಚಂದ್ರಶೇಖರ್ ಬಿ ಕೆ,ಮಾಜಿ ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು
ಚಂದ್ರಶೇಖರ ಪಾಟೀಲ, ಅಧ್ಯಕ್ಷರು, ಕನ್ನಡಸಾಹಿತ್ಯ ಪರಿಷತ್
ಚಿ ವಿ ಶ್ರೀನಾಥಶಾಸ್ತ್ರಿ-ಪ್ರಧಾನ ಕಾರ್ಯದರ್ಶಿ, ಕನ್ನಡ ಗಣಕ ಪರಿಷತ್
ಚಿರಂಜೀವಿ ಸಿಂಗ್ ನಿವೃತ್ತ ಮುಖ್ಯಕಾರ್ಯದರ್ಶಿಗಳು,ಕರ್ನಾಟಕ ಸರ್ಕಾರ
ಜಯಂತ್ ಕಾಯ್ಕಿಣಿ, ಕಥೆಗಾರರು
ದಿವಾಕರ್ ಎಸ್, ಲೇಖಕರು-ಪತ್ರಕರ್ತರು
ದೊಡ್ಡರಂಗೇ ಗೌಡ- ಕವಿ ಮತ್ತು ಗೀತ ರಚನೆಕಾರರು,
ನರಸಿಂಹಮೂರ್ತಿ ಜಿ ಎನ್-ಕಾರ್ಯದರ್ಶಿಗಳು-ಕನ್ನಡ ಗಣಕ ಪರಿಷತ್
ನಾ ಡಿಸೋಜ, ಪ್ರಸಿದ್ಧ ಸಾಹಿತಿಗಳು
ನಾಗಣ್ಣ ಎಸ್-ಸಂಪಾದಕರು, ಪ್ರಜಾಪ್ರಗತಿ ದಿನಪತ್ರಿಕೆ
ನಾಗರಾಜ ವಸ್ತಾರೆ, ಬರಹಗಾರರು
ನಾಗಾಭರಣ ಟಿ ಎಸ್, ಪ್ರಸಿದ್ಧ ಚಿತ್ರ ನಿರ್ದೇಶಕರು
ಪ ಸ ಕುಮಾರ್, ಕಲಾವಿದರು, ಕನ್ನಡ ಪ್ರಭ,
ಪದ್ಮರಾಜ ದಂಡಾವತೆ, ಸಹ ಸಂಪಾದಕರು, ಪ್ರಜಾವಾಣಿ
ಪವಿತ್ರ ಲೋಕೇಶ್, ಹಿರಿ-ಕಿರು ತೆರೆ ಕಲಾವಿದೆ
ಪೂರ್ಣಿಮ ಆರ್ - ಸಂಪಾದಕರು , ಉದಯವಾಣಿ
ಪೊನ್ನಪ್ಪ ಎಂ ಎ-ಅಧ್ಯಕ್ಷರು, ಬೆಂಗಳೂರು ಪ್ರೆಸ್ ಕ್ಲಬ್
ಪ್ರಸನ್ನ ಕೆ ವಿ, ರಂಗಕರ್ಮಿಗಳು
ಪ್ರೇಮಾ ಕಾರಾಂತ್ - ಚಲನಚಿತ್ರ ನಿರ್ದೇಶಕರು, ರಂಗ ನಿರ್ದೆಶಕರು
ಬಸವರಾಜು ಜಿ ಪಿ, ಮುಖ್ಯ ಉಪ ಸಂಪಾದಕರು, ಮಯೂರ ಮಾಸಿಕ,
ಬಾ ಕಿ ನ ,ಸಂಪಾದಕರು, ಗಾಂಧಿ ಬಜಾರ್ ಪತ್ರಿಕೆ
ಬಾಗೇಶ್ರಿ - ಮುಖ್ಯ ವರದಿಗಾರರು, ದಿ ಹಿಂದೂ
ಭಾಸ್ಕರ ರಾವ್ ಎಂ ಕೆ, ಮುಖ್ಯ ಉಪಸಂಪಾದಕರು, ಪ್ರಜಾವಾಣಿ,
ಭೂಮಿಕ, ಉಪ ಸಂಪಾದಕರು, ದಿ ಹಿಂದೂ,
ಮಂಜುಳ ಸಿ ಜಿ, ಸಹಾಯಕ ಸಂಪಾದಕರು, ಸುಧಾ ವಾರಪತ್ರಿಕೆ,
ಮನು ಚಕ್ರವರ್ತಿ ಎನ್ ,ಪ್ರಾಧ್ಯಾಪಕರು, ಎನ್‌ಎಂಕೆ‌ಆರ್‌ವಿ ಕಾಲೇಜು
ಮಲ್ಲಿಕಾರ್ಜುನಯ್ಯ, ಸುದ್ಧಿ ಸಂಪಾದಕರು, ಕನ್ನಡ ಪ್ರಭ,
ಮಹಾಬಲಮೂರ್ತಿ ಕೊಡ್ಲೆಕೆರೆ-ಲೇಖಕರು
ಮಾನಸ ನಯನ, ಸಂಗೀತಗಾರರು
ಯಶವಂತ ಚಿತ್ತಾಲ, ಹಿರಿಯ ಲೇಖಕರು,
ರಂಗನಾಥ್ - ಸಂಪಾದಕರು, ಕನ್ನಡಪ್ರಭ
ರಘುನಂದನ,ರಂಗ ನಿರ್ದೇಶಕರು
ರವಿ ಬೆಳಗೆರೆ, ಸಂಪಾದಕರು, ಹಾಯ್ ಬೆಂಗಳೂರ್!
ರವಿ ಭಟ್-ಕಿರುತೆರೆ ಕಲಾವಿದರು
ರಾಜಶೇಖರ ಕೋಟಿ, ಸಂಪಾದಕರು, 'ಆಂದೋಲನ' ದಿನಪತ್ರಿಕೆ, ಮೈಸೂರು
ರಾಮಕೃಷ್ಣ ಉಪಾಧ್ಯ ಪಿ- ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್
ರಾಮಕೃಷ್ಣ ಉಪಾಧ್ಯ-ಸಹಾಯಕ ಸಂಪಾದಕರು, ಡೆಕ್ಕನ್ ಹೆರಾಲ್ಡ್ ದೈನಿಕ
ರಾಮಕೃಷ್ಣ ಎಸ್ ಅರ್, ಸುದ್ಧಿ ಸಂಪಾದಕರು, ಸಂಡೇ ಮಿಡ್ ಡೇ,
ರೇಖಾ ರಾವ್, ಹಿರಿ-ಕಿರು ತೆರೆ ಕಲಾವಿದೆ
ಲಕ್ಷ್ಮಿ ಚಂದ್ರಶೇಖರ್-ರಂಗಭೂಮಿ, ಕಿರುತೆರೆ ಕಲಾವಿದೆ ಹಾಗು ಅನುವಾದಕಿ
ಲಿಂಗದೇವರು ಹಳೆ ಮನೆ, ಪ್ರಾಧ್ಯಾಪಕರು, ಸಿ ಐ ಐ ಎಲ್, ಮೈಸೂರು
ಲಿಂಗದೇವರು ಹಳೆಮನೆ - ಚಲನಚಿತ್ರ ನಿರ್ದೇಶಕರು (ಮೌನಿ)
ವಸುಧೇಂದ್ರ, ಬರಹಗಾರರು, 'ಛಂದ' ಪುಸ್ತಕ ಪ್ರಕಾಶನ
ವಿಜಯ್ ಭಾರಧ್ವಾಜ್, ಕ್ರಿಕೆಟ್ ತಾರೆ
ವಿಜಯಾ, ಹಿರಿಯ ಪತ್ರಕರ್ತರು,
ವಿವೇಕ ಶಾನಭಾಗ, ಕಥೆಗಾರರು, ಸಂಪಾದಕರು-'ದೇಶಕಾಲ'ಸಾಹಿತ್ಯಿಕ ಪತ್ರಿಕೆ
ವಿಶ್ವೇಶ ತೀರ್ಥ ಸ್ವಾಮೀಜಿ - ಪೇಜಾವರ ಮಠ, ಉಡುಪಿ,
ವಿಶ್ವೇಶರ ಭಟ್ - ಸಂಪಾದಕರು, ವಿಜಯ ಕರ್ನಾಟಕ
ವೆಂಕಟೇಶ್ ವಿ, ಪತ್ರಕರ್ತರು, ಅಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,
ಶರಧಿಚಂದ್ರ ಬಾಬು-ಪಾಲುದಾರರು, `ಅದಮ್ಯ' ಟೆಕ್ನಾಲಜೀಸ್
ಶಿಲ್ಪ, ಹಿರಿಯ ಉಪ ಸಂಪಾದಕರು, ದಿ ಹಿಂದೂ,
ಶಿವರುದ್ರಪ್ಪ ಜಿ ಎಸ್ - ರಾಷ್ಟ್ರ ಕವಿ,
ಶೆಟ್ಟರ್ ಎಸ್, ಇತಿಹಾಸಕಾರರು
ಶೇಷಾದ್ರಿ ಪಿ - ಚಲನ ಚಿತ್ರ ನಿರ್ದೇಶಕರು
ಶ್ಯಾಮಸುಂದರ್ ಎಸ್ ಕೆ, ಸಂಪಾದಕರು, ದಟ್ಸ್‌ಕನ್ನಡಡಾಟ್‌ಕಾಂ, ಅಂತರ್ಜಾಲ ಪತ್ರಿಕೆ
ಸಚ್ಛಿದಾನಂದ ಹೆಗ್ಗಡೆ, ಬರಹಗಾರರು
ಸರ್ವಮಂಗಳ, ಅನುವಾದಕಿ
ಸಿಂಹ ಸಿ ಆರ್, ನಟ, ಚಲನಚಿತ್ರ-ರಂಗ ನಿರ್ದೇಶಕರು
ಸೀತಾರಾಂ ಟಿ ಎನ್, ಪ್ರಸಿದ್ಧ ಕಿರು-ಹಿರಿ ತೆರೆ ನಿರ್ದೇಶಕರು
ಸುಗಂಧಿ- ಸಹಾಯಕ ಸಂಪದಕರು, ದಿ ಹಿಂದೂ
ಸುಚೇಂದ್ರ ಪ್ರಸಾದ್ ಕೆ, ಕಿರು-ಹಿರಿ ತೆರೆ ಕಲಾವಿದರು
ಸ್ವಾಮಿ ಕೆ ಎಸ್ ಎಲ್(ರವೀ), ಚಲನಚಿತ್ರ ನಿರ್ದೇಶಕರು

- ಮಿಗಿಲಾಗಿ ನೂರಾರು ಸಾರ್ವಜನಿಕರಲ್ಲದೆ, ಮಾಹಿತಿ ತಂತ್ರಜ್ಞಾನವಲಯದಲ್ಲಿ ಉದ್ಯೋಗನಿರತರಾಗಿರುವವರು.
ಮನವಿಗೆ ನಿಮ್ಮದೊಂದು ಬೆಂಬಲವಿದೆಯೆಂದರೆ http://www.baraha.com/anakru/manavi.pdf ಅಥವಾ http://kanlit.com/manavi.pdfನಲ್ಲಿರುವ ಪಿಡಿಎಫ್ ಪುಟಗಳನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿರಿ. ನಿಮ್ಮ ಸ್ನೇಹಿತರಾದಿಯಾಗಿ ಬೆಂಬಲ ಸೂಚಿಸುವವರೆಲ್ಲರ ಸಹಿ ಮಾಡಿಸಿ, ಮನವಿಪತ್ರದೊಡನಿರುವ ವಿಳಾಸಕ್ಕೆ ಕೊರಿಯರ್ ಮೂಲಕ ಕಳಿಸಿ.

11.21.2006

kannadasaahithya.com movement for kannada computing environment

ಮಾನ್ಯ ಮುಖ್ಯ ಮಂತ್ರಿಗಳು ಹಾಗು ಮಾಹಿತಿ ತಂತ್ರಜ್ಞಾನ ಸಚಿವರು,
ಕರ್ನಾಟಕ ಸರ್ಕಾರ

ಮಾನ್ಯ ಪ್ರಾಥಮಿಕ ಶಿಕ್ಷಣ ಸಚಿವರು
ಕರ್ನಾಟಕ ಸರ್ಕಾರ

ಮಾನ್ಯ ಪ್ರೌಢ ಶಿಕ್ಷಣ ಸಚಿವರು
ಕರ್ನಾಟಕ ಸರ್ಕಾರ

ಅಧ್ಯಕ್ಷರು
ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಕರ್ನಾಟಕ ಸರ್ಕಾರ



ವಿಷಯ: ಪ್ರಾಥಮಿಕ ಹಾಗು ಪ್ರೌಢ ಶಾಲೆಗಳ ಗಣಕಗಳಲ್ಲಿ, ಸೈಬೆರ್ ಕೆಫೆಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ (ಕಂಪ್ಯೂಟರ್) ಕನ್ನಡ ತಂತ್ರಾಶಗಳಾದ `ನುಡಿ' ಹಾಗು`ಬರಹ'ಗಳನ್ನು ಖಡ್ಡಾಯವಾಗಿ ಅನುಸ್ಥಾಪಿಸುವಂತೆ ಆದೇಶ ಕೋರಿ ಮನವಿ ಪತ್ರ.

ಮಾನ್ಯರೆ,

ನಮ್ಮ ಕರ್ನಾಟಕ ರಾಜ್ಯ ಮಾಹಿತಿ ತಂತ್ರಜ್ಞಾನ ವ್ಯಾಪ್ತಿಯಲ್ಲಿನ ಪರಿಣತಿ, ವಾಣಿಜ್ಯ, ಸೇವೆಯ ಕ್ಷೇತ್ರಗಳಲ್ಲಿ - ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನ ನಕಾಶೆಯಲ್ಲಿ ಹೆಗ್ಗುರುತನ್ನು ಮೂಡಿಸಿರುವ ವಿಷಯ, ನಮಗೆಲ್ಲ ಹೆಮ್ಮೆಯ ವಿಷಯ. ಇದಕ್ಕೆ ರಾಜ್ಯ ಸರ್ಕಾರದ ನೀತಿ-ನಿಯಮಾವಳಿಗಳೂ ಕಾರಣವೆನ್ನುವುದನ್ನು ನಾವೆಲ್ಲ ನಂಬಿದ್ದೇವೆ.

ಆದರೆ, ಕನ್ನಡ ಅಥವ ಸ್ಥಳೀಯ ದೇಸಗತಿಗೆ ತಕ್ಕಂತೆ ಕಂಪ್ಯೂಟರ್ ಪರಿಸರ ನಿರ್ಮಾಣವಾಗದೆ, "ಕೇವಲ ಇಂಗ್ಲಿಷ್ ಪರಿಸರ" ಮಾತ್ರ ಸೃಷ್ಟಿಯಾಗಿ ಹೋಗಿರುವ ವಾತಾವರಣ ಆತಂಕಕಾರಿಯೂ ಆಗಿದೆ ಎನ್ನುವುದರಲ್ಲಿಯೂ ಸಂಶಯವಿಲ್ಲ. ಮಕ್ಕಳನ್ನು ಕೇಳಿದರೆ: "ವರ್ಡ್, ಎಕ್ಸೆಲ್, ಪೈಂಟ್ ಇತ್ಯಾದಿ ಬರುತ್ತದೆ.." ಎಂದೆನ್ನುತ್ತಾರೆ. "ಕನ್ನಡವನ್ನು ಕಂಪ್ಯೂಟರ್‌ನಲ್ಲಿ ನೋಡೀದ್ದೀರ?" - ಎಂದು ಪ್ರಶ್ನಿಸಿದಾಗ ಪೆಚ್ಚು ಮುಖಗಳನ್ನು ಹಾಕಿಕೊಂಡು ನಿಲ್ಲುತ್ತಾರೆ.

ಕರ್ನಾಟಕ ಸರ್ಕಾರ, ಶಿಕ್ಷಣ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಈ ಹತಾಶ ಭಾವನೆಯನ್ನು ಮಾರ್ಪಡಿಸಬಲ್ಲದು ಎಂದು ನಂಬುತ್ತೇವೆ. ಈ ಹತಾಶ ಪರಿಸ್ಥಿತಿಯಲ್ಲಿ ಬದಲಾವಣೆಗಳನ್ನು ಜಾರಿಗೆ ತರುವ ಮೂಲಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ, ಕನ್ನಡ ಭಾಷೆ, ಸಂಸ್ಕೃತಿ ಪ್ರಗತಿಪರವಾಗುತ್ತದೆಂದು ನಾವೆಲ್ಲ ನಂಬಿದ್ದೇವೆ. ಹೀಗಾಗಿ ಕೆಳಕಂಡ ಬೇದಿಕೆಗಳುಳ್ಳ ಮನವಿಯನ್ನು ಪರಿಶೀಲಸ ಬೇಕಾಗಿ ಕೋರುತ್ತಾ, ಕನ್ನಡಸಾಹಿತ್ಯ.ಕಾಂ ಎಲ್ಲ ಬೆಂಬಲಿಗರ ಬಳಗ ಪ್ರಸ್ತಾವನೆ/ಮನವಿಯನ್ನು ಈ ರೀತಿ ನಿಮ್ಮ ಮುಂದಿಡುತ್ತಿದೆ, ಜೊತೆಗೆ ಈ ಮನವಿಗೆ ಬೆಂಬಲಿಸಿರುವವರ ಸಹಿಯುಳ್ಳ ಪತ್ರವನ್ನೂ ಲಗತ್ತಿಸಿದ್ದೇವೆ:

ಕಂಪ್ಯೂಟರ್ ಕಲಿಸುವ ಎಲ್ಲ (ಇಂಗ್ಲಿಷ್ ಮಾಧ್ಯಮವೂ ಸೇರಿದಂತೆ) ಪ್ರಾಥಮಿಕ ಹಾಗು ಪ್ರೌಢ ಶಾಲೆಗಳಲ್ಲಿರುವ ಕಂಪ್ಯೂಟರ್‌ಗಳಲ್ಲಿ ಕನ್ನಡ/ಪ್ರಾಂತೀಯ/ರಾಜ್ಯ ಭಾಷೆಗಳ ತಂತ್ರಾಂಶಗಳನ್ನು ಅನುಸ್ಥಾಪಿಸುವುದನ್ನು ಖಡ್ಡಾಯ ಮಾಡಿ ಆದೇಶಿಸಬೇಕು.
ತಿಂಗಳಿಗೆ ಒಂದು ಗಂಟೆ ಕಾಲವನ್ನು ವಿದ್ಯಾರ್ಥಿಗಳಿಗೆ - ಅನುಸ್ಥಾಪಿಸಿದ ತಂತ್ರಾಂಶದ ಸಾಧ್ಯತೆಯನ್ನು ತೋರಿಸಿಕೊಡುವಂತೆ ಪಾಠ ಮಾಡಬೇಕು.
ಇದು ಮುಂದಿನ ವರ್ಷವೇ ಜಾರಿಗೊಳಿಸುವಂತೆ ಆದೇಶವಿರಬೇಕು.
ಪಠ್ಯಕ್ರಮವನ್ನು ರಚಿಸಲು ತಜ್ಞರ ಸಮಿತಿಯೊಂದನ್ನು ಕೂಡಲೆ ರಚಿಸಬೇಕು.
ಕರ್ನಾಟಕದ ಎಲ್ಲ ಸೈಬರ್ ಕೆಫೆಗಳಲ್ಲಿ `ಬರಹ' ಹಾಗು 'ನುಡಿ' ಕನ್ನಡ ತಂತ್ರಾಂಶಗಳನ್ನು ಸ್ಥಾಪಿಸುವುದನ್ನು ಖಡ್ಡಾಯವಾಗಬೇಕು.
ಕರ್ನಾಟಕದಲ್ಲಿ ಮಾರಾಟವಾಗುವ ಯಾವುದೇ ಕಂಪ್ಯೂಟ‍ರ್‌ನಲ್ಲಾಗಲಿ ಅದು ಬಳಕೆದಾರನಿಗೆ ತಲುಪುವ ಮುನ್ನ `ಬರಹ', `ನುಡಿ' ಅಥವ ಉಚಿತವಾಗಿ ಲಭ್ಯವಿರುವ ಸ್ಥಳೀಯ ಭಾಷೆಗಳ ಯಾವುದೇ ತಂತ್ರಾಶಗಳಿದ್ದರೂ ಅವುಗಳನ್ನು ಸ್ಥಾಪಿಸಿರಬೇಕು.


- ಈ ಮೇಲಿನ ಮನವಿಗೆ ಸಕಾರಾತ್ಮಕವಾದ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾ, ಜಾರಿಗೆ ತರುವಲ್ಲಿ ನಮ್ಮ ಮಿತಿಯೊಳಗಿನ ಎಲ್ಲ ಸಹಕಾರವನ್ನೂ ನೀಡುತ್ತೇವೆ ಎನ್ನುವ ಭರವಸೆಯೊಂದಿಗಿನ

ನಿಮ್ಮ ವಿಶ್ವಾಸಿಗಳು
ಚಂದ್ರಶೇಖರ್ ವಿ
(ಶೇಖರ್‌ಪೂರ್ಣ)
ಕನ್ನಡಸಾಹಿತ್ಯ.ಕಾಂ ಸಂಸ್ಥಾಪಕ-ಸಂಪಾದಕ

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಪರವಾಗಿ,

ಎಂ ಕಿರಣ್

ರಕ್ಷಿತ್ ಎಂ ಅರ್

ಲಾವಣ್ಯ
ಮೈಸೂರು

ಕೃಪೇಶ್
ಯು ಎಸ್ ಎ


ಎಲ್ಲರಿಗೂ ನಮಸ್ಕಾರ,

ಮೇಲಿನ ಮನವಿಗೆ ಎಲ್ಲರ ಬೆಂಬಲವನ್ನು ಕೋರುತ್ತಿದ್ದೇವೆ. "ಕನ್ನಡಸಾಹಿತ್ಯ.ಕಾಂ" ಸಲ್ಲಿಸಲಿರುವ ಮನವಿಯನ್ನು ಪ್ರಿಂಟ್‌ಔಟ್ ಮಾಡಿಕೊಂಡು ನಿಮ್ಮ ಸ್ನೇಹಿತರು, ಬಂಧು ಬಳಗದವರು, ಸಹೊದ್ಯೋಗಿಗಳ ಸಹಿ ಮಾಡಿಸಿ, ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ಮನವಿ. ದಿನಾಂಕ ೩೦-೧೧-೨೦೦೬ರಂದು ಈ ಮನವಿಯನ್ನು ಸಲ್ಲಿಸಲು ಉದ್ದೇಶಿಸಲಾಗಿದೆ.

ಆದುದರಿಂದ ಸಾಧ್ಯವಿದ್ದಷ್ಟು ಬೇಗ ಕಳುಹಿಸಿಕೊಡಿ. ನೀವು ಅಂಚೆ/ಕೊರಿಯರ್ ಮಾಡಿದೊಡನೆ ksctanda@gmail.comಗೆ ಮಾಹಿತಿ ನೀಡಿದರೆ ನವೆಂಬರ್ ೩೦ ದಾಟಿದರೂ ಕಾಯಬಹುದು.

ಬೆಂಗಳೂರು ಹಾಗು ಸುತ್ತಮುತ್ತಲಿನವರು ಒಂದು ದಿನ ಸಭೆ ಸೇರಿ ಸಹಿಸಂಗ್ರಹ ಸಪ್ತಾಹದಲ್ಲಿ ಸಹಿಯಾದ ಮನವಿ ಪತ್ರಗಳನ್ನೆಲ್ಲ ಸೇರಿಸಿ, ಆಯೋಗವೊಂದನ್ನು ರಚಿಸಿ, ಆಯೋಗದ ಮೂಲಕ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

ಮನವಿ ಸಲ್ಲಿಸಿದನಂತರ ಮಾಧ್ಯಮಗಳಿಗೆ/ಪತ್ರಿಕೆಗಳಿಗೆ ಇದರ ಸಾರಾಂಶವನ್ನು ಬಿಡುಗಡೆ ಮಾಡಲಾಗುವುದು.

ಸಹಿಮಾಡುವವರು, ದಯವಿಟ್ಟು ಸಾಧ್ಯವಾದಷ್ಟು ವಿವರಗಳನ್ನು ನೀಡಬೇಕಾಗಿ ಮನವಿ.

ಸಹಿಗಾಗಿ, ಹೆಚ್ಚುಪುಟಗಳನ್ನು ಮುದ್ರಿಸಿಕೊಂಡಿದ್ದರೆ ಒಳ್ಳೆಯದು.

ನಿಮ್ಮ ವಲಯದ ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಹಿ ಸಾಧ್ಯವಿದ್ದರೆ ಸಂಗ್ರಹಿಸಿ.

ನೀವು ಅಂಚೆ/ಕೊರಿಯರ್ ಮೂಲಕ ಕಳುಹಿಸಬೇಕಾದ ವಿಳಾಸ:

ಶೇಖರ್‌ಪೂರ್ಣ
೧೦೩, ಮೊದಲನೆ ಬ್ಲಾಕ್,
ಜನಪ್ರಿಯ ಲೇಕ್ ವ್ಯೂ ಅಪಾರ್ಟ್‌ಮೆಂಟ್ಸ್,
ಕೋಡಿಚಿಕ್ಕನಹಳ್ಳಿ
ಬೆಂಗಳೂರು
ಕರ್ನಾಟಕ
ಇಂಡಿಯ- ೫೬೦೦೭೬
ದೂರವಾಣಿ: ೦೮೦-೨೬೪೮೪೬೧೭

ನಿಮ್ಮೆಲ್ಲರ ಬೆಂಬಲವನ್ನು ಕೋರುತ್ತಿರುವ

ಕನ್ನಡಸಾಹಿತ್ಯ,ಕಾಂ ಹಾಗು ಎಲ್ಲ ಬೆಂಬಲಿಗರ ಪರವಾಗಿ
ಶೇಖರ್‌ಪೂರ್ಣ
08-11-2006

10.23.2006

felicitation to Sri Sheshadhrivasu Chandrashekharan(baraha vasu) by kannadasaahithya.com supporter's group

Kannadasaahithya.com supporter’s group
No.1855, 6th A Main,
2nd Stage,D Block,
Rajajinagar, Bangalore-10
kannadasaahithya@yahoogroups.com
phone: 9845696565


Dear Sir or Madam:
‘kannadasaahithya.com supporter’s group’ is a group of youngsters who are supporting http://www.kanandasaahithya.com for its focus in cyberspace, propagating Kannada literature and also which is trying to redefine the cyber culture in the context of Indian techno-social and economical situation.
This group has arranged a felicitation to Sri Sheshadhrivasu Chandrashekharan for his contribution in providing computing environment where all Indian Languages can be used with ease by developing “baraha” and releasing it as a freeware.
The same occasion also do have an interaction session with him.
Mr P Sheshadhri, renowned film maker, with many awards both State and National, will be presiding.
The Venue: Karnataka Union of Working Journalists, Old District office compound, Mysore Bank circle.Near Saint marthas hospital,bangalore,

Date and time: 29th October, 2006 at 10.00 AM

Mini Meal:12-30 PM
I request you to attend the function with your friends and family.
Sincerely,
Kiran M
Moderator
kannadasaahithya@yahoogroups.com

10.11.2006

A meeting with Prof.Sudhakar: Minutes by Arun,Mysore

ಭಾನುವಾರ ಅಕ್ಟೋಬರ್ ೧. ಆಯುಧ ಪೂಜೆ ದಿವಸ, ಮೈಸೂರಿಗೆ ದಸರ ಸಂಭ್ರಮ. ಮೈಸೂರೆಂಬ ರಾಜನಗರಿ ನವ ವಧುವಂತೆ ಅಲಂಕಾರಗೊಂಡು ಮೈಮರೆತಿತ್ತು. ಆ ಸಂದರ್ಭದಲ್ಲಿ ಬೆಂಗಳೂರಿನ ಹಬ್ಬ ಮರೆತು ಮೈಸೂರಿಗೆ ಬಂದವರು, ಅರೆಹಳ್ಳಿ ರವಿ ಮತ್ತು ಶ್ರಿನಿವಾಸ್.

ನನಗೆ ಫೋನ್ ಮಾಡಿ, ಮೈಸೂರಿಗೆ ಬಂದಿರುವ ವಿಷಯ ತಿಳಿಸಿದಾಗ ನನ್ನ ದಸರ ಉತ್ಸಾಹ ಇಮ್ಮಡಿಯಾದದ್ದು ಸುಳ್ಳಲ್ಲ . ಏಕೆಂದರೆ ಅವರಿಬ್ಬರೂ ಬಂದಿದ್ದು ಕನ್ನಡಸಾಹಿತ್ಯ.ಕಾಂ ನ ಪರವಾಗಿ. ಬಹಳ ಒತ್ತಾಯ ಮಾಡಿ ನಮ್ಮ ಮನೆಗೆ ಕರೆದುಕೊಂಡುಹೋಗಿ, ಅಲ್ಲಿ ಎಲ್ಲರೂ ಮಧ್ಯಾಹ್ನದ ಊಟ ಮುಗಿಸಿ, ಸುಧಾಕರ್ ರವರ ಮನೆ ತಲುಪಿದಾಗ ಸಮಯ ಮೂರೂವರೆ.
ಸುಧಾಕರ್ ಯಾರು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು.
ಸುಧಾಕರ್ ಅವರು ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಭಾಗದಲ್ಲಿ ಸಿಸ್ಟಮ್ಸ್ ಇ೦ಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಕಂಪ್ಯೂಟಿಂಗ್ ವಲಯದಲ್ಲಿ ಅಪಾರ ಅನುಭವಿಗಳು. ಮೇಲಾಗಿ ಕನ್ನಡದ ಬಗ್ಗೆ ವಿಶೇಷ ಪ್ರೀತಿ. ಕಂಪ್ಯೂಟಿಂಗ್ ವಾತಾವರ
ಣದಲ್ಲಿ ಕನ್ನಡದ ಸಾರ್ವಭೌಮತ್ವ ಇರಲೇಬೇಕು ಎಂದು ಪ್ರತಿಪಾದಿಸಿದವರು. ಸದ್ಯಕ್ಕೆ ಲಿನಕ್ಸ್ ಕನ್ನಡ ಅವತರಣಿಕೆ ಮತ್ತು ಅದರ ವಿವಿಧ ಸಾಧ್ಯತೆಗಳ ಬಗ್ಗೆ ತೊಡಗಿಸಿಕೊಂಡಿದ್ದಾರೆ. ಬಿಡುವಿಲ್ಲದ ಉಪನ್ಯಾಸಗಳನ್ನೂ ಈ ವಿಷಯದಲ್ಲಿ ನೀಡುತ್ತಿದ್ದಾರೆ.

ಪರಸ್ಪರ ಕುಶಲೋಪರಿಯಾದ ನಂತರ ಕನ್ನಡ ಸಾಹಿತ್ಯ.ಕಾ೦ ನ ಇತ್ತೀಚಿನ ಚಟುವಟಿಕೆಗಳ ಬಗ್ಗೆ ರವಿ , ಸ್ತೂಲವಾಗಿ ಸುಧಾಕರರವರಿಗೆ ಹೇಳಿದರು.
ಸುಧಾಕರರವರಿಗೆ ಕನ್ನಡಸಾಹಿತ್ಯ.ಕಾಂ ಬಗ್ಗೆ ಈಗಾಗಲೇ ತಿಳಿದಿರುವ ಕಾರಣ ನೇರ ವಿಷಯಕ್ಕೆ ಬಂದೆವು.


ಮೈಸೂರಿನಲ್ಲಿ ಶುರುವಾಗಿರುವ ನಮ್ಮ ಕನ್ನಡ ಸಾಹಿತ್ಯ.ಕಾ೦ನ ಬೆ೦ಬಲಿಗರ ಬಳಗದ ಬಗ್ಗೆ ಅವರಿಗೆ ಮಾಹಿತಿ ನೀಡಿದೆವು.
ಮೈಸೂರಿನಂತಹ ಸಾಂಸ್ಕೃತಿಕ ನಗರಿ, ಐ.ಟಿ.ನಗರಿಯಾಗುವ ಲPಣಗಳನ್ನು ತೋರಿಸುತ್ತಿರುವ ಈ ದಿನಗಳಲ್ಲಿ ನಾವು ಸಾಂಸ್ಕೃತಿಕತೆ-ಭಾಷೆ-ಮಾಹಿತಿ ತಂತ್ರಜ್ಞಾನಗಳನ್ನು ಒಚಿದರೊಡನೊಂದು ಬೆಸೆಯುವ ಕಾರ್ಯವನ್ನು ಈಗಿನಿಂದಲೇ ಆರಂಭಿಸಬೇಕಾದ ಅಗತ್ಯವಿದೆ. ಮೈಸೂರಿನ ಬಳಗಕ್ಕೆ ಸಮಾನಾಸಕ್ತ ಚಿಂತಕರು, ಸಾಹಿತಿಗಳು, ಯುವ ಐ.ಟಿ ಎಂಜಿನೀಯರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸುಧಾಕರ್‌ರವರ ಸಹಕಾರ ಕೋರಿದೆವು. ಅವರು ಸಂತೋಷದಿಂದ ಒಪ್ಪಿಕೊಂಡು ತಾವೂ ಮೈಸೂರು ಕೆ.ಎಸ್.ಸಿ.ಬಳಗದ ಸದಸ್ಯರಾಗುವ ಇಚ್ಛೆ ವ್ಯಕ್ತಪಡಿಸಿದರು.
ಮೈಸೂರಿನ ಕವಿಗಳು, ಸಾಹಿತಿಗಳಿಗೆ, ತಂತ್ರಜ್ಞರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಲು ಶಕ್ತಿ ಮೀರಿ ಪ್ರಯತ್ನ ಪಡುವುದಾಗಿ ಭರವಸೆ ಕೊಟ್ಟರು.
ಈ ನಿಟ್ಟಿನಲ್ಲಿ ಬರುವ ಡಿಸೆ೦ಬರ್‌ನಲ್ಲಿ ಮೈಸೂರಿನಲ್ಲಿ, ಬೆ೦ಗಳೂರು ಹಾಗು ಮು೦ಬೈ ಮಾದರಿಯ ಸಮಾವೇಶದ ಆಲೋಚನೆ ಮು೦ದಿಟ್ಟಾಗ, ಸುಧಾಕರ್‌ರವರು ಸ೦ಪೂರ್ಣ ಬೆ೦ಬಲ ಸೂಚಿಸಿದರು.

ಬಹು ಮುಖ್ಯವಾಗಿ ಭಾರತದ ಸಂದರ್ಭದಲ್ಲಿ ಸಂಸ್ಕೃತಿ ಮತ್ತು ಮಾಹಿತಿ ತಂತ್ರಜ್ಞಾನ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣದ ಬಗ್ಗೆ ಅವರೊಡನೆ ಬಹು ದೀರ್ಘವಾಗಿ ಚರ್ಚಿಸಿದೆವು. ಎರಡು ದಿನದ ಕಾರ್ಯಕ್ರಮದ ರೂಪುರೇಷೆ, ಸ್ಮರಣ ಸ೦ಚಿಕೆ, ಜಾಹೀರಾತು ಸಂಗ್ರಹ ಇತ್ಯಾದಿಗಳ ಬಗ್ಗೆ ಮಾತುಕತೆ ನಡೆಯಿತು. ನಮ್ಮ‌ಆಭಿಪ್ರಾಯಗಳಿಗೆ ಸ್ಪ೦ದಿಸಿ, ಸುಧಾಕರ್‌ರವರು ತಮ್ಮ ಸಲಹೆಗಳನ್ನು ಇತ್ತರು.

ನವೆ೦ಬರ್‌ನಲ್ಲಿ ಕರ್ನಾಟಕ ಸರ್ಕಾರ ಹಾಗು ಐ.ಟಿ ಸ೦ಸ್ಥೆಗಳ ಕನ್ನಡದ ತ೦ತ್ರಾ೦ಶ ಬೆಳವಣಿಗೆ ಕುರಿತಾದ ಅವಗಣನೆಯ ಬಗ್ಗೆ ಗಮನ ಸೆಳೆಯಲು, ಕನ್ನಡ ಸಾಹಿತ್ಯ.ಕಾ೦ ಹಾಗು ಬೆ೦ಬಲಿಗರ ಬಳಗ ಆಯೋಜಿಸುತ್ತಿರುವ ಒಚಿದು ದಿನದ ಉಪವಾಸ ಧರಣಿ ಮತ್ತು ಸಾತ್ವಿಕ ಪ್ರತಿಭಟನೆಗೆ, ತಾವು ಹಾಗು ಅವರ ಮಿತ್ರ ಬಳಗದ ಎಲ್ಲರು ಖುದ್ದು ಬಂದು ಬೆಂಬಲ ಸೂಚಿಸುವುದಾಗಿ ತಿಳಿಸಿದರು.

ಸುಮಾರು ೨ ಘ೦ಟೆಯ ಮಾತುಕತೆಯ ನ೦ತರ ಅಲ್ಲಿ೦ದ ಹೊರಟಾಗ ನಮ್ಮಲ್ಲಿ ಹೊಸ ಹುಮ್ಮಸ್ಸು ಕಾಣಿಸಿದ್ದು ಸ್ಪಷ್ಟವಾಗಿತ್ತು.

ಕನ್ನಡ ಮತ್ತು ತಾಂತ್ರಿಕತೆ ಬೆಸೆಯುವ ದಿಕ್ಕಿನಲ್ಲಿ ನಾವಿಟ್ಟಿರುವ ಪುಟ್ಟ ಹೆಜ್ಜೆಗೆ, ಹಿರಿಯರ ಬೆ೦ಬಲ ಅತ್ಯಗತ್ಯ.
ನಮ್ಮಲ್ಲಿ ಛಲ ಆಸೆಗಳೆರಡೆ ಸಾಲದು, ಕಾರ್ಯಕ್ಷಮತೆಯೂ ಬೇಕು.
ಸರಿಯಾದ ಸುಧಾಕರರವರಂಥಹ ಹಿರಿಯರಿಂದ ಉತ್ತಮ ಮಾರ್ಗದರ್ಶನವನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕಿದೆ.

ಕನ್ನಡಸಾಹಿತ್ಯ.ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು

ಕನ್ನಡ ಸಾಹಿತ್ಯ.ಕಾ೦ ಬೆ೦ಬಲಿಗರ ಬಳಗಕ್ಕಾಗಿ,
ಅರುಣ್ (ಅಚರಾ)

10.07.2006

mumbai pune kannadasaahithya.com supporters group function




9.07.2006

ಕನ್ನಡಸಾಹಿತ್ಯ.ಕಾಂ ಬಳಗದ ಹೊಸ ಕನಸು......!

ಕನ್ನಡಸಾಹಿತ್ಯ.ಕಾಂ ಸಾಮೂಹಿಕ ಚಟುವಟಿಕೆಯಾಗುವ ನಿಟ್ಟಿನಲ್ಲಿ ಕಳೆದ ತಿಂಗಳು ನೆಡೆದ ಸಂಪೂರ್ಣ ಮತ್ತು ಪದಪರೀಕ್ಷಕ ಬಿಡುಗಡೆ ಸಮಾರಂಭ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದಲ್ಲಿ ಹೊಸ ಹುರುಪೊಂದನ್ನು ಸೃಷ್ಟಿಸಿದೆ. ಹುರುಪು ಕ್ಷಣಿಕವಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸದಸ್ಯರೆಲ್ಲರ ಮೇಲೂ ಇದ್ದೇ ಇದೆ. ಕಳೆದ ಸಮಾರಂಭದ ಆಯೋಜನೆಯ ಮುಂಚೂಣಿಯಲ್ಲಿದ್ದ
೧.ಕಿರಣ್
೨.ವಸಿಷ್ಠ
೩.ಕಿಶೋರ್‌ಚಂದ್ರ
೪.ಅರೇಹಳ್ಳಿ ರವಿ
೫.ಶ್ರೀಧರ್ ಸಾಹುಕಾರ್

ಶೇಖರರವರ ಮನೆಯಲ್ಲಿ ಅನೌಪಚಾರಿಕವಾಗಿ ದಿನಾಂಕ: ೦೩-೦೯-೨೦೦೬ರ ಭಾನುವಾರ ಬೆಳಿಗ್ಗೆ ಸೇರಿದ್ದರು.

ಚರ್ಚೆ-ಮಾತುಕತೆಗಳಲ್ಲಿ ಮುಂದಿನ ಚಟುವಟಿಕೆಗಳ ಬಗೆಗಿನ ಸ್ಥೂಲ ಕಲ್ಪನೆ ಮತ್ತು ಆಶಯ ಗೋಚರವಾಗತೊಡಗಿತು. ಮಾರ್ಚ್ ೨೮, ೨೦೦೭ಕ್ಕೆ ಕನ್ನಡಸಾಹಿತ್ಯ.ಕಾಂ ೬ನೇ ವರ್ಷ ಪೂರೈಸಿ ಏಳನೇ ವರ್ಷಕ್ಕೆ ಕಾಲಿಡುತ್ತದೆ.

ಅಂತರ್ಜಾಲದಲ್ಲಿ ಕನ್ನಡದ ಸಾಂಸ್ಕೃತಿಕ ನೆಲೆಯಾಗಿ-ತಾಂತ್ರಿಕವಾದ ಅಗತ್ಯಗಳನ್ನೂ ವ್ಯಾಖ್ಯಾನಿಸತೊಡಗಿರುವ ಕನ್ನಡಸಾಹಿತ್ಯ.ಕಾಂ , ಬೆಂಗಳೂರಿನ ಬಳಗ ಹಾಗೂ ಎಲ್ಲಾ ಬೆಂಬಲಿಗರ ಬಳಗದ ಪರವಾಗಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವೊಂದನ್ನು ಆಯೋಜಿಸಬೇಕು ಎಂಬ ಚಟುವಟಿಕೆಯ ಕಲ್ಪನೆಯನ್ನು ಎಲ್ಲಾ ಸದಸ್ಯರ ಮುಂದೆ ಪ್ರಸ್ತಾವನೆಯಾಗಿ ಇಡುತ್ತಿದ್ದೇವೆ.

ಈ ವಿಚಾರ ಸಂಕಿರಣದ ಭಾಗವಾಗಿ ಕನ್ನಡಸಾಹಿತ್ಯ.ಕಾಂನ ಎಲ್ಲ ಲೇಖಕರನ್ನು ವಿಚಾರಸಂಕಿರಣದ ದಿನವಾದ ಏಪ್ರಿಲ್ ೧೫, ೨೦೦೭ರ ಸಂಜೆ, ಕೃತಜ್ಞತೆ ಸಲ್ಲಿಸುವ ಸಲುವಾಗಿ ಒಂದೆಡೆ ಸೇರಿಸುವ ಉದ್ದೇಶವೂ ಇದೆ.

ಪ್ರಸ್ತಾವನೆಯ ತಾರ್ಕಿಕ ಬೆಳವಣಿಗೆಯಾಗಿ ಈ ಕೆಳಕಂಡ ಸಮಿತಿಗಳನ್ನು ರಚಿಸಲಾಗಿದೆ.
೧. ಮಾಹಿತಿ ತಂತ್ರಜ್ಞಾನದ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯಾತಿಗಣ್ಯರನ್ನು ಪ್ರಬಂಧ ಮಂಡನೆಗಾಗಿ ಗುರುತಿಸಿ, ಸಂಪರ್ಕಿಸುವ ಸಲುವಾಗಿನ ಸಮಿತಿಯ ನೇತೃತ್ವ ಶೇಖರ್‌ಪೂರ್ಣ.
೨. ಕನ್ನಡಸಾಹಿತ್ಯ.ಕಾಂನ ಲೇಖಕರನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಕರೆತರಲು, ಅವರ ಆತಿಥ್ಯ ವಹಿಸುವ ಸಲುವಾಗಿನ ಸಮಿತಿಯ ನೇತೃತ್ವ ಶ್ರೀಧರ್ ಸಾಹುಕಾರ್.
೩. ಸ್ಮರಣ ಸಂಚಿಕೆ(ಕನ್ನಡಸಾಹಿತ್ಯ.ಕಾಂನ ಇತಿಹಾಸ, ಲೇಖಕರ ಅನಿಸಿಕೆಗಳು, ಪ್ರಬಂಧ ಮಂಡಿಸುವವರ ಪ್ರಬಂಧಗಳು, ಜಾಹೀರಾತುಗಳು)ಯ ಸಮಿತಿಯ ನೇತೃತ್ವ ವಸಿಷ್ಠ.
೪. ಕನ್ನಡಸಾಹಿತ್ಯ.ಕಾಂನ ಎಲ್ಲ ಬೆಂಬಲಿಗರ ಬಳಗಕ್ಕೆ ಒಂದೇ ತೆರನಾದ ನಿಗದಿತ ಮಟ್ಟಕ್ಕೆ ಬೇಕಾದ ಪರಿಕರಗಳು-letter head, logo, T-shirt with logo, dress code, media kit ಇತ್ಯಾದಿ ಪೂರೈಸುವಿಕೆಯ ನಿರ್ವಹಣೆಗಾಗಿನ ಸಮಿತಿಯ ನೇತೃತ್ವ ಕಿಶೋರ್‌ಚಂದ್ರ.
೫. ಮಾಧ್ಯಮ ಸಂಪರ್ಕಕ್ಕಾಗಿನ ಸಮಿತಿಯ ನೇತೃತ್ವ ರುದ್ರಮೂರ್ತಿ\ಅರೇಹಳ್ಳಿ ರವಿ
೬.ರಾಷ್ಟ್ರೀಯ ವಿಚಾರ ಸಂಕಿರಣದ ಅತಿಥಿಗಳ ಊಟೋಪಚಾರ ಇತ್ಯಾದಿ ಸೌಕರ್ಯಗಳಿಗಾಗಿನ ಸಮಿತಿಯ ನೇತೃತ್ವ ಗೋವಿಂದರಾಜು.

ಈ ವಿಚಾರ ಸಂಕಿರಣದ ಕಾರ್ಯಕ್ರಮ, ನೋಂದಾಯಿಸಿಕೊಂಡವರು ಮತ್ತು ವಿಶೇಷ ಆಹ್ವಾನಿತರಿಗೆ ಮಾತ್ರ. ಇದಕ್ಕೆ ಸಂಬಂಧಪಟ್ಟಂತೆ ನೋಂದಾವಣಿ ಶುಲ್ಕವನ್ನು ನಿಗದಿಗೊಳಿಸಬೇಕಾಗಿದೆ.

ಈ ಕುರಿತಂತೆ ಕಾರ್ಯಕ್ರಮದ ರೂಪುರೇಷೆಯಲ್ಲಿ ಕ್ರಿಯಾಶೀಲರಾಗಲು ಹೆಚ್ಚಿನ ಸದಸ್ಯರ\ಕಾರ್ಯಕರ್ತರ\ಸ್ವಯಂಸೇವಕರ ಅಗತ್ಯವೂ ಇದೆ.

ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ಕಳಿಸಬಹುದು .

ಬೆಂಗಳೂರು ಸುತ್ತಮುತ್ತಲಿರುವ ಕನ್ನಡಸಾಹಿತ್ಯ.ಕಾಂ ಸದಸ್ಯರು, ಈ ವಿಷಯವನ್ನು ವಿವರವಾಗಿ ಚರ್ಚಿಸಲು ಸಭೆಯೊಂದನ್ನು ಕರೆಯಲಾಗಿದೆ.

ಸಭೆಯಲ್ಲಿ ಮೇಲೆ ಕಾಣಿಸಿದ ಸಮಿತಿಯ ನೇತೃತ್ವ ವಹಿಸಿರುವವರಲ್ಲದೆ ಉಳಿದ ಸರ್ವ ಸದಸ್ಯರೂ ಸಹ ಪಾಲ್ಗೊಳ್ಳಬೇಕಾಗಿ ಮನವಿ.

ಸಭೆಯ ದಿನಾಂಕ: ೧೬-೦೯-೨೦೦೬ ಶನಿವಾರ ಸಂಜೆ ೬.೦೦
ಸ್ಥಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ
ಹಳೆ ಜಿಲ್ಲಾಧಿಕಾರಿ ಕಛೇರಿ ಆವರಣ
ಕೆಂಪೇಗೌಡ ರಸ್ತೆ
ಮೈಸೂರು ಬ್ಯಾಂಕ್ ವೃತ್ತದ ಬಳಿ
ಕಾವೇರಿ ಭವನದ ಪಕ್ಕ
ಬೆಂಗಳೂರು

ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿರುವ
ಕಿರಣ್
ನಿರ್ವಾಹಕ
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ
ದೂ: ೯೮೪೫೬ ೯೬೫೬೫

8.09.2006

ಕನ್ನಡಸಾಹಿತ್ಯ.ಕಾಂ ಕಾರ್ಯಕ್ರಮದ ಯಶಸ್ಸಿನ ಹಿಂದೆ.....

ಕನ್ನಡಸಾಹಿತ್ಯ.ಕಾಂ ಗೆ ಆಗ ತಾನೆ ಒಂದು ಜಯ ದೊರಕಿತ್ತು. ಮೈಕ್ರೋಸಾಫ್ಟ್‌‍‍ನ 'ತುಂಗಾ' ಫಾಂಟ್ ವಿಚಾರದಲ್ಲಿ ಕನ್ನಡಸಾಹಿತ್ಯ.ಕಾಮ್ ನೆಡೆಸಿದ ಹೋರಾಟ, ಚರ್ಚೆಗಳು, ಕೊನೆಗೆ ಕಂಪನಿ ತಪ್ಪುಗಳನ್ನು ಸರಿಪಡಿಸಲು ಒಪ್ಪಿಕೊಂಡಿದ್ದು, ಕೆ.ಎಸ್.ಸಿ ಗುಂಪಿನಲ್ಲಿ ಒಂದು ತೆರನಾದ ಉತ್ಸಾಹ ಮೂಡಲು ಕಾರಣವಾಗಿತ್ತು. ಬಳಗದ ನಿರ್ವಾಹಕ ಕಿರಣ್ ಫೋನ್ ಮಾಡಿ ಮೈಕ್ರೊಸಾಫ್ಟ್ ವಿರುದ್ಧದ ಜಯದ ಸಂತೋಷವನ್ನು ಹಂಚಿಕೊಳ್ಳಲು ಸದಸ್ಯರ ಸಭೆ ಆಯೋಜಿಸಿದರೆ ಹೇಗೆ ಎಂದು ಪ್ರಸ್ತಾಪ ಮುಂದಿಟ್ಟರು.

ರುದ್ರಮೂರ್ತಿಯವರು 'ಪದಪರೀಕ್ಷಕ'ದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರಿಂದಲೂ, ಕಿರಣ್‍ಗೆ ಅವರ ಕಛೇರಿಯಲ್ಲಿ ಬಿಡುವಿಲ್ಲದ ಕೆಲಸಗಳಿದ್ದುದ್ದರಿಂದಲೂ ಸಭೆ ಆಯೋಜಿಸುವ ಹೊಣೆ ನನ್ನ ಮೇಲೆಯೇ ಬಿತ್ತು. ಕಿರಣ್ ಅನುಪಸ್ಥಿತಿಯಲ್ಲಿ ಕೆ.ಎಸ್.ಸಿ.ಗುಂಪಿಗೆ ನಾನೇ ಒಂದು ಆಹ್ವಾನ ರೂಪದ ಮೇಲ್ ಹಾಕಿದೆ. ಆದರೆ ನನ್ನ ಸಭೆ ನೆಡೆಸುವ ಪ್ರಸ್ತಾವನೆಗೆ ಬಂದ ಪ್ರತಿಕ್ರಿಯೆಗಳು ಐದಾರು ಮಾತ್ರ. ಆಗ ಸ್ವಲ್ಪ ನಿರಾಸೆಯಾದರೂ ಅಷ್ಟು ಜನರೊಂದಿಗೆ ಶೇಖರರವರ ಮನೆಯಲ್ಲಿಯೇ ಒಂದು ಸಭೆ ಮಾಡಿ ಬಿಡೋಣವೆಂದು ಎಲ್ಲರನ್ನು ಫೋನ್ ಮೂಲಕ ಸಂಪರ್ಕಿಸಿದೆವು. ಆಗ ನಮಗೆ ಸಿಕ್ಕವರು ವಸಿಷ್ಠ ಮತ್ತು ಶ್ರೀಶಕಾರಂತ. ಜೊತೆಗೆ ಇನ್ನೊಂದಿಬ್ಬರು ಹಳೆಯ ಸದಸ್ಯರು ಬರುವುದಾಗಿ ಹೇಳಿದರು.

ಇತ್ತ ಶೇಖರರವರಿಗೆ ಉತ್ಸಾಹಿ ಸಾಫ್ಟ್‌‍ವೇರ್ ಎಂಜಿನೀಯರ್ ರಾಘವ ಕೋಟೆಕಾರ್ ಸಿಕ್ಕಿದ್ದರು. ತಲೆಯೊಳಗೆ ಗಿರಕಿ ಹೊಡೆಯುತ್ತಿದ್ದ ಕನ್ನಡದ CMS ಒಂದರ ಕಲ್ಪನೆಯನ್ನು ಶೇಖರರವರು ರಾಘವ ಮುಂದಿಟ್ಟಾಗ ಕನ್ನಡದ ಬಗ್ಗೆ ಅಪಾರ ಅಭಿಮಾನವಿಟ್ಟುಕೊಂಡಿದ್ದ
ಅವರು ಈ ಯೋಜನೆಯನ್ನು ತಕ್ಷಣ ಕೈಗೆತ್ತಿಕೊಳ್ಳೋಣವೆಂದು ಆಗಿನಿಂದಲೇ ಕೆಲಸ ಪ್ರಾರಂಭಿಸಿ ಬಿಟ್ಟರು. ಹೀಗೆ ಶೇಖರರವರ ಪರಿಕಲ್ಪನೆ, ವಿನ್ಯಾಸ ಹಾಗೂ ರಾಘವರವರ ಕೋಡಿಂಗ್‍ನೊಂದಿಗೆ 'ಸಂಪೂರ್ಣ' CMS ಯೋಜನೆ ಆರಂಭವಾಯಿತು.

ಯೋಜನೆ ಪ್ರಾರಂಭವಾದ ಒಂದು ತಿಂಗಳಿನ ನಂತರವೇ ಈ ಕುರಿತು ಗುಂಪಿನ ಸದಸ್ಯರಿಗೆ ತಿಳಿಯಿತು. ಶೇಖರರವರು ಈ ಯೋಜನೆ ಆರಂಭಿಕ ಹಂತದಲ್ಲಿರುವುದರಿಂದ ಇದರಲ್ಲಿ ಆಸಕ್ತಿ ಇರುವವರೆಲ್ಲರೂ ಪಾಲ್ಗೊಳ್ಳಬಹುದೆಂದು ಮುಕ್ತ ಆಹ್ವಾನವಿತ್ತರು. ಇದಕ್ಕೆ ಬಹಳ ಪ್ರತಿಕ್ರಿಯೆಗಳು ಬಂದರೂ, ಸಕ್ರಿಯವಾಗಿ ಅವರನ್ನು ತೊಡಗಿಸಿಕೊಳ್ಳಲು ನಮ್ಮಲ್ಲಿ ಮೂಲಸೌಲಭ್ಯಗಳ ಕೊರತೆಯಿತ್ತು. ಆದ್ದರಿಂದ ಇಬ್ಬರೇ ಯೋಜನೆಯಲ್ಲಿ ಮುಂದುವರಿಯಬೇಕಾದ ಅನಿವಾರ್ಯತೆ ಒದಗಿಬಂತು.

ಸಭೆ ಆಯೋಜಿಸುವ ನಮ್ಮ ಪ್ರಯತ್ನಗಳು ಸದಸ್ಯರ ಪಾಲ್ಗೊಳ್ಳುವಿಕೆಯ ಕೊರತೆಯಿಂದ ವಿಫಲವಾಗಿದ್ದವು. ಸಂಪೂರ್ಣ CMS ಅಭಿವೃದ್ಧಿ ಕೆಲಸ ಬಹಳ ವೇಗದಲ್ಲಿ ನೆಡೆಯುತ್ತಿತ್ತು. ಶೇಖರರವರು ಮತ್ತು ಕಿರಣ್‍ CMS ಬಿಡುಗಡೆಗೆ ಒಂದು ಕಾರ್ಯಕ್ರಮ ಮಾಡಿದರೆ ಹೇಗೆಂದಾಗ ನಾನು ಇದೆಲ್ಲಾ ಬಹಳ ಖರ್ಚಿನ ಬಾಬ್ತಲ್ಲವೆ ಎಂದೆ. ಆದರೆ ಕೆ.ಎಸ್.ಸಿ ಸದಸ್ಯರ ಬೆಂಬಲ ಸಿಗುವುದರ ಬಗ್ಗೆ ಶೇಖರರವರಿಗೆ ಬಹಳ ವಿಶ್ವಾಸವಿತ್ತು. ರುದ್ರಮೂರ್ತಿಯವರ ಪದಪರೀಕ್ಷಕವೂ ಬಳಕೆಗೆ ಸಿದ್ಧವಾಗುವ ಹಂತ ತಲುಪಿತ್ತು. ಸರಿ ಎರಡೂ ಸಾಫ್ಟ್‍ವೇರ್‌ಗಳನ್ನು ಒಟ್ಟಿಗೆ ಬಿಡುಗಡೆ ಮಾಡುವುದೆಂದು ನಿರ್ಧಾರ ಮಾಡಿದೆವು.ಕನ್ನಡಸಾಹಿತ್ಯ.ಕಾಂ‍ಗೆ ೬ನೇ ವಾರ್ಷಿಕೋತ್ಸವದ ಸಂಭ್ರಮವೂ ಜೊತೆಗೆ ಸೇರಿಕೊಂಡಾಗ ನಮ್ಮ ಉತ್ಸಾಹ ಇಮ್ಮಡಿಯಾಯಿತು.

ಕಿರಣ್ ಈ ಸಮಾರಂಭ ನೆಡೆಸುವ ಕುರಿತ ಒಂದು ವಿವರವಾದ ಆಹ್ವಾನವನ್ನು ಕೆ.ಎಸ್.ಸಿ.ಗುಂಪಿಗೆ ಮೈಲ್ ಮಾಡಿದರು. ಜೊತೆಗೆ ಕಾರ್ಯಕ್ರಮಕ್ಕೆ ಹಣದ ಅಗತ್ಯ ಬಹಳವಿದ್ದುದರಿಂದ ಸದಸ್ಯರು ತಮ್ಮ ಶಕ್ತ್ಯಾನುಸಾರ ಸಹಕಾರ ನೀಡುವ ಪ್ರಸ್ತಾವವನ್ನು ಇಡಲಾಯಿತು. ಆರಂಭಿಕವಾಗಿ ಕಾರ್ಯಕ್ರಮಕ್ಕೆ ಸುಮಾರು ಹತ್ತು ಸಾವಿರ ರೂಪಾಯಿಗಳು ಬೇಕಾಗಬಹುದೆಂದು ಅಂದಾಜಿಸಿದ್ದೆವು. ಹಣದ ಪ್ರಸ್ತಾವನೆಯಾದ ಒಂದು ವಾರದಲ್ಲೇ ಕಿರಣ್‍ರವರ ಖಾತೆಗೆ ಸದಸ್ಯರು ನೀಡಿದ ಹಣ ಹತ್ತು ಸಾವಿರವನ್ನು ದಾಟಿತ್ತು. ಮುಂದಿನ ನಮ್ಮ ಕಾರ್ಯ ಯೋಜನೆಗಳನ್ನು ರೂಪಿಸಲು ಇದು ನಮಗೆ ಬಹಳ ಉಪಯೋಗವಾಯಿತು.

ಹಣದ ವಿಷಯವೇನೋ ಆಯಿತು, ಕಾರ್ಯಕ್ರಮ ಸಂಯೋಜನೆಗೆ ಕಾರ್ಯಕರ್ತರು ಬೇಕಾಗಿದ್ದರು. ಏನೇ ಸಕ್ರಿಯವಾಗಿ ತೊಡಗಿಸಿಕೊಂಡರೂ ನಾವು ನಾಲ್ಕೈದು ಜನ ಮಾತ್ರ ಪಾಲ್ಗೊಂಡರೆ ಅದು ಸಮೂಹದ ಪ್ರಯತ್ನವಾಗಲಾರದು ಎಂಬುದು ನಮಗೆ ಗೊತ್ತಿತ್ತು. ಆದಕ್ಕೆ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸದಸ್ಯರಿಗೆಲ್ಲರಿಗೂ ಒಂದು ಆಹ್ವಾನ ನೀಡಿದೆವು. ಬಹಳ ಜನ ಉತ್ಸಾಹ ತೋರಿಸಿದರೂ ಎಲ್ಲರೂ ಒಂದೇ ಸಮಯದಲ್ಲಿ ಸಕ್ರಿಯವಾಗುವುದೂ ಸಾಧ್ಯವಿರಲಿಲ್ಲ.ಅದಕ್ಕೆ ಕೆಲಸಗಳನ್ನು ಹಂಚಿಕೊಂಡೆವು.

ಆಹ್ವಾನ ಪತ್ರಿಕೆ, ಪೋಸ್ಟರ್-ಮುದ್ರಣ, ಅತಿಥಿಗಳನ್ನು ಆಹ್ವಾನಿಸುವುದು,ಸಮಾರಂಭದ ಸ್ಥಳ ನಿಗಧಿ ಮಾಡುವುದು,ಸಮಾರಂಭಕ್ಕೆ ಬರಲು ಒಪ್ಪಿದ ಗಣ್ಯರನ್ನು ವೈಯಕ್ತಿಕವಾಗಿ ಅವರ ಮನೆಗೆ ಹೋಗಿ ಆಹ್ವಾನಿಸುವುದು, ಸಮಾರಂಭದಂದು ಬೇಕಾದ ವಸ್ತುಗಳ ಖರೀದಿ, ವೇದಿಕೆ ಸಿದ್ಧತೆ, ಊಟ ಇತ್ಯಾದಿ ವ್ಯವಸ್ಥೆಯಂತಹ ಚಟುವಟಿಕೆಗಳನ್ನು ಗುರುತಿಸಿ, ಇದನ್ನೆಲ್ಲಾ ನಿರ್ವಹಿಸಲು ಮುಂದೆ ಬಂದಿದ್ದವರ ನಡುವೆ ಕೆಲಸ ಹಂಚಿಕೊಂಡು ಕಾರ್ಯೋನ್ಮುಖರಾದೆವು.ಕೇವಲ ಒಂದು ವಾರದ ಅವಧಿಯಲ್ಲೇ ನಮ್ಮ ಕಾರ್ಯಕ್ರಮದ ಸಿದ್ಧತೆಗಳನ್ನು ಯಶಸ್ವಿಯಾಗಿ ಮಾಡಿಕೊಂಡೆವು.
* * *
ಇದು ನಮ್ಮ ಚೊಚ್ಚಲ ಪ್ರಯತ್ನವಾಗಿದ್ದುದರಿಂದ ಅನೇಕ ತಪ್ಪುಗಳಾಗಿರಬಹುದು. ಆದರೆ ತಪ್ಪುಗಳೇ ನಮ್ಮ ದಾರಿದೀಪಗಳೆಂಬುದು ಗೊತ್ತಿರುವ ಕಾರಣ ಮುಂದಿನ ನಮ್ಮ ನಡೆ ಉತ್ತಮವಾಗಿರುತ್ತದೆಂದು ಕೆ.ಎಸ್.ಸಿ ಸದಸ್ಯರು ಮತ್ತು ಹಿತೈಷಿಗಳಿಗೆ ಭರವಸೆ ನೀಡುತ್ತೇವೆ.

8.01.2006

ಕನ್ನಡ ಸಾಹಿತ್ಯ.ಕಾನ ಕಾರ್ಯಕ್ರಮದ ಆಹ್ವಾನ ಪತ್ರಿಕೆ

ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಶೇಷಾದ್ರಿಪುರಂ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಆಚರಿಸುತ್ತಿರುವ ಕನ್ನಡಸಾಹಿತ್ಯ.ಕಾಂ ನ ಐದನೇ ವಾರ್ಷಿಕೋತ್ಸವ, ಸಂಪೂರ್ಣ CMS ಮತ್ತು ಕನ್ನಡ ಪದ ಪರೀಕ್ಷಕ ತಂತ್ರಾಂಶಗಳ ಬಿಡುಗಡೆ ಸಮಾರಂಭಕ್ಕೆ ತಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತದೆ.

ಸಮಾರಂಭದ ವಿವರಗಳು
ದಿನಾಂಕ: ಆಗಸ್ಟ್ ೬, ೨೦೦೬
ಸಮಯ: ಬೆಳಿಗ್ಗೆ ೧೦.೩೦ ಕ್ಕೆ
ಸ್ಥಳ: ಶೇಷಾದ್ರಿಪುರಂ ವಿದ್ಯಾಲಯ ಸಭಾಂಗಣ
ಶೇಷಾದ್ರಿಪುರಂ ವಿದ್ಯಾಲಯ (ಕಾಲೇಜು), ಬೆಂಗಳೂರು.

ಉದ್ಘಾಟನೆ ಹಾಗು ಸಂಪೂರ್ಣ CMS ಬಿಡುಗಡೆ :
ಶ್ರೀ ಯು.ಆರ್ ಅನಂತಮೂರ್ತಿ, ಚಿಂತಕರು, ಲೇಖಕರು

ಕನ್ನಡ ಪದ ಪರೀಕ್ಷಕದ ಬಿಡುಗಡೆ:
ಸಿದ್ಧಲಿಂಗಯ್ಯ
ಅಧ್ಯಕ್ಷರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಮುಖ್ಯ ಅತಿಥಿಗಳು:
ರಾಮಚಂದ್ರ ಗೌಡ
ರೇಶ್ಮೆ, ಜವಳಿ ಹಾಗು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
ಕರ್ನಾಟಕ ಸರ್ಕಾರ

ಬಿ ಕೆ ಚಂದ್ರಶೇಖರ್
ಮಾಜಿ ಸಚಿವರು

ಅಧ್ಯಕ್ಷತೆ
ಶ್ರೀನಾಥ ಶಾಸ್ತ್ರಿ
ಕನ್ನಡ ಗಣಕ ಪರಿಷತ್

೦೨.೩೦ ರಿಂದ ಚರ್ಚಾಗೋಷ್ಠಿ
೧. "ಕನ್ನಡದ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ"
೨. "ಕನ್ನಡಸಾಹಿತ್ಯ.ಕಾಂ ಮುಂದೇನು?"

ವಿಶೇಷ ಅಹ್ವಾನಿತರು -ನಮ್ಮೊಂದಿಗೆ:
ವಿವೇಕ ಶಾನಭಾಗ
ಜಯಂತ್ ಕಾಯ್ಕಿಣಿ
ಸುಮತೀಂದ್ರ ನಾಡಿಗ್
ಗಿರೀಶ್ ಕಾಸರವಳ್ಳಿ
ಎ.ಆರ್ ಶ್ರೀನಿವಾಸಯ್ಯ
ನರಹಳ್ಳಿ ಬಾಲಸುಬ್ರಹ್ಮಣ್ಯ
ಕೃಷ್ಣ ಪರಮೇಶ್ವರ ಭಟ್ಟ
ಡಾ.ಕೊಟ್ರಸ್ವಾಮಿ
ಡಾ. ಮಧುರಾ ಹೆಗ್ಡೆ
ಆರ್.ಸಿ ಕುಲಕರ್ಣಿ
ಶ್ರೀನಿವಾಸ ಶರ್ಮ
ಶ್ರೀನಿವಾಸ ರಾಜ
ವಿಜಯಾ ಸುಬ್ಬರಾಜ
ಗೀತಾಚಾರ್ಯ ಎನ್.
ಬೈರೇಗೌಡ ಜಿ.ಬಿ
ಹರೀಶ್ ಮಂಗಳಾ ಪ್ರಿಯದರ್ಶಿನಿ.


ಅಪ್ಪಟ ಕನ್ನಡದ ಕೆಲಸಕ್ಕೆ ತಪ್ಪದೆ ಬನ್ನಿ
ಬಳಗದ ಪರ್ವಾಗಿ
ಕಿರಣ್
ಸಂಪರ್ಕ: ೯೮೪೫೬ ೯೬೫೬೫

7.29.2006

ಅಪರೂಪದ ಜಾನಪದ ಗಾರುಡಿಗ ಎಸ್.ಕೆ.ಕರೀಂಖಾನ್‍ ರವರು ಇನ್ನಿಲ್ಲ...

ಎಸ್.ಕೆ.ಕರೀಂಖಾನರಿಗೊಂದು ನುಡಿನಮನ.....
ನಾಡಿನ ಹೆಸರಾಂತ ಜಾನಪದ ತಜ್ಞರಾಗಿದ್ದ ಎಸ್.ಕೆ.ಕರೀಂಖಾನರು ಇಂದು(೨೯-೦೭-೦೬,ಶನಿವಾರ) ನಮ್ಮನ್ನಗಲಿದ್ದಾರೆ. ಆ ಹಿರಿಯ ಜೀವ ಜೈನ್ ಆಸ್ಪತ್ರೆಯ ಹಾಸಿಗೆ ಮೇಲೆ ಎಷ್ಟು ನರಳಿತೋ...? ಕನ್ನಡ ಮನೆ ಮಾತಲ್ಲದಿದ್ದರೂ, ಅವರು ಕನ್ನಡ ಜಾನಪದ ಕಲೆಯನ್ನು ಉಸಿರಾಗಿಸಿಕೊಂಡ ರೀತಿ ಅನನ್ಯ ಮತ್ತು ಅಪರೂಪ. ಕೊನೆಯ ದಿನಗಳಲ್ಲೂ ಸರ್ಕಾರಗಳು ಅವರಿಗೊಂದು ಸೂರು ಮಾಡಿಕೊಡಲಿಲ್ಲ. ಅವರನ್ನು ಸಂಬಂಧಿಕರ ಹಂಗಿನಲ್ಲೇ ಕೊನೆಯುಸಿರೆಳೆಯುವಂತೆ ಮಾಡಿಬಿಟ್ಟವು. ಹಿರಿಯ ಜೀವಕ್ಕೆ ನಮ್ಮೆಲ್ಲರ ಮನಸಾರ ನುಡಿ ನಮನಗಳಿರಲಿ.
ಸುಮಾರು ನಾಲ್ಕು ವರ್ಷಗಳ ಹಿಂದೆ ಕನ್ನಡ ಭವನದಲ್ಲಿ ಮನೆಯಂಗಳದ ಮಾತುಕಥೆಗೆ ಬಂದಿದ್ದ ಕರೀಂ ಖಾನರು ನನಗಗೊಂದು ಸೈಟೋ ಏನಾದರೂ ಕೊಡಿಸಿ...ಎಂದು ಪ್ರೇಕ್ಷಕರ ಮುಂದೆ ಅಕ್ಷ್ರರಶಃ ಬೇಡಿಕೊಂಡಿದ್ದರು. ಕೊನೆಯ ದಿನಗಳಲ್ಲೂ ಕನ್ನಡಿಗರು ಅವರಿಗೆ ಸಲ್ಲಿಸಬೇಕಾದ ಗೌರವ ಸಲ್ಲಿಸಲಿಲ್ಲ..
ಭಗವದ್ಗೀತೆಯನ್ನೊಳಗೊಂಡು ಅನೇಕಾನೇಕ ಕಾವ್ಯಗಳ ಬಗ್ಗೆ ಪಾಂಡಿತ್ಯ ಗಳಿಸಿದ್ದ ಕರೀಂಖಾನರು...ಹಿಂದೂ ದೇವರುಗಳ ಮೇಲೆ ಭಕ್ತಿಗೀತೆಗಳನ್ನು
ರಚಿಸಿ....ಭಕ್ತರು ನಾಚುವಂತೆ ಮಾಡಿದರು....
ಮುಸ್ಲಿಮರಲ್ಲಿ ಮುಸ್ಲಿಮರಾಗದೆ...ಹಿಂದುಗಳಲ್ಲಿ ಹಿಂದೂವಾಗದೆ...ಮನೆಯನೆಂದೂ ಕಟ್ಟಿಕೊಳ್ಳದೆ...ವಿಶ್ವಮಾನವರಾಗಿ ಅನಂತ ಚೇತನವಾಗುಳಿದ
ಕರೀಂ ಖಾನರಿಗೆ ಕರೀಂಖಾನರೇ ಸಾಟಿ....
ಮತ್ತೊಮ್ಮೆ ಹುಟ್ಟಿ ಬನ್ನಿ...ಜಾನಪದ ಕೊನೆಯಾಗುವಷ್ಟರಲ್ಲಿ....!!!

*******************

7.09.2006

ಕವಿ ಸಿದ್ಧಲಿಂಗಯ್ಯನವರೊಂದಿಗೆ ಒಂದು ಮಧ್ಯಾಹ್ನ......

a meet with poet and kannada development authority chairman g.s.siddalingaiah about kannada supporting softwares, kannada utf fonts, tunga fonts etc
ಕೆ ಎಸ್ ಸಿ 6ನೇ ವಾರ್ಷಿಕೋತ್ಸವ,CMS ಸಂಪೂರ್ಣ ಹಾಗೂ ಕನ್ನಡ ಪದಪರೀಕ್ಷಕದ ಬಿಡುಗಡೆ, ಸಮಾರಂಭದ ಸಿದ್ಧತೆಗಳ ವರದಿ
ವರದಿ-ಅರೇಹಳ್ಳಿ ರವಿ

ಕನ್ನಡ ಸಾಹಿತ್ಯ.ಕಾಂ‍ನ ೫ನೇ ವಾರ್ಷಿಕೋತ್ಸವ ಸಮಾರಂಭ ಹಲವಾರು ಕಾರಣಗಳಿಂದ ಮುಂದಕ್ಕೆ ಹೋಗುತ್ತಲೇ ಇತ್ತು. ಕಳೆದ ವಾರದ ಕೊನೆಯಲ್ಲಿ ಅನಂತಮೂರ್ತಿಯವರು ಮತ್ತು ಎಂ.ಪಿ.ಪ್ರಕಾಶ್‌ರವರು ಆಗಸ್ಟ್ ೬ರಂದು ಸಮಾರಂಭಕ್ಕೆ ಬರುವ ಆಶ್ವಾಸನೆಯನ್ನು ನೀಡುತ್ತಿದ್ದಂತೆ ನಾವು ಮಾಡಬೇಕಿದ್ದ ಹಲವಾರು ಪೂರ್ವಭಾವಿ ಕೆಲಸಗಳಿದ್ದವು. ಅವುಗಳಲ್ಲಿ ಕಾರ್ಯಕ್ರಮಕ್ಕೆ ಗಣ್ಯರನ್ನು ಅಧಿಕೃತವಾಗಿ ಆಹ್ವಾನಿಸುವುದೂ ಒಂದು. ಮೊದಲಿಗೆ ನಾವು ಆಹ್ವಾನಿಸಬೇಕಿದ್ದುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕವಿ ಸಿದ್ಧಲಿಂಗಯ್ಯನವರನ್ನು. ಗುರುವಾರ ಅವರ ಮನೆಗೆ ಫೋನ್ ಮಾಡಿ ಶನಿವಾರ (೦೮-೦೭-೨೦೦೬) ಭೇಟಿಗೆ ಬರುವುದಾಗಿ ಹೇಳಿದಾಗ ಬೆಳಿಗ್ಗೆಯೇ ಬನ್ನಿ ಎಂದು ಹೇಳಿದ್ದರು. ಶುಕ್ರವಾರ ರಾತ್ರಿಯೇ ಕಿರಣ್, ಅವರಿಗೆ ಕೊಡಬೇಕಾದ ಅಗತ್ಯ ಮಾಹಿತಿಗಳನ್ನು ಟೈಪ್ ಮಾಡಿ ಸಿದ್ಧ ಮಾಡಿಟ್ಟಿದ್ದರು. ನಾನು, ಶೇಖರ್‌ಪೂರ್ಣ, ರುದ್ರಮೂರ್ತಿ ಮತ್ತು ಕಿರಣ್ ಸಿದ್ಧಲಿಂಗಯ್ಯನವರ ಮನೆಯ ಬಳಿ ಸೇರಿದಾಗ ಸಮಯ ಹನ್ನೊಂದು ಘಂಟೆಯಾಗಿತ್ತು. ರಾಜರಾಜೇಶ್ವರಿ ನಗರದ ಐಡಿಯಲ್ ಟೌನ್‍ಷಿಪ್‍ನಲ್ಲಿನ ಅವರ ಮನೆ ಹುಡುಕುವುದು ಆರಂಭದಲ್ಲಿ ಸ್ವಲ್ಪ ಕಷ್ಟವೇ ಆಯಿತು. ಸಿದ್ಧಲಿಂಗಯ್ಯನವರು, ಮನೆಯಲ್ಲೇ ಇದ್ದರು. ಅವರು ಆಗ ತಾನೆ ಹಂಪಿಯಿಂದ ಮರಳಿ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆನಿಸುತ್ತದೆ. ನಾವು ಬಂದ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಹೊರಬಂದ ಅವರು ನಮಗೆ ಯಥೋಚಿತ ಸ್ವಾಗತ ನೀಡಿ ಎಲ್ಲರ ಪರಿಚಯ ಮಾಡಿಕೊಂಡರು. ಶೇಖರ ಪೂರ್ಣರವರ ಪರಿಚಯ ಅವರಿಗೆ ಮುಂಚೆಯೇ ಇದ್ದ ಕಾರಣ ತಕ್ಷಣ ಪೀಠಿಕೆಯಿಲ್ಲದೆ ಕಾರ್ಯಕ್ರಮಕ್ಕೆ ಅವರನ್ನು ಮುಖ್ಯ ಅತಿಥಿಗಳಾಗಿ ಬರುವಂತೆ ಕೇಳಿಕೊಂಡೆವು. ತಮ್ಮ ದಿನಚರಿಯಲ್ಲಿ ಕಾರ್ಯಕ್ರಮದ ದಿನಾಂಕ ಗುರುತು ಹಾಕಿಕೊಂಡ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಖಚಿತತೆ ನೀಡಿದರು. ಸ್ವಲ್ಪ ಸಮಯ ಅನೌಪಚಾರಿಕವಾಗಿ ಕನ್ನಡ, ಗಣಕ ತಂತ್ರಜ್ಞಾನ, ಕನ್ನಡಸಾಹಿತ್ಯ.ಕಾಂ ಎಂದು ಮಾತನಾಡುತ್ತಾ ಹೋದಾಗ, ಸಿದ್ದಲಿಂಗಯ್ಯನವರು ಈ ವಿಷಯಗಳಲ್ಲಿ ಸಲಹೆಯನ್ನು ಕೊಡಬೇಕೆಂದು ಕೇಳಿದರು.

ಮೊದಲಿಗೆ ನಮ್ಮ ಕನ್ನಡಸಾಹಿತ್ಯ.ಕಾಮ್‍ನ ಸ್ಥೂಲ ಪರಿಚಯ ಮಾಡಿಕೊಟ್ಟು ಸದ್ಯಕ್ಕೆ ಬಿಡುಗಡೆ ಮಾಡುತ್ತಿರುವ CMS 'ಸಂಪೂರ್ಣ' ಮತ್ತು ಕನ್ನಡ ಪದ ಪರೀಕ್ಷಕದ ಬಗ್ಗೆ ವಿವರಿಸಿದೆವು. ಗಣಕ ಮತ್ತು ಇಂಟರ್ನೆಟ್ ಲೋಕದ ಬಗ್ಗೆ ಪರಿಚಯವಿರದ ಸಿದ್ಧಲಿಂಗಯ್ಯನವರಿಗೆ ನಾವು ಸಂಬಂಧಿಸಿದ ಎಲ್ಲಾ ಮೂಲಭೂತ ಸಂಗತಿಗಳನ್ನು ಕುರಿತು ಹೇಳಬೇಕಾಗಿತ್ತು ಮತ್ತು ಅದು ಅತ್ಯಗತ್ಯವೂ ಆಗಿತ್ತು. ಕನ್ನಡ ಸಾಹಿತ್ಯ.ಕಾಂನಲ್ಲಿ ಅವರ 'ಊರುಕೇರಿ' ಪ್ರಕಟವಾಗಿದ್ದನ್ನು ಜ್ಞಾಪಿಸಿಕೊಂಡ ಅವರು ಊರುಕೇರಿ ಭಾಗ ಎರಡು ಬರಲಿರುವ ಬಗೆಗೆ ಮಾಹಿತಿ ನೀಡಿದರು.

ಅವರೊಂದಿಗೆ ಕೇಳಿಕೊಂಡ, ಚರ್ಚಿಸಿದ ಸಂಗತಿಗಳಲ್ಲಿ kannaadasaahithya.com ಗೆ ಸಂಬಂಧಿಸಿದ್ದು ಏನೂ ಇರಲಿಲ್ಲ. ಮತ್ತು ಕನ್ನಡಸಾಹಿತ್ಯ.ಕಾಂ ಗಾಗಿ ನಾವು ಏನನ್ನು ಕೇಳಿಕೊಳ್ಳಲಿಲ್ಲ. ಕೇಳಿಕೊಂಡದ್ದು, ಚರ್ಚಿಸಿದ್ದು ಇಡೀ ಕನ್ನಡ ಸಮುದಾಯದ ಗಣಕ ಬಳಕೆಯಲ್ಲಿರುವ ತೊಂದರೆಗಳು ಮತ್ತು ಅವುಗಳ ನಿವಾರಣೆ ಕುರಿತ ವಿಷಯಗಳಾಗಿದ್ದವು. ಚರ್ಚಿಸಿದ ವಿಷಯಗಳು ಈ ಕೆಳಕಂಡಂತಿವೆ.

೧) ಕನ್ನಡ ಪಠ್ಯದ ಗಣಕೀಕರಣದಲ್ಲಿರುವ ಬಹುದೊಡ್ಡ ಅಡ್ಡಿ ಎಂದರೆ ಕನ್ನಡದಲ್ಲಿ OCR(optical character recognition software) ಇಲ್ಲದಿರುವುದು. ಜೊತೆಗೆ ಉಚಿತ ಮತ್ತು ಯೋಗ್ಯವಾದ ಯೂನಿಕೋಡ್ ಫಾಂಟ್‍ಗಳು ಲಭ್ಯವಿಲ್ಲದಿರುವುದು. ಹೆಚ್ಚೂ ಕಮ್ಮಿ ಎಲ್ಲ ಭಾರತೀಯ ಭಾಷೆಗಳಲ್ಲೂ ಬಳಕೆಗೆ ಲಭ್ಯವಿರುವ OCR ಕನ್ನಡದಲ್ಲಿ ಇನ್ನೂ ಲಭ್ಯವಿಲ್ಲ. ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧೀನದಲ್ಲಿರುವ TDIL (Technology Development for Indian Languages) ಸಂಸ್ಥೆಯು ಕನ್ನಡವನ್ನು ಹೊರತುಪಡಿಸಿ ಎಲ್ಲಾ ಭಾಷೆಗಳಲ್ಲೂ OCR ಮತ್ತು ಯೂನಿಕೋಡ್ ಫಾಂಟ್‍ನಂತಹ ಆನ್ವಯಿಕ ತಂತ್ರಾಂಶಗಳನ್ನು ಉಚಿತವಾಗಿ ಬಳಕೆದಾರರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಆದರೆ ನಮ್ಮವರ ಈ ನಿಟ್ಟಿನ ನಿರ್ಲಕ್ಷತೆಯೂ ಅವರನ್ನು ಕನ್ನಡದ ಬಗ್ಗೆ ಅಸಡ್ಡೆ ತಾಳುವಂತೆ ಮಾಡಿರಬೇಕು, ಇಲ್ಲ TDILನವರೇ ಪೂರ್ವಗ್ರಹಪೀಡಿತರಾಗಿ ಯೋಜನೆಯನ್ನು ಕೈಬಿಟ್ಟಿರಬೇಕು. ಹಾಗಾಗಿದ್ದರೆ ಅದು ಕನ್ನಡ ಭಾಷೆಗಾದ ಅವಮಾನವೇ ಸರಿ. ಕೇಂದ್ರ ಸರ್ಕಾರದಿಂದ ಅನುದಾನ ಪಡೆದು ಕನ್ನಡ OCR ಅಭಿವೃದ್ದಿಯ ಯೋಜನೆ ಕೈಗೆತ್ತಿಕೊಂಡ IISc ಯವರು ಹಣ ಖರ್ಚು ಮಾಡಿಸಿದರೇ ವಿನಃ OCR ಬಿಡುಗಡೆ ಮಾಡಲಿಲ್ಲ .OCR ಗೆ ಸಂಬಂಧಪಟ್ಟ ಒಂದಿಷ್ಟು ಯೋಜನಾ ವರದಿ ಮತ್ತು ದೋಷಪೂರಿತವಾದ ನಾಲ್ಕು UTF font ಗಳನ್ನು ನೆಪಮಾತ್ರಕ್ಕೆ ಬಿಡುಗಡೆ ಮಾಡಿದ್ದು ಬಿಟ್ಟರೆ ಯೋಜನೆ ನಿಂತ ನೀರಾಗಿದೆ. ಈ ನಿಟ್ಟಿನಲ್ಲಿ ವಿಚಾರಣೆ ನಡೆಸಬಹುದಾಗಿದ್ದ ಕರ್ನಾಟಕ ಮಾಹಿತಿ ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು, ಮತ್ತು ಜನಪ್ರತಿನಿಧಿಗಳು ದಿವ್ಯಮೌನ ವಹಿಸಿದ್ದಾರೆ. ಇಷ್ಟೆಲ್ಲವನ್ನು ಕೇಳಿಸಿಕೊಂಡ ಸಿದ್ಧಲಿಂಗಯ್ಯನವರು ಎಲ್ಲ ಸಂಗತಿಗಳ ನೋಟ್ಸ್ ಮಾಡಿಕೊಂಡು ಅರ್ಥವಾಗದ ಅನೇಕ ಸಂಗತಿಗಳ ಬಗ್ಗೆ ಮತ್ತೆ ಮತ್ತೆ ಕೇಳಿ ವಿಷಯವನ್ನು ಮನನ ಮಾಡಿಕೊಂಡರು. ಶೀಘ್ರದಲ್ಲೇ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಕರೆದು, ಅವರು ಏನು ಹೇಳುತ್ತಾರೆಂಬುದನ್ನು ಕೇಳಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಅಗತ್ಯವಾದರೆ OCR ಮತ್ತು UTF font ಗಳ ಅಭಿವೃದ್ಧಿಯ ಹೊಣೆಯನ್ನು ಕರ್ನಾಟಕ ಸರ್ಕಾರವೇ ವಹಿಸಿಕೊಳ್ಳಲು ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿದರು.

೨) ಮೈಕ್ರೊಸಾಫ್ಟ್ ನವರ windows XPಯ ಕನ್ನಡ ಯೂನಿಕೋಡ್ ಫಾಂಟ್ Tunga ಹನ್ನೆರಡು ದೋಷಗಳನ್ನು ಒಳಗೊಂಡಿದ್ದರೂ ಅದನ್ನು ಖರೀದಿಸಿದ ಸರ್ಕಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ನೀತಿಯ ಬಗ್ಗೆ ಸಿದ್ಧಲಿಂಗಯ್ಯನವರಿಗೆ ವಿವರಿಸಲಾಯಿತು. ತುಂಗಾ ಫಾಂಟ್‍ನಲ್ಲಿ ತಪ್ಪುಗಳಿರುವುದು ಗೊತ್ತಾದ ಮೇಲೂ ಸರ್ಕಾರದ ಕಡೆಯಿಂದ ಸ್ಪಷ್ಟನೆ ಕೋರಿ ಮೈಕ್ರೊಸಾಫ್ಟ್ ನವರಿಗೆ ಒಂದು ಪತ್ರವೂ ಹೋಗಿಲ್ಲ. ಕನ್ನಡ ಸಾಹಿತ್ಯ.ಕಾಂನ ಅವಿರತ ಪ್ರಯತ್ನದಿಂದ ಮೈಕ್ರೊಸಾಫ್ಟ್ ಕಂಪನಿ ತಪ್ಪುಗಳನ್ನು ಸರಿಪಡಿಸಲು ಒಪ್ಪಿಕೊಂಡಿರುವುದನ್ನೂ ಶೇಖರಪೂರ್ಣರವರು ಸಿದ್ಧಲಿಂಗಯ್ಯನವರಿಗೆ ಮನವರಿಕೆ ಮಾಡಿಕೊಟ್ಟರು. ಒಂದು ವೇಳೆ ಕಂಪನಿ ದೋಷರಹಿತವಾದ ಫಾಂಟನ್ನು ಕೊಟ್ಟರೂ ಅದನ್ನು ಸರ್ಕಾರದ ಸಹಸ್ರಾರು ಗಣಕಗಳಲ್ಲಿ ಅನುಸ್ಥಾಪಿಸಲು ಆಗುವ ಖರ್ಚು ವೆಚ್ಚಗಳನ್ನು ಕಂಪನಿಗೇ ವಹಿಸುವ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆವು. ಇದರ ಬಗ್ಗೆಯೂ ಅಗತ್ಯ ವಿವರಗಳನ್ನು ಮನನ ಮಾಡಿಕೊಂಡ ಅವರು ಮೈಕ್ರೊಸಾಫ್ಟ್ ಜೊತೆಗಿನ ಖರೀದಿಯಲ್ಲಿ ಭ್ರಷ್ಟಾಚಾರದ ಸಾಧ್ಯತೆಗಳನ್ನು ತಳ್ಳಿಹಾಕಲಿಲ್ಲ. ಮಾಹಿತಿ ಸಿಂಧು ಯೋಜನೆಯಲ್ಲಿ ತರಬೇತಿಯಿಲ್ಲದ ಶಿಕ್ಷಕರನ್ನು ನೇಮಕ ಮಾಡಿಕೊಂಡು ಆ ಯೋಜನೆ ತನ್ನ ಕಾರ್ಯಸಾಧನೆಯಲ್ಲಿ ವಿಫಲವಾದ ಬಗ್ಗೆ ಬಹಳ ಹೊತ್ತು ಸಂವಾದ ನೆಡೆಯಿತು. ಗ್ರಾಮೀಣ ಸಮುದಾಯಕ್ಕೆ ಗಣಕ ಪರಿಚಯಿಸುವ ಕಾರ್ಯ ಅದೆಷ್ಟು ಕ್ಲಿಷ್ಟ ಮತ್ತು ಸೂಕ್ಷ್ಮ ಎಂಬ ಸಂಗತಿಯನ್ನು ಒಪ್ಪಿಕೊಂಡ ಸಿದ್ಧಲಿಂಗಯ್ಯ ನವರು ಮುಂದಿನ ದಿನಗಳಲ್ಲಿ ಅದು ಪ್ರಾಮುಖ್ಯತೆಯ ವಿಷಯವಾಗಬೇಕಾಗಿದೆಯೆಂದರು.

ಶೇಖರಪೂರ್ಣರವರು ಸಿದ್ಧಲಿಂಗಯ್ಯನವರನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡದ್ದು ಬಹಳ ವಿಶೇಷವಾಗಿತ್ತು. ಹಲವಾರು ಸಂಗತಿಗಳಲ್ಲಿ ಸಿದ್ಧಲಿಂಗಯ್ಯನವರೊಂದಿಗೆ ತಾವು ಹೊಂದಿರುವ ಭಿನ್ನಾಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ಹೊರಗೆಡವಿದರು. ಸಿದ್ಧಲಿಂಗಯ್ಯನವರೇ, ನನಗೆ ದಲಿತರ ವಿಷಯಕ್ಕೆ ಸಂಬಂಧಪಟ್ಟಂತೆ ನಿಮ್ಮ ಮೇಲೆ ಬಹಳ ಸಿಟ್ಟಿದೆ ಎಂದಾಗ ಅವರ ಮುಖದಲ್ಲಿ ಸ್ವೀಕೃತ ನಗೆಯಿತ್ತು. ಇಷ್ಟರಲ್ಲಾಗಲೇ ಅಲ್ಲಿ ಒಂದು ಆಪ್ತತೆಯ ಆತ್ಮೀಯ ವಾತಾವರಣ ನಿರ್ಮಾಣವಾಗಿತ್ತು. ಶೇಖರರವರು, ದಲಿತರು ಇಂಗ್ಲೀಷ್ ಕಲಿಸಿ ಎಂದು ಕೇಳುವುದನ್ನು ಬಿಟ್ಟು ಕಂಪ್ಯೂಟರ್ ಕಲಿಸಿ ಎಂದು ಒತ್ತಾಯಿಸಬೇಕೆಂದು ಸಲಹೆ ನೀಡಿದರು. ಹಾಗೆ ಮಾಡಿದರೆ ಕಂಪ್ಯೂಟರ್ ಜೊತೆಗೆ ಇಂಗ್ಲೀಷನ್ನು ಕಲಿಸಬೇಕಾಗುತ್ತದೆ. ಎರಡೂ ಒಟ್ಟೊಟ್ಟಿಗೆ ಈಡೇರಿಸಬೇಕಾದ ಬೇಡಿಕೆಗಳಾಗಬೇಕು ಎಂದರು. ಗ್ರಾಮೀಣರಿಗೆ ಕಂಪ್ಯೂಟರ್ ಕಲಿಸುವಾಗ ಕೈಪಿಡಿಗಳು ಸಂಪೂರ್ಣವಾಗಿ ಕನ್ನಡದಲ್ಲೇ ಇರಬೇಕು ಮತ್ತು ಅವರಿಗೆ ಸೂಕ್ತ ತರಬೇತಿ ಅನುಭವಿ ಶಿಕ್ಷಕರಿಂದಲೇ ಆಗಬೇಕು ಎಂಬ ಸಲಹೆಯನ್ನು ಸಿದ್ದಲಿಂಗಯ್ಯನವರು ಪರಿಗಣನೆಗೆ ತೆಗೆದುಕೊಂಡರು.

೩) ಕರ್ನಾಟಕ ಸರ್ಕಾರ ಅಧಿಕೃತವಾಗಿ ಹೊಂದಿರುವ ೫೬ ವೆಬ್‍ಸೈಟ್‍ಗಳಲ್ಲಿ ಸುಮಾರು ಮೂರ್ನಾಲ್ಕು ಮಾತ್ರ ಕನ್ನಡದಲ್ಲಿದ್ದು ಉಳಿದವು ಇಂಗ್ಲೀಷಿನಲ್ಲೇ ಇರುವುದನ್ನು ಸಿದ್ಧಲಿಂಗಯ್ಯನವರಿಗೆ ಹೇಳಿದೆವು. ಅವರಿಗೆ ಕನ್ನಡ ಅನುಷ್ಟಾನವೆಂಬುದು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗಿರುವ ವಿಷಯ ಮನದಟ್ಟಾಯಿತು. ಕನ್ನಡ ಅನುಷ್ಟಾನ ಅದನ್ನು ಇತ್ತೀಚಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ಅಳವಡಿಕೊಳ್ಳುವುದರೊಂದಿಗೆ ಆರಂಭವಾಗಬೇಕೆಂದು ಶೇಖರರವರು ಒತ್ತಾಯಿಸಿದರು. ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಸಿದ್ಧಲಿಂಗಯ್ಯನವರು ಶೀಘ್ರದಲ್ಲೇ ಈ ವಿಷಯವನ್ನು ಇತ್ಯರ್ಥ ಮಾಡಿಬಿಡಬೇಕೆಂದು ಹೇಳಿದರು. ಹಾಗೆಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಒಂದು ಪ್ರತ್ಯೇಕ ವೆಬ್‍ಸೈಟ್ ತುರ್ತಾಗಿ ಅಗತ್ಯವಿದ್ದು ಅದನ್ನು ಸಾಧ್ಯವಾದರೆ ನಿಮ್ಮ KSCಯವರೇ ಮಾಡಿಕೊಡಿ ಎಂದರು.

೪) ಕನ್ನಡ ಲಿಪಿ ತಂತ್ರಾಂಶ 'ಬರಹ' ದ ಶೇಷಾದ್ರಿವಾಸುರವರ ಕನ್ನಡ ಸೇವೆಯ ಬಗ್ಗೆ ಸಿದ್ಧಲಿಂಗಯ್ಯನವರಿಗೆ ಹೇಳಿದಾಗ ಅವರ ಬಗ್ಗೆ ಹೆಚ್ಚಿನ ವಿಷಯ ಹೇಳಿ ಎಂದರು. ಕಂಪ್ಯೂಟರ್‌ನಲ್ಲಿ ದುಬಾರಿಯಾಗಿದ್ದ ಕನ್ನಡ ತಂತ್ರಾಂಶಗಳ ಕಾಲದಲ್ಲಿ, ಶೇಷಾದ್ರಿ ವಾಸು ಬರಹ ತಂತ್ರಾಂಶವನ್ನು ರೂಪಿಸಿದರಲ್ಲದೆ ಎಲ್ಲರಿಗೂ ಉಚಿತವಾಗಿ ಹಂಚಿದರು. ಆ ಮೂಲಕ ಲಕ್ಷಾಂತರ ಕನ್ನಡಿಗರ ಲಿಪಿ ಬಳಕೆಗೆ ಮುನ್ನುಡಿ ಹಾಡಿದರು. ಸರ್ಕಾರಗಳು ಆ ಸಾಧ್ಯತೆಯ ಬಗ್ಗೆ ಯೋಚನೆಯನ್ನೇ ಮಾಡಿರದಿದ್ದ ಕಾಲದಲ್ಲಿ ಶೇಷಾದ್ರಿವಾಸುರವರು 'ಬರಹ'ವನ್ನು ರೂಪಿಸಿ ಅದನ್ನು ಲಾಭಕ್ಕೆ ಇಟ್ಟುಕೊಳ್ಳದೆ ಉಚಿತವಾಗಿ ಕೊಟ್ಟರು. ಇವತ್ತಿಗೂ ಹಾಗೆಯೇ ಕೊಡುತ್ತಿದ್ದಾರೆ. ಪ್ರಪಂಚದಾದ್ಯಂತ ಇಂದು ಸುಮಾರು ಹತ್ತು ಲಕ್ಷಕ್ಕಿಂತಲೂ ಅಧಿಕ ಕನ್ನಡಿಗರು ಗಣಕಗಳಲ್ಲಿ 'ಬರಹ' ಅನುಸ್ಥಾಪಿಸಿಕೊಂಡಿದ್ದಾರೆ. ಅವರ ಸೇವೆಯನ್ನು ಇದುವರೆಗೂ ಕರ್ನಾಟಕ ಸರ್ಕಾರವೇ ಆಗಲಿ, ಇತರ ಯಾವುದೇ ಸಂಸ್ಥೆಗಳಾಗಲಿ ಗುರುತಿಸಿ, ಗೌರವಿಸದಿರುವುದು ಶೋಚನೀಯ ಮತ್ತು ಅವರನ್ನು ಬಲ್ಲವರಿಗೆ ಅತ್ಯಂತ ದುಃಖದಾಯಕ ಸಂಗತಿ. Infact ಶೇಷಾದ್ರಿವಾಸುರವರು ಇದಕ್ಕೆಂದು ಕೊರಗಿದ್ದೇ ಇಲ್ಲ. ಅವರು ಇದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೆ ಕನ್ನಡ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಎಲ್ಲ ಭಾರತೀಯ ಭಾಷೆಗಳಲ್ಲೂ 'ಬರಹ' ತಂತ್ರಾಂಶವನ್ನು ಉಚಿತವಾಗಿಯೇ ಬಿಟ್ಟಿದ್ದಾರೆ. ಈ ವಿಷಯವನ್ನು ಶೇಖರಪೂರ್ಣರವರು ತುಂಬಾ ಭಾವುಕತೆಯಿಂದ ಹೇಳಿದಾಗ ಸಿದ್ಧಲಿಂಗಯ್ಯನವರು ತಕ್ಷಣವೇ ಶೇಷಾದ್ರಿವಾಸುರವರ ಹೆಸರನ್ನು ಈ ಸಾರಿಯೇ ಶಿಫಾರಸು ಮಾಡುವುದಾಗಿ ಹೇಳಿದರು. ನಾವು ಎಂತೆಂಥವರಿಗೋ ಪ್ರಶಸ್ತಿ ಕೊಡುತ್ತೇವೆ. ಇಂತಹ ದಕ್ಷರ ಬಗೆಗೆ - ನಿಮ್ಮಂಥವರು ಹೇಳದ ಹೊರತು ಸರ್ಕಾರದ ಕಣ್ಣಿಗೆ ಬೀಳಲಾರರು ಎಂದರು.

೫) ಇತ್ತೀಚೆಗೆ ಬಹು ಚರ್ಚಿತವಾಗುತ್ತಿರುವ ವಿಷಯ ಒಂದನೇ ತರಗತಿಯಿಂದಲೇ ಗ್ರಾಮೀಣ ಮಕ್ಕಳಿಗೆ ಇಂಗ್ಲೀಷ್ ಕಲಿಸಬೇಕೆಂಬುದು. ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಸುವ ಜೊತೆ ಜೊತೆಗೇ ಮಕ್ಕಳಿಗೆ ಕಂಪ್ಯೂಟರ್ ಪರಿಚಯ ಮಾಡಿಕೊಡಬೇಕು. ಅದಕ್ಕಾಗಿ ಒಂದೆರಡು ಕಂಪ್ಯೂಟರ್‌ಗೆ ಸಂಬಂಧಿಸಿದ ಪಾಠಗಳನ್ನಾದರೂ ಇಂಗ್ಲೀಷ್ ಪಠ್ಯದಲ್ಲಿ ಸೇರಿಸುವಂತೆ ಸಲಹೆ ನೀಡಿ ಎಂದು ಸಿದ್ಧಲಿಂಗಯ್ಯನವರನ್ನು ಕೇಳಿಕೊಂಡೆವು .

೬) ಕನ್ನಡದಲ್ಲಿ ಸಮಾನಾರ್ಥಕ ಪದಕೋಶವೊಂದರ ಅಗತ್ಯ ಬಹಳವಾಗಿರುವುದನ್ನು ಅವರ ಗಮನಕ್ಕೆ ತಂದೆವು. ಈಗಾಗಲೇ 'ನುಡಿ'ಯಲ್ಲಿ ಇರುವ ಪದಕೋಶದಲ್ಲಿ ಕೇವಲ ೪೦೦೦೦ ಪದಗಳಿದ್ದು ಅವು ಕನ್ನಡದ ವಿಶಾಲ ವ್ಯಾಪ್ತಿಗೆ ಏನೇನೂ ಸಾಲದು. ಮೈಸೂರು ವಿಶ್ವವಿದ್ಯಾನಿಲಯದವರು ಬಿಡುಗಡೆ ಮಾಡಿರುವ ಸಿ.ಡಿ ರೂಪದ ಶಬ್ದಕೋಶವೂ ಈ ನಿಟ್ಟಿನಲ್ಲಿ ಉಪಯೋಗವಿಲ್ಲ ಮತ್ತು ಅದು ಉಚಿತವೂ ಅಲ್ಲ. ಶಬ್ದಕೋಶವೆಂಬುದು ಪ್ರಚಲಿತ ಪದಗಳನ್ನು ಒಳಗೊಂಡಿದ್ದರೇ ಪರಿಪೂರ್ಣವೆನಿಸಿಕೊಳ್ಳುತ್ತದೆ. ಆದ್ದರಿಂದ ಬಹಳ ಬೇಗ ಶಬ್ದಕೋಶದ ಅಗತ್ಯವನ್ನು ಪೂರೈಸಬೇಕೆಂದು ಕೇಳಿಕೊಂಡೆವು.

ಎಲ್ಲಾ ವಿಷಯಗಳನ್ನೂ ತಮ್ಮ ಆರೆಂಟು ಪುಟಗಳ ನೋಟ್ಸ್‌ನಲ್ಲಿ ಪಟ್ಟಿ ಮಾಡಿಕೊಂಡ ಸಿದ್ಧಲಿಂಗಯ್ಯನವರು ನೀವು ಪ್ರಸ್ತಾಪಿಸಿದ ಪ್ರತಿ ಸಂಗತಿಗಳನ್ನು ಆದ್ಯತೆ ಮೇಲೆ ಸರ್ಕಾರದ ಮುಂದೆ ಇಡುತ್ತೇನೆ ಎಂದರು. ಅಧಿಕಾರಿಗಳ ಬೆವರಿಳಿಸಲು ಅವರಾಗಲೇ ಸಿದ್ಧವಾಗಿರುವುದು ಮಾತಿನಲ್ಲಿ ವೇದ್ಯವಾಗುತ್ತಿತ್ತು.

ಸಂವಾದದ ನಡುವೆ ಸಮಯ ಸರಿದದ್ದೇ ಗೊತ್ತಾಗಿರಲಿಲ್ಲ. ಮಧ್ಯೆ ಮಧ್ಯೆ ಅವರ ಮನೆಯವರು ಕೊಡುತ್ತಿದ್ದ ಟೀ ನಮ್ಮ ಉತ್ಸಾಹವನ್ನು ಇಮ್ಮಡಿಸಿತ್ತೆಂದರೆ ತಪ್ಪಾಗಲಾರದು. ಕೊನೆಯಲ್ಲಿ ಬೀಳ್ಕೊಡುವಾಗ ಮೈಕ್ರೊಸಾಫ್ಟ್ ವಿವಾದಕ್ಕೆ ಸಂಬಂಧಿಸಿದ ವೃತ್ತಪತ್ರಿಕೆಗಳ ವರದಿಗಳನ್ನು ನೀಡಲು ಕೇಳಿಕೊಡರು. ವರದಿಗಳನ್ನು ಮುಂದಿಟ್ಟುಕೊಂಡರೆ ಸರ್ಕಾರವನ್ನೇ ಆಗಲಿ, ಅಧಿಕಾರಿಗಳನ್ನೇ ಆಗಲಿ ಭಿಡೆಯಿಲ್ಲದೆ ಪ್ರಶ್ನಿಸಬಹುದೆಂಬುದು ಅವರ ಅಭಿಪ್ರಾಯ.

5.07.2006

ನಾವೇಕೆ ಹೀಗೆ....?

ಟಿವಿ ವಾಹಿನಿಗಳ ಅಬ್ಬರ ಮತ್ತು ಸರ್ಕಾರಿ ರೇಡಿಯೊ ವಾಹಿನಿಗಳ ಏಕತಾನತೆಯ ಕಾರ್ಯಕ್ರಮಗಳನ್ನು ಕೇಳಿ ಬೇಸತ್ತು ರೇಡಿಯೊವನ್ನು ಮೂಲೆಗೆಸೆದಿದ್ದ ಜನರನ್ನು ಮತ್ತೆ ರೇಡಿಯೋದೆಡೆಗೆ ಕಿವಿತೆರೆಯುವಂತೆ ಮಾಡಿದ ಕೀರ್ತಿ ಖಾಸಗಿ ರೇಡಿಯೋ ವಾಹಿನಿಗಳಿಗೆ ಸಲ್ಲಬೇಕು.ರೇಡಿಯೊ ಕೇಳುವುದು ಒಂದು ಸೀಮಿತ ಸಮಯಕ್ಕೆ ಮಾತ್ರ ಮೀಸಲು ಎಂಬಂತಿದ್ದ ಕಾಲದಲ್ಲಿ ಎಲ್ಲರೂ ಯಾವ ಕಾಲದಲ್ಲೂ ಕೇಳುವಂತೆ ಮಾಡಿದ್ದು ಖಾಸಗಿ ರೇಡಿಯೊ ವಾಹಿನಿಗಳು.ಖಾಸಗಿ ವಾಹಿನಿಗಳು ರೇಡಿಯೋ ಕೇಳುವ ರೀತಿ ನೀತಿಗಳನ್ನೇ ಬದಲಾಯಿಸಿದವು. ರೇಡಿಯೋದ ಆಕಾರದ ಬಗೆಗಿನ ಕಲ್ಪನೆಗಳು ಬದಲಾದವು. ರೇಡಿಯೊ ಪೆನ್ನಿನ ಒಳಗೆ ಅಷ್ಟೇ ಏಕೆ ಮೊಬೈಲ್‍ನ ಒಳಗೂ ಅಡಗಿಸಬಹುದಾದ ವಸ್ತುವಾಯಿತು. ನೂರು-ಸಾವಿರಗಳಲ್ಲಿದ್ದ೦ ರೇಡಿಯೊ ಬೆಲೆ ಹತ್ತಾರು ರೂಪಾಯಿಗಳಿಗೆ ಇಳಿಯಿತು. ರೇಡಿಯೊ ಜಾಕಿಗಳಿಗೆ ಎಲ್ಲಿಲ್ಲದ ಬೇಡಿಕೆ ಬಂತು. ಮಾತು- ಮಾತೆಂಬುದೇ ಅವರ ಬಂಡವಾಳವಾಯಿತು. ಜಾಹಿರಾತುದಾರರು ಟಿವಿ ಹಿಡಿತಕ್ಕೆ ಸಿಗದ ಗ್ರಾಹಕರನ್ನು ರೇಡಿಯೊ ಮೂಲಕ ತಲುಪಿದರು.

ಇವೆಲ್ಲ ಖಾಸಗಿ ರೇಡಿಯೋಗಳ ಬಗೆಗಿನ ಒಳ್ಳೆಯ ಮಾತುಗಳಾದವು. ಬೆಂಗಳೂರಿನಲ್ಲಿ ಮೊದಲ ಖಾಸಗಿ ರೇಡಿಯೊ ವಾಹಿನಿ 'ರೇಡಿಯೊ ಸಿಟಿ' ಪ್ರಾರಂಭವಾದಾಗ ಅದರಲ್ಲಿ ಕನ್ನಡದ ತಾತ್ಸಾರವಾಗುತ್ತಿದೆಂಬುದು ಬಹುಬೇಗ ಎಲ್ಲರ ಗಮನಕ್ಕೆ ಬಂತು. ಮಿಸ್ ಲಿಂಗೋಲೀಲ ಹೆಸರಿನಲ್ಲಿ ಕನ್ನಡದ ಅವಹೇಳನಕ್ಕೂ ಅದು ಮುಂದಾಯಿತು. ಇದರ ವಿರುದ್ಧ ಪ್ರತಿಭಟನೆಗಳಾದವು. ಆದರೆ ರೆಡಿಯೋ ಸಿಟಿಯ ಇಂಗ್ಲಿಷ್ ಮಾತು, ಹಗಲಿನ ಹಿಂದಿ ಹಾಡುಗಳು, ರಾತ್ರಿಯ ಪಾಶ್ಚಾತ್ಯ ಹಾಡುಗಳನ್ನು ಕೇಳುವುದರಲ್ಲಿ ಮೈಮರೆತಿದ್ದ ಕನ್ನಡಿಗರಿಗೆ ಚಳುವಳಿ-ಪ್ರತಿಭಟನೆಗಳು ವ್ಯರ್ಥ ಚಟುವಟಿಕೆಗಳಂತೆ ಕಂಡವು. ರೇಡಿಯೊ ಸಿಟಿಯ ವಿರುದ್ಧ ಜನಾಭಿಪ್ರಾಯವೊಂದು ರೂಪುಗೊಳ್ಳಲೇ ಇಲ್ಲ. ರೇಡಿಯೊ ಸಿಟಿಯ ವಿರುದ್ಧದ ಹೋರಾಟಕ್ಕೆ ಸಾಕಷ್ಟು ಬೆಂಬಲ ಕ್ರೋಡೀಕರಣದ ಯತ್ನವೂ ನೆಡೆಯಲಿಲ್ಲ. ರೇಡಿಯೊ ಸಿಟಿ ಕನ್ನಡವನ್ನು 'ಚೌ-ಚೌ ಬಾತ್' ಮಾಡಿತು. ಆಗಾಗ್ಗೆ ತಮಿಳು ಹಾಡುಗಳನ್ನು ಪ್ರಸರಿಸುವ ಉದ್ಧಟತನವೂ ನೆಡೆಯಿತು. ರೇಡಿಯೊ ಸಿಟಿ ಕನ್ನಡಿಗರ ನಿರಭಿಮಾನವನ್ನು ಚೆನ್ನಾಗಿಯೇ ಬಳಸಿಕೊಂಡಿತು. ಪ್ರತಿಭಟನೆಗಿಳಿದಿದ್ದವರು ಕಾವು ಆರಿದಂತೆ ಸುಮ್ಮನಾದರು. ರೇಡಿಯೋ ಸಿಟಿಯ ದೈನಂದಿನ ಕಾರ್ಯಕ್ರಮಗಳಲ್ಲಿ ಕನ್ನಡ ಇರಲಿಲ್ಲ ಮತ್ತು ಇಂದಿಗೂ ಇಲ್ಲ.

ಈಗ ರೇಡಿಯೊ ಮಿರ್ಚಿ 'ಸಕತ್ ಹಾಟ್ ಮಗಾ..' ಎಂದು ಕೂಗುತ್ತ ಬಂದಿದೆ. ಕನ್ನಡದ ನಟರಿಗೆ ಈ ಕೂಗು ರತ್ನನ ಪದದಂತೆ ಕೇಳಿಸಿದೆ. ಪುನೀತು, ಉಪೇಂದ್ರ, ಹಿರಣ್ಣಯ್ಯ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಅನೇಕರು "ರೇಡಿಯೋ ಮಿರ್ಚಿ ಕೇಳಿ, ನಾನೂ ಇದನ್ನೇ ಕೇಳೋದು. ಸಕತ್ ಹಾಟ್ ಮಗಾ.." ಎಂದು ಯಾವುದೇ ನಾಚಿಕೆಯಿಲ್ಲದೆ ತಮ್ಮ ಧ್ವನಿಯನ್ನು ಕೊಟ್ಟು ಆನಂದಿಸುತ್ತಿದ್ದಾರೆ. ರೇಡಿಯೊ ಮಿರ್ಚಿ ಹಿಂದಿ ಹಾಡುಗಳ ಮಧ್ಯೆ ಇವರ ಧ್ವನಿಯನ್ನು ಚೆನ್ನಾಗಿಯೇ ಉಪಯೋಗಿಸಿಕೊಳ್ಳುತ್ತಿದೆ. ರೇಡಿಯೋ ಮಿರ್ಚಿಯಲ್ಲಿ ನಿರೂಪಣೆಯೆಂಬುದು ಅರೆಬರೆ 'ಕನ್ನಡ' ಎಂಬುದನ್ನು ಬಿಟ್ಟರೆ ಎಲ್ಲಾ ಕಾರ್ಯಕ್ರಮಗಳೂ ಹಿಂದಿ ಇಂಗ್ಲೀಷ್‍ಮಯವಾಗಿವೆ. ಕನ್ನಡ ಹಾಡುಗಳಿಲ್ಲಿ ನಿಷಿದ್ಧ. ಅವರೊಂದಿಗೆ ಫೋನ್‍ನಲ್ಲಿ ಮಾತನಾಡಿದರೂ ಕಂಗ್ಲೀಷ್‍ನಲ್ಲಿ ಮಾತನಾಡುವವರಿಗೆ ಮಾತ್ರ ಪ್ರಾಮುಖ್ಯತೆ. ತಮಿಳುನಾಡಿನಲ್ಲಿ ತಮಿಳಿನ ಹಾಡುಗಳನ್ನು ಪ್ರಸಾರ ಮಾಡುವ ರೇಡಿಯೋ ಮಿರ್ಚಿ ಇಲ್ಲಿಯೂ ಮುಂದೆ ತಮಿಳಿನ ಹಾಡುಗಳನ್ನು ಪ್ರಸಾರ ಮಾಡಬಹುದು ಕನ್ನಡವೆಂಬುದು ರೇಡಿಯೊ ಸಿಟಿಯ ಎದುರು ಒಂದು ಬಾರಿ ಸೋತಿತ್ತು. ಈಗ ಮತ್ತೊಮ್ಮೆ ಸೋಲುತ್ತಿದೆ. ಈಗ ಕನ್ನಡವನ್ನು ಮಣಿಸುವ ಕೆಲಸಕ್ಕೆ ಕನ್ನಡ ಚಿತ್ರರಂಗದವರ ಅಧಿಕೃತ ಬೆಂಬಲ ಸಿಕ್ಕಿದೆ. ಅವರ ಅಣಿಮುತ್ತುಗಳು ರೇಡಿಯೊ ಮಿರ್ಚಿಯಲ್ಲಿ ನಿಯಮಿತವಾಗಿ ಪ್ರಸಾರವಾಗುತ್ತಿವೆ.

'ಮೋರೆ'ಗಳಿಗೆ ಮಸಿ ಬಳಿದು ವೀರರಾದವರು, ಕನ್ನಡಕ್ಕಾಗಿ ಪ್ರತ್ಯೇಕ ಪಕ್ಷ ಬೇಕೆಂದು ಒರಲುವವರು, ಕನ್ನಡದ 'ಹುಟ್ಟು ಹೋರಾಟಗಾರ'ರೆಂಬ ವಿಶೇಷಣವನ್ನು ಅಂಟಿಸಿಕೊಂಡಿರುವವರು, ಕನ್ನಡವನ್ನು ಕಾಯುವ ಕೆಲಸ ಮಾಡಬೇಕಾದ ಕನ್ನಡ ಮಾಧ್ಯಮಗಳವರು ಈಗಲೂ ಸುಮ್ಮನಿದ್ದಾರೆ. ಯಾಕೆಂದು ಕೇಳಿದವರಿಗೆ ನಾವು ರೇಡಿಯೊ ಕೇಳುವುದಿಲ್ಲ. ನೀವೂ ಕೇಳಬೇಡಿ ಅಷ್ಟೆ ಎನ್ನುತ್ತಾರೆ. ಇದು ಪಲಾಯನವಾದವಲ್ಲದೆ ಬೇರೇನೂ ಅಲ್ಲ. ಖಾಸಗಿವಾಹಿನಿಗಳ ಜಾಡು ಹಿಡಿದಿರುವ ಎಫ್.ಎಮ್.ರೈನ್‍ಬೊ ಕೂಡ ತನ್ನ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಪ್ರತಿಶತ ೫೦ರಷ್ಟು ಕಡಿಮೆ ಮಾಡಿ ಹಿಂದಿ, ಇಂಗ್ಲೀಷ್‍ಗೆ 'ಮೀಸಲಾತಿ' ಸೃಷ್ಟಿಸಿದೆ.ಯಾವುದೇ ಹೊಸ ಚಿತ್ರದ ಬಗ್ಗೆ ಜನರಿಗೆ ಕುತೂಹಲ ಹುಟ್ಟುವಂತೆ ಮಾಡಬೇಕೆಂದರೆ ಅದರ ಹಾಡುಗಳನ್ನು ಪದೇ ಕೇಳಿಸುವ ತಂತ್ರವೊಂದು ಜಾರಿಯಲ್ಲಿದೆ. ಇದು ಕನ್ನಡ ಚಿತ್ರರಂಗದವರಿಗೆ ತಿಳಿದಿಲ್ಲವೆಂದೇನೂ ಅಲ್ಲ. ಇದೇ ರೇಡಿಯೊ ಮಿರ್ಚಿ ಚೆನ್ನೈನಲ್ಲಿ ಹೊಸಹೊಸ ತಮಿಳು ಹಾಡುಗಳನ್ನು ಪ್ರಸಾರ ಮಾಡುತ್ತಿದೆ. ತಮಿಳರಿಗೆ ಹಿಂದಿಯನ್ನು ಉಣಬಡಿಸುವ ಕೆಲಸ ಯಾವ ಮಿರ್ಚಿಗಳಿಂದಲೂ ಆಗದು. ಅದು ತಮಿಳರ ಅಭಿಮಾನವೆನ್ನಿ, ದುರಭಿಮಾನವೆನ್ನಿ-ಕನ್ನಡಿಗರಿಗೆ ಅದೂ ಇಲ್ಲ.ಈಗ ಮತ್ತೊಮ್ಮೆ 'ರೇಡಿಯೋಗಳಲ್ಲಿ ಕನ್ನಡ'ದ ವಿಷಯ ಚರ್ಚೆಗೆ ಬರುತ್ತಿದೆ. ಪ್ರತಿಭಟನೆಯ ದನಿಗಳು ಸಣ್ಣಗೆ ಕೇಳಿಸುತ್ತಿವೆ. ಜನಾಭಿಪ್ರಾಯವೊಂದನ್ನು ರೂಪಿಸಲು ಇದು ಸಕಾಲವಾಗಿದೆ. ಇದೇ ಸಂದರ್ಭದಲ್ಲಿ ಕನ್ನಡಿಗರ ಹಂಗಿನಲ್ಲಿರುವ ಕನ್ನಡ ಚಿತ್ರರಂಗದವರಿಗೊಂದು ಪಾಠ ಕಲಿಸಬೇಕಿದೆ. ಅಣ್ಣಾವ್ರ ಸಾವಿನ ಜೊತೆಯಲ್ಲಿಯೇ ಚಿತ್ರರಂಗದವರ(ಅವರ ಮಕ್ಕಳೂ ಸೇರಿದಂತೆ) ಕನ್ನಡಾಭಿಮಾನ ಮರೆಯಾಯಿತೆ ಎಂಬುದು ಸ್ಪಷ್ಟವಾಗಬೇಕಾಗಿದೆ. ಜಾಣರಾದರೆ ಅವರು ರೇಡಿಯೋ ಮಿರ್ಚಿಯ ಜೊತೆಗಿನ ತಮ್ಮ ಸಂಬಂಧವನ್ನು ಕಳಚಿಕೊಳ್ಳುತ್ತಾರೆ. ಮುಖ್ಯವಾಗಿ ಜಡ್ಡುಗಟ್ಟಿರುವ ಕನ್ನಡದ ಮನಸ್ಸುಗಳು ಮೈಕೊಡವಿಕೊಂಡು ಮೇಲೇಳಬೇಕಿದೆ. 'ಕನ್ನಡ'ವನ್ನು ಟಿವಿಗಿಂತ ಚೆನ್ನಾಗಿ ರೇಡಿಯೊದಲ್ಲಿ ಜನಕ್ಕೆ ತಲುಪಿಸಬಹುದೆಂಬುದನ್ನು ಅರಿಯಬೇಕಾಗಿದೆ. ಬಿ.ಎಂ.ಟಿ.ಸಿ.ಬಸ್ಸುಗಳಲ್ಲಿ ಮಾತ್ರ ಉಳಿದುಕೊಂಡಿರುವ ಕನ್ನಡವನ್ನು ಬೆಂಗಳೂರಿನಲ್ಲೆಡೆ ಒಂದು 'ಅಗತ್ಯ'ವನ್ನಾಗಿ ಮಾಡಬೇಕಿದೆ. ನಾರಾಯಣಗೌಡರಂಥವರು ರೇಡಿಯೋ ಸಿಟಿ,ಮಿರ್ಚಿಗಳಿಗೆ ಮಸಿ ಬಳಿಯುವ ಧೈರ್ಯ ಮಾಡಬೇಕಾಗಿದೆ. ವಾಟಾಳರಂಥವರು ಕನ್ನಡ ಹೋರಾಟವೆಂಬ ವಿಶೇಷಣಕ್ಕೆ ಅರ್ಥ ನೀಡಬೇಕಿದೆ. ಕನ್ನಡಕ್ಕಾಗಿ ಪಕ್ಷ ಕಟ್ಟುವವರು ಮೊದಲು ಕನ್ನಡವನ್ನು ಕಟ್ಟಬೇಕಿದೆ. ಹಾಗೆಯೇ 'ಹಿಂದಿ ಹೇರಿಕೆಯ' ವಿರುದ್ಧ ಆಂದೋಲನ ತಮಿಳುನಾಡಿನ ಮಾದರಿಯಲ್ಲಿ ರೂಪುಗೊಳ್ಳಬೇಕಿದೆ. ಅಂತಿಮವಾಗಿ ರೇಡಿಯೊ ಸಿಟಿ, ಮಿರ್ಚಿಗಳಿಗೆ ಕನ್ನಡವನ್ನು ಅರ್ಥ ಮಾಡಿಸುವ ಕೆಲಸದಲ್ಲಿ ಎಲ್ಲರೂ ಒಂದಾಗಬೇಕಿದೆ.

4.22.2006

ಕನ್ನಡಸಾಹಿತ್ಯ.ಕಾಮ್ ನ ವಿಶೇಷ ಸಭೆಯ ವರದಿ:

ಸ್ನೇಹಿತರೆ,

ಆವತ್ತು ಭಾನುವಾರ ಬಸವನಗುಡಿಯ ಎನ್.ಆರ್.ಕಾಲೋನಿಯಲ್ಲಿ ಬಸ್ಸಿಳಿದಾಗ ಬೇಸಿಗೆಯ ಧಗೆ ಮುಖಕ್ಕೆ ರಾಚುತ್ತಿತ್ತು. ಮೈಯ ಶಕ್ತಿಯೆಲ್ಲಾ ಬೆವರಾಗಿ ಹರಿದು ಕರ್ಚೀಪು ಒದ್ದೆಯಾಗಿತ್ತು.ಬಿ.ಎ೦.ಶ್ರೀ.ಸ್ಮಾರಕ ಕಲಾಭವನದಲ್ಲಿ ಕೆ.ಎಸ್.ಸಿ ಸರ್ವ ಸದಸ್ಯರ ಸಭೆಯಿದೆಯೆ೦ದು ಕಿರಣ್ ಫೋನ್ ಮೂಲಕ ಹೇಳಿದಾಗ ಇದೊ೦ದು ಮಾಮೂಲಿ ಸಭೆಯಿರಬೇಕೆ೦ದೆನಿಸಿತ್ತು.
ಕಳೆದ ಒ೦ದೆರಡು ತಿ೦ಗಳಿನಿ೦ದಲೂ ಯಾಹೂ ಗ್ರೂಪ್ಸ್ ನಲ್ಲಿ ಕೆ.ಎಸ್.ಸಿಯ ಉಳಿವಿನ ಬಗ್ಗೆ ಚರ್ಚೆಗಳು ನೆಡೆಯುತ್ತಿದ್ದದ್ದು ಎಲ್ಲರಿಗೂ ತಿಳಿದಿತ್ತು. ಸಭೆಗೆ ಸುಮಾರು ೩೦ ಸದಸ್ಯರು ಬ೦ದಿದ್ದರು.ಎಲ್ಲರ ಮುಖದಲ್ಲೂ ಆತ೦ಕಭರಿತ ಉತ್ಸಾಹವಿತ್ತು.ಬ೦ದವರಿಗೆಲ್ಲ ಕ.ಸಾ.ಕಾ೦.ನ ಆಗುಹೋಗುಗಳ ಬಗೆಗಿನ ಮುದ್ರಿತ ಪ್ರತಿಗಳನ್ನು ಕೊಡಲಾಯಿತು.ಸದಸ್ಯರ ಪರಸ್ಪರ ಪರಿಚಯಗಳಾದವು. ನಿರ್ದೇಶಕ ಪಿ.ಶೇಷಾದ್ರಿ, ನಟ ಸುಚೇ೦ದ್ರಪ್ರಸಾದ್,ಸತೀಶಗೌಡ,ಶೇಖರಪೂರ್ಣ,ರುದ್ರಮೂರ್ತಿ,ವಿನ್ಸೆ೦ಟ್ ಮು೦ತಾದ ಉತ್ಸಾಹಿತರಿದ್ದರು. ಕ.ಸಾ.ಕಾ೦.ನ ಉಳಿವಿನ ಬಗ್ಗೆ ಬಹಳ ಆತ೦ಕದಿ೦ದಿದ್ದ ಕಿರಣ್ ಪ್ರಾಸ್ತಾವಿಕವಾಗಿ ಮಾತನಾಡಿ ಸಭೆಯನ್ನು ಪ್ರಾರ೦ಭಿಸಿದರು. ಶೇಖರ್ ರವರೇ ಈ ಸಭೆಯ ಕೇ೦ದ್ರಬಿ೦ದು. ಅವರು ಕಟ್ಟಿದ ಕ.ಸಾ.ಕಾ೦. ಇಷ್ಟು ವರ್ಷಗಳಲ್ಲಿ ಸಾಕಷ್ಟು ಸ೦ಕಷ್ಟಗಳನ್ನೆದುರಿಸಿಯೂ ಬದುಕುಳಿದಿದೆ. ಕ.ಸಾ.ಕಾ೦.ನ ಅಸ್ಠಿತ್ವಕ್ಕಾಗಿನ ಹೋರಾಟದಲ್ಲಿ ಕನ್ನಡಸಾಹಿತ್ಯ ಯಾಹೂ ಗು೦ಪಿನ ೪೦೦ ಸದಸ್ಯರು ಏನೂ ಮಾಡಿಲ್ಲವೆ೦ಬ ನೋವು ಅವರನ್ನು ಕಾಡುತ್ತಿದ್ದುದು ಸಹಜವಾಗಿತ್ತು. ಆದರೆ ಕ.ಸಾ.ಕಾ೦ನ ಸ್ಠಾಪಕರಾದ ಶೇಖರ್_ರವರೇನೂ ಯಾಹೂ ಗು೦ಪನ್ನು ಆರ೦ಭಿಸಿರಲಿಲ್ಲ. ಯಾಹೂ ಗು೦ಪಿನಲ್ಲಿ ಕ.ಸಾ.ಕಾ೦ನ ಬಗ್ಗೆ ಗೊತ್ತಿಲ್ಲದ ಅಧಿಕ ಸ೦ಖ್ಯೆಯ ಸದಸ್ಯರಿರುವುದೂ ಅವರಿಗೆ ಗೊತ್ತಿದೆ. ೪೦೦ ಜನರಲ್ಲಿ ೩೦ ಜನ ಸದಸ್ಯರು ಮಾತ್ರ ಈ ಸಭೆಗೆ ಬ೦ದಿದ್ದೇ ಅದಕ್ಕೆ ಸಾಕ್ಷಿ. ಇನ್ನೊ೦ದು ವೈಶಿಷ್ಟ್ಯವೇನೆ೦ದರೆ ಎಸ್ಪಿಯವರು ಈ ಸಭೆಗೆ ನಿರೀಕ್ಷಿಸಿದ್ದು ಹತ್ತರಿ೦ದ ಹದಿನೈದು ಸದಸ್ಯರನ್ನು ಮಾತ್ರ. ಆದರೆ ಬ೦ದಿದ್ದವರು ಅವರ ನಿರೀಕ್ಷೆಗಿ೦ತ ಹೆಚ್ಚಿದ್ದರು.

ಶೇಖರರವರೇ ಚೆರ್ಚೆಯನ್ನು ಪ್ರಾರ೦ಭಿಸಿದರು. ಅದಕ್ಕೆ ಮು೦ಚೆ ಕಸಾಕಾ೦ನ ಆರ೦ಭ, ನ೦ತರ ಅದನ್ನು ನೆಡೆಸಿಕೊ೦ಡು ಬ೦ದ ಬಗೆ ಮು೦ತಾದುವುಗಳ ಬಗ್ಗೆ ಸ್ತೂಲವಾಗಿ ಮಾತನಾಡಿದರು.ಕನ್ನಡ ತ೦ತ್ರಾ೦ಶದಲ್ಲಿರುವ ತಾ೦ತ್ರಿಕ ಸವಾಲುಗಳ ವಿಷಯ ಚರ್ಚೆಯಲ್ಲಿ ಶೇಖರರವರೋ೦ದಿಗೆ ಎಲ್ಲರೂ ಪಾಲ್ಗೊ೦ಡರು.

ಕನ್ನಡದಲ್ಲಿ ಸದ್ಯಕ್ಕೆ ಉಚಿತವಾಗಿ ಸಿಗುತ್ತಿರುವ ತ೦ತ್ರಾ೦ಶಗಳು ಎರಡು ಮಾತ್ರ. ಒ೦ದು 'ಬರಹ', ಇನ್ನೊ೦ದು 'ನುಡಿ'. ಎರಡಕ್ಕೂ ಅವುಗಳದ್ದೇ ಆದ ಪರಿಮಿತಿಗಳಿವೆ. ಖಾಸಗಿ ಕ೦ಪನಿಗಳ ತ೦ತ್ರಾ೦ಶಗಳು ಅವುಗಳ ದುಬಾರಿ ಬೆಲೆಯಿ೦ದ ಸಾಮಾನ್ಯರ ಕೈಗೆಟುಕುವತಿಲ್ಲ. ಇ೦ಥ ಸ೦ದರ್ಭದಲ್ಲಿ ಎಲ್ಲಾ ಗಣಕಗಳ ಬಳಕೆ ವ್ಯವಸ್ತೆಗಳಲ್ಲೂ(ಫ್ಲಾಟ್ ಫಾರ೦ಗಳು) ಬಳಸಬಹುದಾದ ತ೦ತ್ರಾ೦ಶವೊ೦ದರ ಅಗತ್ಯ ಬಹಳ ಇದೆ. ಉದಾಹರಣೆಗೆ ಕನ್ನಡ 'ಬರಹ' ದಲ್ಲಿ 'ಸ್ಪೆಲ್ ಚೆಕರ್' ಇಲ್ಲದಿರುವುದರಿ೦ದ ಕಸಾಕಾ೦ನಲ್ಲಿ ಕಾಗುಣಿತ ದೋಷ ತಿದ್ದುವುದೇ ತಲೆನೋವಿನ ಸ೦ಗತಿ. ಏನೆಲ್ಲ ಚೆನ್ನಾಗಿ ಪ್ರೂಫ್ ರೀಡಿ೦ಗ್ ಮಾಡಿದರೂ ದೋಷಗಳು ಕಣ್ಣಿಗೆ ರಾಚುತ್ತವೆ.

ಸತೀಶಗೌಡರವರು ಹೊಸ ತ೦ತ್ರಾ೦ಶದ ಅಭಿವೃದ್ಧಿಯಲ್ಲಿ ಸರಕಾರದ ಪಾಲೂ ಇರಬೇಕೆ೦ಬ ಅಭಿಪ್ರಾಯ ಮ೦ಡಿಸಿದರು. ಅವರು ಇ೦ದೆಲ್ಲಾ ಸಾಕಷ್ಟು ನಿಯೋಗಗಳನ್ನು ಅಧಿಕಾರಸ್ಥರ ಬಳಿಗೆ ಒಯ್ದಿದ್ದರು. ಈಗಲೂ ಮುಖ್ಯಮ೦ತ್ರಿಯವರನ್ನು ಭೇಟಿ ಮಾಡಿ ಸರಕಾರದ ಸಹಾಯ ಯಾಚಿಸುವ ಆಲೋಚನೆಯಲ್ಲಿದ್ದರು. ಆದರೆ ಶೇಖರರವರೂ ಸೇರಿದ೦ತೆ ಬಹಳ ಜನರ ನಿಲುವು ಇದಕ್ಕಿ೦ತ ಭಿನ್ನವಾಗಿತ್ತು. ಅವರಿಗೆ ಬಡವರನ್ನು ತಲುಪಬೇಕಾದ ಹಣ(ತಲುಪುವುದೋ ಇಲ್ಲವೋ ಬೇರೆ ಮಾತು) ಇ೦ಟರ್ನೆಟ್ಟನ್ನು ಬಳಸುವ ಮೇಲ್ಮಧ್ಯಮ ವರ್ಗದವರ ಅನುಕೂಲಕ್ಕೆ ಬಳಸುವುದು ಇಷ್ಟವಿರಲಿಲ್ಲ. ಸತೀಶಗೌದ ಕನ್ನಡದ ತ೦ತ್ರಾಶ ಅಭಿವೃದ್ಧಿಗೆ ಯಾರೂ ಉತ್ಸಾಹ ತೋರುತ್ತಿಲ್ಲ ಎ೦ದು ಹಿ೦ದೊಮ್ಮೆ ನೆಡೆದ ವಿಫಲ ಯತ್ನಗಳ ಬಗ್ಗೆ ವಿವರಿಸಿದರು.

ರುದ್ರಮೂರ್ತಿಯವರು 'ಲ್ಯಾಪ್ ಟ್ಯಾಪ್'ನಲ್ಲಿ ಅವರು ಅಭಿವೃದ್ಧಿಪಡಿಸಿದ 'ಸ್ಪೆಲ್ ಚೆಕರ್'ನ ಪ್ರಾತ್ಯಕ್ಷಿತೆ ನೆಡೆಸಿಕೊಟ್ಟರು. ಸದ್ಯಕ್ಕೆ ಸ್ಪೆಲ್ ಚೆಕರ್ ವಿ೦ಡೋಸ್ ಎಕ್ಸ್ ಮಾತ್ತು ನಿ೦ಡೋಸ್-೨೦೦೩ಯಲ್ಲಿ ಮಾತ್ರ. ಕೆಲಸ ಮಾಡುತ್ತಿದ್ದು ಪ್ರಾರ೦ಭಿಕ ಹ೦ತದಲ್ಲಿದೆಯೆ೦ದರು. ಪದಕೋಶದಲ್ಲಿ ಸದ್ಯಕ್ಕೆ ೧೫ ಸಾವಿರ ಪದಗಳಿದ್ದು ಹೆಚ್ಚಿನ ಸ೦ಖ್ಯೆಯ ಪದಗಳನ್ನು ಸೇರಿಸಬೇಕೆ೦ದರು. ಅವರ ಈ ಪ್ರಯತ್ನ ಎಲ್ಲರ ಪ್ರಶ೦ಸೆಗೆ ಪಾತ್ರವಾಯಿತು.

ಹಸೀನಾ ಚಿತ್ರಪ್ರದರ್ಶನಕ್ಕೆ ಕೆಲವು ಸದಸ್ಯರು ಹೋಗಬೇಕಾಗಿದ್ದರಿ೦ದ ಫೊಟೋ ಸೆಷನ್ ನೆಡೆಸಿ ಅವರನ್ನು ಬೀಳ್ಕೊಡಲಾಯಿತು. ಪ್ರದರ್ಶನವನ್ನು ಆಯೋಜಿಸಿದ್ದ ಸತೀಶಗೌಡ ಮು೦ತಾದವರು ಲಘು ಉಪಾಹಾರ ಸೇವಿಸಿ ಸಭೆಯಿ೦ದ ನಿರ್ಗಮಿಸಿದರು.

ಶೇಖರರವರು ಕಸಾಕಾ೦ ಓದುಗರ ಸ೦ಖ್ಯೆಯನ್ನು ಹೆಚ್ಚಿಸಲು ಅದನ್ನೊ೦ದು 'ಬ್ರಾ೦ಡ್ ನೇಮ್'ಆಗಿ ಮಾಡಬಾರದೇಕೆ? ಎ೦ಬ ಪ್ರಶ್ನೆಯನ್ನು ಸುಚೆ೦ದ್ರರವರ ಮು೦ದಿಟ್ಟರು. ಸುಚೇ೦ದ್ರರವರು ಜಾಹಿರಾತು ಕ್ಷೇತ್ರದಲ್ಲೂ ವ್ಯವಹರಿಸುತ್ತಿರುವ ಕಾರಣದಿ೦ದ ಈ ಪ್ರಶ್ನೆ ಕೇಳಲಾಗಿತ್ತು.ಅದಕ್ಕೆ ಅವರೂ ಒಪ್ಪಿಕೊ೦ಡರು. ಸದಸ್ಯರೆಲ್ಲಾ ಇಮೇಲ್ ಕಳಿಸುವಾಗ ಕಸಾಕಾ೦ ಬಗೆಗಿನ ಸಿಗ್ನೇಚರ್ ಕಳಿಸುವ೦ತೆ ಮನವಿ ಮಾಡಿದರು.

ನ೦ತರ ಕಸಾಕಾ೦ನ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಚರ್ಚೆಯಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಕಸಾಕಾ೦ ಅನ್ನು ಕನಿಷ್ಟ ತಿ೦ಗಳಿಗೊ೦ದಾವರ್ತಿ ಅಪ್ ಡೇಟ್ ಮಾಡಲು ವಾರ್ಷಿಕವಾಗಿ ಸುಮಾರು ಎರಡು ಲಕ್ಷ ರೂಪಾಯಿಗಳು ಬೇಕಾಗುತ್ತವೆ. ಮು೦ದಿನ ದಿನಗಳಲ್ಲಿ ಲೇಖಕರಿಗೆ ಸ೦ಭಾವನೆಯನ್ನು ಕೊಡುವ ಅಗತ್ಯವಿದೆ. ಇವೆಲ್ಲ ಅಗತ್ಯಗಳನ್ನು ಪೂರೈಸಿಕೊಳ್ಳಲು ಬೇಕಾಗುವ ಹಣ ಸದಸ್ಯರಿಗೆ ಕಸಾಕಾ೦ನಲ್ಲಿ ಜಾಹಿರಾತಿಗಾಗಿ ಮಾರುವುದರ ಮೂಲಕ ಪಡೆಯಬಹುದು. ಜಾಗದ ಕನಿಷ್ಟ ಬೆಲೆ ೫೦೦ ರೂಪಾಯಿಗಳಿರಬೇಕು.
ಈ ಜಾಹಿರಾತು ಜಾಗವನ್ನು ಸದಸ್ಯರು ಬೇರೆ ಯಾರಿಗಾದರೂ ಮಾರಬಹುದು ಅಥವ ಸ್ವತಃ ಉಪಯೋಗಿಸಬಹುದು. ಈ ಯೋಜನೆ ಎಲ್ಲರಿಗೂ ಒಪ್ಪಿಗೆಯಾಯಿತು. ಸುಚೇ೦ದ್ರರವರು ಸುಧಾಮೂರ್ತಿ ಯವರ ಬಳಿ ಸಹಾಯ ಯಾಚಿಸಿದರೆ ಹೇಗೆ? ಎ೦ದದ್ದು ವಿವಾದವಾಯಿತು. ಕಸಾಕಾ೦ಗೆ ಹೊಸ ರೂಪ ನೀಡುವ ಜವಾಬ್ದಾರಿಯನ್ನು ವಿವಿಧ ಸಮಿತಿಗಳಿಗೆ ವಹಿಸಲಾಯಿತು. ಆ ಸಮಿತಿಗಳು

೧.ಸ೦ಪಾದಕೀಯ ಮ೦ಡಳಿ
೨.ಆಡಳಿತ ಮ೦ಡಳಿ
೩.ಕಸಾಕಾ೦ ತ೦ತ್ರಾ೦ಶ ಅಭಿವೃದ್ಧಿ ಸಮಿತಿ
೪.ಕೀ-ಇನ್ ಗು೦ಪು
೫. ಮೇಲ್ವಿಚಾರಣಾ ಸಮಿತಿ

ಶೇಖರ್ ಮತ್ತು ಸುಚೇ೦ದ್ರರವರನ್ನು ಮೇಲ್ವಿಚಾರಣಾ ಸಮಿತಿಗೂ,ಶೇಖರಪೂರ್ಣರವರನ್ನು ಕಸಾಕಾ೦ ಸ೦ಚಾಲಕರನ್ನಾಗಿ ಒಮ್ಮತದಿ೦ದ ಆಯ್ಕೆ ಮಾಡಲಾಯಿತು. ಸಭೆ ಉತ್ತಮ ನಿರ್ಧಾರಗಳನ್ನು ತೆಗೆದುಕೊ೦ಡ ನ೦ತರ ಮುಗಿಯಿತು.

(ಇ೦ಥದ್ದೊ೦ದು ಸಭೆಯನ್ನು ಅಚ್ಚುಕಟ್ಟಾಗಿ ಆಯೋಜಿಸಿ, ನಿರ್ವಹಿಸಿದ ರುದ್ರಮೂರ್ತಿ,ಕಿರಣ್ ಮತ್ತು ಗೆಳೆಯರ ಪ್ರಯತ್ನ ಮನನೀಯ. ಅವರ ಸ್ಫೂರ್ತಿ ,ಸ೦ಕಲ್ಪ ಹೀಗೇ ಮು೦ದುವರೆಯಲೆ೦ದು ಆಶಿಸುವೆ.)
ನಮಸ್ಕಾರಗಳೊ೦ದಿಗೆ
ಅರೇಹಳ್ಳಿರವಿ

ಕೆ‍ಎಸ್‍ಸಿ ಬೆಂಗಳೂರು ಸಭೆಯ ವರದಿ:
(ವರದಿ ಸಿದ್ಧಪಡಿಸಿದವರು ರುದ್ರಮೂರ್ತಿ)
------------------------

ಮೂರು ವರ್ಷಗಳ ಸುಧೀರ್ಘ ಅವಧಿಯ ನಂತರ ಕೆ‍ಎಸ್‍ಸಿ ಯ ಬೆಂಗಳೂರು ಸಭೆಯನ್ನ ದಿನಾಂಕ ೨೬ನೇ ಮಾರ್ಚ್ ೨೦೦೬ ರಂದು ನೆಡೆಸಲಾಯಿತು. ಸದಸ್ಯರ ಪರಿಚಯದ ನಂತರ, ಬಾರಿ ಬಾರಿಗೂ 'ಕೆ‍ಎಸ್‍ಸಿ ಯನ್ನ ಕೊಲೆ ಮಾಡುವ ಆಲೋಚನೆ ನಿಮಗೆ ಏಕೆ?' ಎಂದು ಕಿರಣ್ ಅವರು ಶೇಖರ್ ಪೂರ್ಣರಿಗೆ ಮೊದಲ ಪ್ರಶ್ನೆ ಎಸೆಯುವ ಮೂಲಕ ಸಭೆಯ ಚರ್ಚೆಗೆ ಚಾಲನೆ ನೀಡಿದರು. ಅದಕ್ಕೆ ಉತ್ತರ ರೂಪದಲ್ಲಿ ಕೆ‍ಎಸ್‍ಸಿ ಯ ಚರಿತ್ರೆಯನ್ನ ಒಮ್ಮೆ ಸಿಂಹಾವಲೋಕನ ಮಾಡಿಸಿದ ಶೇಖರ್ ಪೂರ್ಣ, ಈ ಅಪರೂಪದ ತಾಣದ ವೈಶಿಷ್ಟ್ಯಗಳನ್ನ, ಅದರಲ್ಲಿ ಬಳಸಿರುವ ಅಂತರ್ರಾಷ್ಟ್ರೀಯ ಮಾನದಂಡಗಳನ್ನ, ಭೇಟಿ ಕೊಡುವ ಜನರ ಅಂಕಿಸಂಖ್ಯೆಗಳನ್ನ, ಅದು ಗಳಿಸಿರುವ ಜನಪ್ರಿಯತೆಯನ್ನ ಹಾಗೂ ಅದಕ್ಕೆ ಹೊರ ನಾಡಿನಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಗಳನ್ನ ಸಭೆಯೆದುರು ತೆರೆದಿಟ್ಟರು.

ಈ ಸಭೆಯಲ್ಲಿ ಚರ್ಚಿತವಾದ ಪ್ರಮುಖ ವಿಷಯಗಳು ಕೆಳಕಂಡಂತೆ ಇವೆ.

೧. ಕೆ‍ಎಸ್‍ಸಿ ಅಳಿವು - ಉಳಿವು
-------------------------
ಈ ವಿಷಯದ ಬಗೆಗೆ ನಡೆದ ಬಿಸಿ-ಬಿಸಿ ಚರ್ಚೆಯಲ್ಲಿ ಹಲವಾರು ಸಾಧ್ಯತೆಗಳನ್ನ ಪರಿಶೀಲಿಸಲಾಯಿತು
ಅ. ಕೆ‍ಎಸ್‍ಸಿ ತಾಣವನ್ನ ಉಚಿತವಾಗಿ ಇರಿಸದೆ, ಸದಸ್ಯತ್ವ ನೊಂದಣಿ ಮೂಲಕ ಹಣ ಸಂಗ್ರಹಿಸುವುದು
ಬ. ಸಾರ್ವಜನಿಕ ಸಂಸ್ಠೆಗಳಿಂದ ಚಂದಾ ಎತ್ತುವುದು (ಸುಧಾ ಮೂರ್ತಿ ಯವರಂತಹ ವ್ಯಕ್ತಿಗಳ ಸಹಕಾರ ಕೋರುವುದು - ಪ್ರಾಮುಖ್ಯತೆ ಪಡೆದ ಅಂಶ)
ಕ. ತಾಣದಲ್ಲಿ ಸದಸ್ಯರ ವ್ಯಕ್ತಿಗತ ಜಾಹಿರಾತುಗಳನ್ನ ಪ್ರದರ್ಶಿಸುವುದು, ಇದಕ್ಕಾಗಿ ಒಂದು ವರ್ಷದ ಅವಧಿಗೆ ೫೦೦ ರೂ ಗಳಂತೆ ಹಣ ವಿಧಿಸುವುದು.
ಡ. ಸರಕಾರದ ನೆರವು ಕೋರುವುದು.

ಈ ಎಲ್ಲ ಅಂಶಗಳ ಸಾಧ್ಯತೆಗಳ ಬಗೆಗೆ ಸದಸ್ಯರ ವಿಚಾರ ಮಂಡನೆಗಳಿಗೆ ಶೇಖರ್‍‍ಪೂರ್ಣ ಅವರು ತಮ್ಮ ಅನುಭವಗಳನ್ನ ಉದಾಹರಿಸುವುದರ ಮೂಲಕ ತೃಪ್ತಿಕರವಾದ ಉತ್ತರ ನೀಡಿದರು. ಕೊನೆಯಲ್ಲಿ ಸದಸ್ಯರಿಗೆ ವಾರ್ಷಿಕ ೫೦೦ ರಂತೆ ವ್ಯಕ್ತಿಗತ ಜಾಹಿರಾತು ಸ್ಥಳ ಮೀಸಲಿಡುವ ಸೂಚನೆಗೆ ಅನುಮೋದನೆ ನೀಡಲಾಯಿತು.

೨. ಕೆ‍ಎಸ್‍ಸಿ ಯನ್ನು ಬೆಳಸುವ ನಿಟ್ಟಿನಲ್ಲಿ ತಂಡಗಳ ರಚನೆ
---------------------------------------------
ತಾಣದ ಪ್ರಮುಖ ಕೆಲಸಗಳಾದ ಬರಹ ಕೀ-ಇನ್, ಪ್ರೂಫ್-ರೀಡಿಂಗ್, ಸಂಪಾದಕೀಯ, ತಾಂತ್ರಿಕ ನಿರ್ವಹಣೆ, 'ಬ್ರಾಂಡ್ ಪ್ರೊಮೊಶನ್' ಹಾಗು ಆಡಳಿತಾತ್ಮಕ ವಿಶಯಗಳಲ್ಲಿ ಪರಿಣಿತರಾದ ಸದಸ್ಯರನ್ನ ತಂಡಗಳನ್ನಾಗಿ ಕಟ್ಟುವ ವಿಷಯ ಪ್ರಸ್ತಾಪಕ್ಕೆ ಹಾಜರಿದ್ದ ಸದಸ್ಯರಿಂದ ಭಾರಿ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಕೆಳಕಂಡಂತೆ ರಚಿಸಲು ಅನುಮೋದಿಸಲಾಯಿತು.

  1. ಸಂಪಾದಕೀಯ ಮಂಡಳಿ:
  2. ಶೇಖರ್‍ ಪೂರ್ಣ.
  3. ಪ್ರಶಾಂತ್ ಪಂಡಿತ್
  4. ರಕ್ಷಿತ್.

೨.ಬರಹ ಕೀ-ಇನ್ ತಂಡ

೧. ರೋಹಿತ್ - ನಿರ್ವಾಹಕ
೨. ಗೋವಿಂದ್ ರಾಜ್
೩. ಕಿಶೋರ್ ಚಂದ್ರ
೪. ಸುರೇಶ್ ನಾಗರಾಜ್
೫. ಕಿರಣ್
೬. ಪ್ರೀತಮ್ ಏಕಳಾಸಪುರ್
೭. ರಾಜೇಶ ಯಾದವ್
೮. ಭಾಸ್ಕರ್ ತೈಲಗೆರಿ
೯. ಹರ್ಷ ವರ್ಧನ
೧೦. ಮಂಜುನಾಥ ಕುಲಕರ್ಣಿ.
೧೧. ಸ್ವರ್ಣ ಕುಮಾರ್
೧೨. ರವೀಶ
೧೩. ಶ್ರೀಧರ್
೧೪. ರುದ್ರಮೂರ್ತಿ.
೧೫. ಪ್ರಶಾಂತ್ ಕಾಮತ್
೧೬. ರಾಘವ
೧೭. ರಾಘವೆಂದ್ರ ಕೃಷ್ಣಮೂರ್ತಿ
೧೮. ರಮೇಶ್ ಬೈರಿ
೧೯. ಸತವೀರಪ್ಪ
೨೦. ಕೆ.ಎಸ್. ಶಿವಕುಮಾರ್
೨೧. ಶೇಖರ್ ಪೂರ್ಣ
೨೨. ಶ್ರೀಲಕ್ಷ್ಮಿ
೨೩. ತೇಜಸ್ವಿ
೨೪. ವಸಿಷ್ಠ.
೨೫. ವಿನೋದ್ ಗಾಡ್ಗಿಳ್.


  • ೩. ತಾಂತ್ರಿಕ ತಂಡ
    ೧. ರಘು
    ೨. ಶ್ರೀಧರ್
    ೩. ರುದ್ರಮೂರ್ತಿ
    ೪. ರವೀಶ
    ೫. ಕೆ.ಎಸ್.ಶಿವಕುಮಾರ್
    ೬. ಭಾಸ್ಕರ್ ತೈಲಗೇರಿ
    ೭. ವಿನೋದ್ ಗಾಡ್ಗಿಳ್
    ೮. ರಾಘವೇಂದ್ರ ಕೃಷ್ಣಮೂರ್ತಿ
    ೯. ಸತವೀರಪ್ಪ
    ೧೦. ಶೇಖರ್ ಪೂರ್ಣ.
    ೧೧. ಕೆ.ಎಸ್.ಶಿವಕುಮಾರ್
    ೧೨. ರಮೇಶ್ ರಾವ್
    ೧೩. ರವೀಂದ್ರ
    ೧೪. ಸತೀಶ್ ಕುಮಾರ್

ಆಡಳಿತಾತ್ಮಕ ಕಾರ್ಯ ತಂಡ:
೧.ವಿನ್ಸೆಂಟ್

ತಾಣದ ಎಲ್ಲ ವಿಷಯಗಳ ಮೇಲ್ವಿಚಾರಕರಾಗಿ ಇರಲು ಶ್ರೀ ಶೇಖರ್ ಪೂರ್ಣ ಅವರನ್ನು ಬಲವಂತವಾಗಿ ಒಪ್ಪಿಸಲಾದರೂ, ಅವರು ಮುಂದಿನ ಒಂದು ವರ್ಷ ಮಾತ್ರ ಕರ್ತವ್ಯ ನಿರ್ವಹಿಸಿ ನಿವೃತ್ತರಾಗುವ ನಿರ್ಧಾರ ಪ್ರಕಟಿಸಿ ಸದಸ್ಯರೆಲ್ಲರನ್ನೂ ಚಿಂತೆಗೀಡುಮಾಡಿದರು.

ಪ್ರಕಟಿಸಲಾದ ಈ ತಂಡಗಳ ಸುಲಭ ನಿರ್ವಹಣೆ ಹಾಗು ವಿಚಾರ ವಿನಿಮಯಕ್ಕಾಗಿ ಈಗ ಹಾಲಿ ಇರುವ ಯಾಹೂ ಗ್ರೂಪ್ ಜೊತೆಗೆ ಆಯಾ ತಂಡಗಳ ಯಾಹೂ ಗ್ರೂಪ್ ಗಳನ್ನು ರಚಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ತಿಂಗಳ ಕೊನೆಯೊಳಗಾಗಿ ಅವು ಕಾರ್ಯರೂಪಕ್ಕೆ ಬರುವಂತೆ ಯೋಜನೆ, ಅವುಗಳ ಕಾರ್ಯವ್ಯಾಪ್ತಿ ಗಳನ್ನು ರೂಪಿಸಲು ಶ್ರೀ ಕಿರಣ್ ಹಾಗೂ ಶ್ರೀ ಮೂರ್ತಿಯವರನ್ನು ಕೋರಲಾಯಿತು.
ಇವುಗಳ ಬಗೆಗಿನ ವರದಿಗಳು ಸಧ್ಯದಲ್ಲೇ ಹೊರಬೀಳಲಿವೆ.

೩. ಕನ್ನಡ ಸಾಫ್ಟ್‍ವೇರ್ ರಚನೆಗೆ ಮಾರ್ಗಸೂತ್ರಗಳು

ಕೆ‍ಎಸ್‍ಸಿ ಯ ವ್ಯಾಪ್ತಿಗೆ ಬರುವ ಕೆಲಸಗಳಿಗಾಗಿ ಕೆಲವು ಸಣ್ಣ ತಾಂತ್ರಿಕ ಸಲಕರಣೆಗಳನ್ನ ರೂಪಿಸುವ ಅಗತ್ಯತೆ ಕುರಿತು ಶೇಖರ್ ಪೂರ್ಣ ಪ್ರಸ್ತಾಪಿಸಿದರು. ಈ ಅಂಶದ ಮೊದಲ ಹೆಜ್ಜೆಯಾಗಿ ಎಮ್.ಎಸ್.ಆಫೀಸ್ ಅಪ್ಲಿಕೇಶನ್ ಗಳಲ್ಲಿ ಬಳಸಬಹುದಾದ 'ಕನ್ನಡ ಪದ ಪರೀಕ್ಷಕ'ದ ಪ್ರಯೋಗಿಕ ಪ್ರಾತ್ಯಕ್ಷಿಕೆಯನ್ನ ಶ್ರೀ ಮೂರ್ತಿಯವರು ನೀಡಿದರು. 'ಕಂಟೆಂಟ್ ಮ್ಯಾನೇಜ್‍ಮೆಂಟ್ ಟೂಲ್', ಯೂನಿಕೋಡ್ ನ ಪ್ರಸ್ತುತತೆ, ತಾಂತ್ರಿಕವಾಗಿ ಹಿಂದುಳಿದ ಗ್ರಾಮಾಂತರ ಪ್ರದೇಶಗಳಲ್ಲೂ ಬಳಸಬಹುದಾದ ಕನ್ನಡ ತತ್ರಾಂಶ ಗಳ ರಚನೆಗೆ ಒತ್ತು ನೀಡುವಂತೆ ಅವರು ಕನ್ನಡ ಐ.ಟಿ. ತಂತ್ರಜ್ಞ ರಿಗೆ ಕರೆ ನೀಡಿದರು.

೪. ಕೆ‍ಎಸ್‍ಸಿ ಹಾಗೂ ಕಾಪಿರೈಟ್

ಇತ್ತೀಚಿನ ದಿನಗಳಲ್ಲಿ ಕೆ‍ಎಸ್‍ಸಿ ತಾಣದಲ್ಲಿ ಭಾರೀ ಸಂಚಲನ ಉಂಟುಮಾಡಿದ ವಿಷಯ ಕಾಪಿರೈಟಿನದು. ಈ ವಿಷಯದ ಬಗ್ಗೆ ಆಗಲೇ ನಿರ್ಧಾರ ಥೆಗೆದುಕೊಂಡು ಸೂಕ್ತ ಸಲಹೆಗಳನ್ನ ಮಂಡಿಸಲು ಶ್ರೀ ವಿವೇಕ್, ಶ್ರೀ ಕೇಶವ ಮಳಗಿ ಹಾಗು ಮತ್ತಿಬ್ಬರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ ಎಂದು ಶೇಖರ್ ಪೂರ್ಣ ಹೇಳಿ ಈ ವಿಷಯವನ್ನು ಮೊಟಕುಗೊಳಿಸಿದರು.

ಇವೆಲ್ಲವುಗಳ ವಿಚಾರವಾಗಿ ಯಹೂ ಗ್ರೂಪ್ ನಲ್ಲಿ ಚರ್ಚಿಸುವುದರ ಜೊತೆಗೆ, ಸಾಧವಾದಷ್ಟು ಮಟ್ಟಿಗೆ ವರ್ಷಕ್ಕೆ ೨-೩ ಬಾರಿಯಾದರೂ ಇಂತಹ ಸಭೆಗಳನ್ನ ನೆಡೆಸಿ ಕೆ‍ಎಸ್‍ಸಿ ಯಂತ ಅಪರೂಪದ ತಾಣ ರಕ್ಷಣೆಗೆ ಕಂಕಣಬದ್ಧರಾಗುವ ನಿರ್ಧಾರ ತೆಗೆದುಕೊಂಡು, ತಿಂಡಿ-ತೀರ್ಥ, ಗ್ರೂಪ್ ಫೋಟೋದಂತಹ ಅನಿವಾರ್ಯ 'ಸಭಾ ಮರ್ಯಾದೆ'ಗಳನ್ನ ಪೂರೈಸಿ ಸಭೆಯನ್ನು ಮುಗಿಸಲಾಯಿತು.

ಜನಪ್ರಿಯ ಲೇಖನಗಳು