12.19.2006
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಎಲ್ಲ ಸದಸ್ಯರ ಸಭೆ
ಗೆಳೆಯರೆ,
"ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ದೇಸಗತಿ ಭಾಷೆಗಳು ಮತ್ತು ಸಂಸ್ಕೃತಿ" - ಈ ವಿಷಯದ ಮೇಲೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣವೊಂದನ್ನು, ನಡೆಸುವ ಪ್ರಸ್ತಾವನೆಯೊಂದಿಗೆ, ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದವರು ಕಳೆದ ಸೆಪ್ಟೆಂಬರ್ 16 ರಂದು ಬೆಂಗಳೂರಿನಲ್ಲಿ ಸಭೆಯೊಂದನ್ನು ನಡೆಸಿ, ಅಲ್ಲಿ, ಈ ಪ್ರಸ್ತಾವನೆಯನ್ನು ಚರ್ಚೆಗೆತ್ತಿಕೊಂಡು, ಸಭೆಯು ಸರ್ವಾನುಮತದಿಂದ ವಿಚಾರಸಂಕಿರಣವನ್ನು ನಡೆಸಲು ತೀರ್ಮಾನಿಸಿತು. ಇದರ ತಾರ್ಕಿಕ ಬೆಳವಣಿಗೆಯಾಗಿ, ವಿವಿಧ ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳ ನಿರ್ವಹಣೆಯ ಹೊಣೆಗಾರಿಕೆಯನ್ನು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಹಲವಾರು ಸ್ವಯಂಪ್ರೇರಿತ ಸದಸ್ಯರು ವಹಿಸಿಕೊಂಡಿದ್ದು, ವಿಚಾರಸಂಕಿರಣದ ಸಿದ್ಧತೆಗಳಲ್ಲಿ ತೊಡಗಿದ್ದಾರೆ.
ನಂತರದ ಬೆಳವಣಿಗೆಯಲ್ಲಿ, ಬೆಂಗಳೂರಿನ 'ಕ್ರೈಸ್ಟ್ ಕಾಲೇಜ್ ಆಫ್ ಲಾ', ಇವರು ಈ ವಿಚಾರಸಂಕಿರಣದ ಸಹ-ಪ್ರಾಯೋಜಕರಾಗಿರಲು ಮುಂದೆ ಬಂದಿದ್ದು, ಎರಡು ದಿನಗಳ ಈ ವಿಚಾರಸಂಕಿರಣಕ್ಕೆ ತಮ್ಮ ಕಾಲೇಜಿನ ಆಡಿಟೋರಿಯಂ ಅನ್ನು, ಹಾಗೂ ದೃಶ್ಯ, ಶ್ರವಣ ವ್ಯವಸ್ಥೆಗಳನ್ನು ಬಳಸಿಕೊಳ್ಳಲು ಅನುಮತಿ ನೀಡಿರುತ್ತಾರೆ.
ಇದೀಗ ವಿವಿಧ ಸಮಿತಿಗಳಲ್ಲಿ ಆಗಿರುವ ಕಾರ್ಯಗಳ ಅವಲೋಕನ ಮಾಡುವ ಹಾಗೂ ಮುಂದಿನ ಕೆಲಸಗಳನ್ನು ಯೋಜಿಸುವ ಉದ್ದೇಶದಿಂದ, ಈ ವಿಚಾರಸಂಕಿರಣದ ಆಯೋಜಿಸುವಿಕೆಯಲ್ಲಿ ತೊಡಗಿಸಿಕೊಂಡಿರುವವರ ಹಾಗೂ ತೊಡಗಿಸಿಕೊಳ್ಳಲು ಇಚ್ಛಿಸುವವರ, ಹಾಗೂ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದ ಎಲ್ಲ ಸದಸ್ಯರ ಸಭೆ ನಡೆಸಲಾಗುತ್ತಿದೆ. ಸಭೆಯ ವಿವರಗಳು ಕೆಳಕಂಡಂತಿವೆ.
ಸಮಯ: ಸಂಜೆ 5.30 ಕ್ಕೆ
ದಿನಾಂಕ: 23.12.2006 ಶನಿವಾರದಂದು
ಸ್ಥಳ: ಕ್ರೈಸ್ಟ್ ಕಾಲೇಜು ಆವರಣ,
ಬೆಂಗಳೂರು ಡೈರಿ ಎದುರು, ಹೊಸೂರು ರಸ್ತೆ,
ಬೆಂಗಳೂರು - 29
ಗಮನಿಸಿ: ವಿವಿಧ ಭೌಗೋಳಿಕ ನೆಲೆಗಳಲ್ಲಿರುವ ಕನ್ನಡಸಾಹಿತ್ಯ.ಕಾಂ ಬೆಂಬಲಿಗರಿಗೂ ಹಾಗೂ ಆಸಕ್ತರಿಗೂ ಈ ಸಭೆಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಡುವ ಪ್ರಯತ್ನವಾಗಿ, ಅಂತರ್ಜಾಲದ ಹಾಗೂ ವೆಬ್ಕ್ಯಾಮ್ ಬಳಸಿ ಕಾನ್ಫರೆನ್ಸಿಂಗ್ ನಡೆಸಲಾಗುತ್ತಿದೆ.
ಯಾಹೂ ಮೆಸಂಜರಿನಲ್ಲಿರುವ, ಧ್ವನಿ ಹಾಗೂ ದೃಶ್ಯ ಬಿತ್ತರಣಾ ವ್ಯವಸ್ಥೆಯನ್ನು ಬಳಸಿಕೊಳ್ಳಲು. ಆಸಕ್ತರು, ಭಾಗವಹಿಸುವ ಉದ್ದೇಶವುಳ್ಳವರು ದಯಮಾಡಿ, ತಮ್ಮ ಮೆಸಂಜರಿನ ಸ್ನೇಹಿತರ ಪಟ್ಟಿಗೆ shekarpoorna@ yahoo.com ಐಡಿಯನ್ನು ಸೇರಿಸಿಕೊಂಡು, ಶನಿವಾರದ ದಿನ ಸಭೆಯ ವೇಳೆ, ಭಾರತೀಯ ಕಾಲಮಾನ ೫.೦೦ ಕ್ಕೆ ತಮ್ಮ ಮೆಸಂಜರಿಗೆ ಲಾಗಿನ್ ಆಗಿ ಕಾನ್ಫರೆನ್ಸಿಂಗ್ನಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಅಲ್ಲದೆ, ಸದಸ್ಯರ ಬಳಿ ವೆಬ್ಕ್ಯಾಮ್ , ಮೈಕ್, ಹೆಡ್ಫೋನುಗಳ ಸೌಲಭ್ಯವಿದ್ದರೆ, ಅವುಗಳನ್ನು ಈ ಸಭೆಯಲ್ಲಿ ಬಳಸಿಕೊಳ್ಳಬೇಕಾಗಿ ಕೋರಿಕೆ..
ಈ ಪ್ರಯತ್ನವು, ತಾಂತ್ರಿಕವಾಗಿ ಲಭ್ಯವಿರುವ ಸೌಲಭ್ಯಗಳನ್ನೆಲ್ಲ ಅರ್ಥಪೂರ್ಣವಾಗಿ ಬಳಸಿಕೊಂಡು, ಕಸಾಕಾಂ ಸಮುದಾಯದಲ್ಲಿ ಹೆಚ್ಚಿನ ಸಂವಹನಕ್ಕೆ ಎಡೆಮಾಡಿಕೊಡುವ ಸಣ್ಣ ಪ್ರಯೋಗವಾಗಿದ್ದು, ಇದನ್ನು ಯಶಸ್ವಿಯಾಗಿಸುವಲ್ಲಿ ತಮ್ಮೆಲ್ಲರ ಸಹಕಾರವನ್ನು ಕೋರುತ್ತಿದ್ದೇವೆ.
ಈ ವಿಚಾರಸಂಕಿರಣವು ನಿಂತನೀರಾಗಿರುವ ಚಿಂತನಾ ಕ್ಷೇತ್ರವನ್ನು, ಹಾಗೂ ತಾಂತ್ರಿಕ ಕ್ಷೇತ್ರವನ್ನು ಪರಸ್ಪರ ಮುಖಾಮುಖಿಯಾಗಿಸಿ, ಆ ಮೂಲಕ ತಂತ್ರಜ್ಞಾನವನ್ನು ಹೆಚ್ಚು ಪ್ರಜಾಸತ್ತಾತ್ಮಕ ಹಾಗೂ ಜನೋಪಯೋಗಿಯಾಗಿಸುವ ನಿಟ್ಟಿನಲ್ಲಿ ಅಗತ್ಯವಾದ ಹೊಸ ಆಲೋಚನೆ, ಚಿಂತನೆಗಳಿಗೆ ದಿಕ್ಸೂಚಿಯಾಗಲಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ದೇಶದಲ್ಲಿ ಹೊಸ ಆರ್ಥಿಕ ಉತ್ಕ್ರಾಂತಿಗೆ ಕಾರಣವಾದ, ಬೆಂಗಳೂರು, ಕರ್ನಾಟಕ ಹಾಗೂ ಕನ್ನಡಿಗರು ಇಂತಹ ವಿಶಿಷ್ಟ ಪ್ರಯೋಗಮಾಡಹೊರಟಿರುವುದು, ಕನ್ನಡಿಗರೆಂಬ ನಮ್ಮ ಅಭಿಮಾನಕ್ಕೆ ಮತ್ತೊಂದು ಗರಿ.
ಈ ಪ್ರಯೋಗದಲ್ಲಿ ಭಾಗಿಯಾಗಲು, ಆಸಕ್ತರಾದ, ಇಂತಹ ಕಾರ್ಯವೊಂದರಲ್ಲಿ ಭಾಗವಹಿಸಿ, ನಮ್ಮ ಸಮಾಜಕ್ಕೆ ಹೆಚ್ಚು ಹತ್ತಿರವಾಗುವ, ಮುಕ್ತ ಮನಸ್ಸಿನ ಎಲ್ಲರಿಗೂ ತೆರೆದ ಬಾಗಿಲಿನ ಸ್ವಾಗತ..
ಕ್ರೈಸ್ಟ್ ಕಾಲೇಜಿನ ಆವರಣದಲ್ಲಿ ಭೇಟಿಯಾಗೋಣ..
ಶೇಖರ್ ಪೂರ್ಣ
ksctanda@gmail. com
ಮೊಬೈಲ್: 9321430015
ಮನೆ: ೦೮೦ ೨೬೪೮೪೬೧೭
ಜನಪ್ರಿಯ ಲೇಖನಗಳು
-
ಬರಹ: ಕಿರಣ್ ಎಂ ನಿರ್ವಾಹಕರು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಬೆಂಗಳೂರು ಈ ಶಿಬಿರದ ಮಾಸ್ಟರ್ ಪ್ಲಾನ್ ಎರಡು ತಿಂಗಳು ಹಳೆಯದ್ದು. ಬೆಂಗಳೂರಿನ ಧಾವಂತದಲ್ಲಿ ನಮ್ಮನ್ನೆ...
-
ಅಂ ತೂ ಕಳ್ಳಭಟ್ಟಿಯ ಹೆಸರಿನಲ್ಲಿ methyl alcohol ಅಥವ methanol ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಸಾರಾಯಿ ನಿಷೇಧವಿರುವ ಕರ್ನಾಟಕ ಮತ್ತು ನಿಷೇಧವಿಲ್ಲದಿರುವ ತಮ...
-
ಲೇಖಕರು: ಎಚ್.ಎಸ್. ಪ್ರಭಾಕರ, ಹಾಸನ ಲೇಖನ ಕೃಪೆ: ಸಂಯುಕ್ತ ಕರ್ನಾಟಕ ಈ ಜಗತ್ತಿನಲ್ಲಿ ನಾವು ನೀವು ಸೇರಿದಂತೆ ಜೀವಿಗಳು ಯಾವ ಕಾರಣಕ್ಕಾಗಿ ಜೀವಿಸಬೇಕು; ಜೀವಿಸುವ ಉದ್ದೇಶವ...
-
( ಸ್ನೇಹಿತರೆ, ಲೇಖನ ಓದಿಯಾದ ಮೇಲೆ questnet ಮತ್ತು ಇದೇ ತರದ ಇನ್ನಿತರ ಚೈನ್ ಮಾರ್ಕೆಟಿಂಗ್ ಕಂಪನಿಗಳಿಂದ ನಿಮ್ಮ ಮತ್ತು ಪರಿಚಿತರಿಗಾದ ವಂಚನೆಯನ್ನು ದಯಮಾಡಿ comment ...
-
ಕೆಲವೊಮ್ಮೆ ಹಾಗಾಗುತ್ತೆ. ಎದುರಾಗುವ ಪ್ರತಿ ಸನ್ನಿವೇಷವೂ ನಮಗೆ ವಿರುದ್ಧವಾಗಿ ವರ್ತಿಸುತ್ತಿರುತ್ತದೆ. ಕನ್ನಡ ಅಂತರ್ಜಾಲ ಜಗತ್ತಿನಲ್ಲಿ ಕನ್ನಡದ ಪ್ರಾತಿನಿಧ್ಯತೆಯನ್ನು ಐದ...
-
ಶ್ರೀಮಾತಾ, ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ. ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’...
-
(ಸ್ನೇಹಿತರೆ ಬೆಂಗಳೂರು ಮಾತನಾಡುವವರಿಗೆ ಮುಕ್ತ ಅವಕಾಶ ನೀಡಿದೆ. ಇಲ್ಲಿ ಕನ್ನಡಿಗರನ್ನು ಬಯ್ಯಬಹುದು. ಅನ್ಯಭಾಷಿಗರನ್ನು ಅವರ ಭಾಷೆಯಲ್ಲಿಯೇ ಓಲೈಸಬಹುದು. ಬೀದಿ ನಾಯಿಗಳ ಪರ...
-
ಬರಹಗಾರರು - ವಿಶಾಲಮತಿ , `ಪುಸ್ತಕ ಪ್ರೀತಿ' ಬ್ಲಾಗ್ ಅಂತರ್ಜಾಲದ ಓದುಗರಿಗೆ ಕನ್ನಡ ಪುಸ್ತಕಗಳ ಬಗೆಗಿನ ಪ್ರೀತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಬ್ಲಾಗ್ ಪ್ರಪಂಚದಲ...
-
ಸ್ನೇಹಿತರೆ, ‘Gold questnet ಪೋಸ್ಟ್ಮಾರ್ಟಂ:ಚಿನ್ನ ಮಾರಿ ಲಕ್ಷ ಗಳಿಸಿ’ ಲೇಖನ ಇಷ್ಟೊಂದು ಸಂಚಲನಕ್ಕೆ ಕಾರಣವಾಗುತ್ತೆ ಅನ್ನೋ ಯೋಚನೆ ನನಗಿರಲಿಲ್ಲ. ಇ-ಮೈಲ್ನಲ್ಲಿ, ಫ...
-
ಕನ್ನಡಸಾಹಿತ್ಯ.ಕಾಂ ಸಾಮೂಹಿಕ ಚಟುವಟಿಕೆಯಾಗುವ ನಿಟ್ಟಿನಲ್ಲಿ ಕಳೆದ ತಿಂಗಳು ನೆಡೆದ ಸಂಪೂರ್ಣ ಮತ್ತು ಪದಪರೀಕ್ಷಕ ಬಿಡುಗಡೆ ಸಮಾರಂಭ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದಲ್...
No comments:
Post a Comment