3.08.2008

`ವಿಷಾದ ಕಾಲ' : ಒಂದು ಕವನ

ನಡು ಮಧ್ಯಾಹ್ನದಲ್ಲೂ ಆವರಿಸುವ ದಟ್ಟ ಮಂಜು.
ಅದು ಮಂಜೋ, ಪ್ಲಾಸ್ಟಿಕ್ಕಿನ ಹೊಗೆಯೋ,
ಹೊತ್ತಗೆ ಸುಟ್ಟುಹೋದ
ಕಮಟು ಪರಿಮಳವೋ ಅರಿಯದೆ
ಮನ, ಮಲಿನ ಖೋಡಿ .
ಕಸದ ಹೊಳೆಯಲಿ ಹಾಯಿದೋಣಿ ವಿಹಾರ
ಸಂದುಗಳ ಬಂಧನದಲಿ ಸಣ್ಣ ಕುಸುಕು
ಮಬ್ಬಿನಲಿ ನಿಡಿ ನೋಟಕ್ಕೂ ಸಿಗದ ಕಪ್ಪು ಸೂರ್ಯ.

ಚೆಂಗನೆ ನೆಗೆವ ಜಿಂಕೆಯ ಕೊಂದು
ಕಮ್ಮನೆ ಮಾಂಸ ಹುರಿಯಲೋಸುಗ
ಹೊಗೆಮಂಜಿನ ಅಡಿ ಕರಕಲಾಯಿತು
ಬೂದಿ ಬಾನಾಯಿತು-ಬಯಸಿ
ಹಿಟ್ಟು ನಾದಿ ನಾದಿ ನೀರಾಗಿ
ಕರಗಿ ಕರಗಿ ಬೆಣ್ಣೆನುಣುಪು

ರಾಡಿ-ಜೇಡಿ ಪದರ ತೋಡಿ
ಉಸುಕು ನಿಚ್ಛಳ
ಭಾವಜಲದೊಡಗೂಡಿ.
ನಿಶ್ಛಲ ನಿರ್ವಾತ ನಿರಂತರ

1 comment:

Pramod P T said...

ರವಿಯವರೇ,

ಈ ಕವನಕ್ಕೊಂದು ಚಿತ್ರ ಬರೆಯಬೇಕೆಂಬ ಆಸೆ ಆಯ್ತು..ಹಾಡು ಅರ್ಥ ಮಾಡ್ಕೊಳ್ತಾ ಇದಿನಿ..ಕೊನೆಯ ಪ್ಯಾರಾದ ಪದಗಳು ಕ್ಲಿಷ್ಟ ಅನ್ನಿಸ್ತಿದೆ ನಂಗೆ...ಮೊದಲ ಪ್ಯಾರಾದ ಪದಗಳ ಬಳಕೆ, ಜೋಡಣೆ ಅಧ್ಬುತ...ಇನ್ನೂಳಿದ ಪ್ಯಾರನ ಅರ್ಥ ಮಾಡ್ಕೊಳ್ತಾ ಇದಿನಿ :)...ನೀವು ಸುಲಭವಾಗಿಸ್ತಿರಿ ಅನ್ನೊ ನಂಬಿಕೆ ನನ್ಗಿದೆ...

ಜನಪ್ರಿಯ ಲೇಖನಗಳು