9.07.2006
ಕನ್ನಡಸಾಹಿತ್ಯ.ಕಾಂ ಬಳಗದ ಹೊಸ ಕನಸು......!
ಕನ್ನಡಸಾಹಿತ್ಯ.ಕಾಂ ಸಾಮೂಹಿಕ ಚಟುವಟಿಕೆಯಾಗುವ ನಿಟ್ಟಿನಲ್ಲಿ ಕಳೆದ ತಿಂಗಳು ನೆಡೆದ ಸಂಪೂರ್ಣ ಮತ್ತು ಪದಪರೀಕ್ಷಕ ಬಿಡುಗಡೆ ಸಮಾರಂಭ ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗದಲ್ಲಿ ಹೊಸ ಹುರುಪೊಂದನ್ನು ಸೃಷ್ಟಿಸಿದೆ. ಹುರುಪು ಕ್ಷಣಿಕವಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸದಸ್ಯರೆಲ್ಲರ ಮೇಲೂ ಇದ್ದೇ ಇದೆ. ಕಳೆದ ಸಮಾರಂಭದ ಆಯೋಜನೆಯ ಮುಂಚೂಣಿಯಲ್ಲಿದ್ದ
೧.ಕಿರಣ್
೨.ವಸಿಷ್ಠ
೩.ಕಿಶೋರ್‌ಚಂದ್ರ
೪.ಅರೇಹಳ್ಳಿ ರವಿ
೫.ಶ್ರೀಧರ್ ಸಾಹುಕಾರ್
ಶೇಖರರವರ ಮನೆಯಲ್ಲಿ ಅನೌಪಚಾರಿಕವಾಗಿ ದಿನಾಂಕ: ೦೩-೦೯-೨೦೦೬ರ ಭಾನುವಾರ ಬೆಳಿಗ್ಗೆ ಸೇರಿದ್ದರು.
ಚರ್ಚೆ-ಮಾತುಕತೆಗಳಲ್ಲಿ ಮುಂದಿನ ಚಟುವಟಿಕೆಗಳ ಬಗೆಗಿನ ಸ್ಥೂಲ ಕಲ್ಪನೆ ಮತ್ತು ಆಶಯ ಗೋಚರವಾಗತೊಡಗಿತು. ಮಾರ್ಚ್ ೨೮, ೨೦೦೭ಕ್ಕೆ ಕನ್ನಡಸಾಹಿತ್ಯ.ಕಾಂ ೬ನೇ ವರ್ಷ ಪೂರೈಸಿ ಏಳನೇ ವರ್ಷಕ್ಕೆ ಕಾಲಿಡುತ್ತದೆ.
ಅಂತರ್ಜಾಲದಲ್ಲಿ ಕನ್ನಡದ ಸಾಂಸ್ಕೃತಿಕ ನೆಲೆಯಾಗಿ-ತಾಂತ್ರಿಕವಾದ ಅಗತ್ಯಗಳನ್ನೂ ವ್ಯಾಖ್ಯಾನಿಸತೊಡಗಿರುವ ಕನ್ನಡಸಾಹಿತ್ಯ.ಕಾಂ , ಬೆಂಗಳೂರಿನ ಬಳಗ ಹಾಗೂ ಎಲ್ಲಾ ಬೆಂಬಲಿಗರ ಬಳಗದ ಪರವಾಗಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವೊಂದನ್ನು ಆಯೋಜಿಸಬೇಕು ಎಂಬ ಚಟುವಟಿಕೆಯ ಕಲ್ಪನೆಯನ್ನು ಎಲ್ಲಾ ಸದಸ್ಯರ ಮುಂದೆ ಪ್ರಸ್ತಾವನೆಯಾಗಿ ಇಡುತ್ತಿದ್ದೇವೆ.
ಈ ವಿಚಾರ ಸಂಕಿರಣದ ಭಾಗವಾಗಿ ಕನ್ನಡಸಾಹಿತ್ಯ.ಕಾಂನ ಎಲ್ಲ ಲೇಖಕರನ್ನು ವಿಚಾರಸಂಕಿರಣದ ದಿನವಾದ ಏಪ್ರಿಲ್ ೧೫, ೨೦೦೭ರ ಸಂಜೆ, ಕೃತಜ್ಞತೆ ಸಲ್ಲಿಸುವ ಸಲುವಾಗಿ ಒಂದೆಡೆ ಸೇರಿಸುವ ಉದ್ದೇಶವೂ ಇದೆ.
ಪ್ರಸ್ತಾವನೆಯ ತಾರ್ಕಿಕ ಬೆಳವಣಿಗೆಯಾಗಿ ಈ ಕೆಳಕಂಡ ಸಮಿತಿಗಳನ್ನು ರಚಿಸಲಾಗಿದೆ.
೧. ಮಾಹಿತಿ ತಂತ್ರಜ್ಞಾನದ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯಾತಿಗಣ್ಯರನ್ನು ಪ್ರಬಂಧ ಮಂಡನೆಗಾಗಿ ಗುರುತಿಸಿ, ಸಂಪರ್ಕಿಸುವ ಸಲುವಾಗಿನ ಸಮಿತಿಯ ನೇತೃತ್ವ ಶೇಖರ್‌ಪೂರ್ಣ.
೨. ಕನ್ನಡಸಾಹಿತ್ಯ.ಕಾಂನ ಲೇಖಕರನ್ನು ಸಂಪರ್ಕಿಸಿ ಕಾರ್ಯಕ್ರಮಕ್ಕೆ ಕರೆತರಲು, ಅವರ ಆತಿಥ್ಯ ವಹಿಸುವ ಸಲುವಾಗಿನ ಸಮಿತಿಯ ನೇತೃತ್ವ ಶ್ರೀಧರ್ ಸಾಹುಕಾರ್.
೩. ಸ್ಮರಣ ಸಂಚಿಕೆ(ಕನ್ನಡಸಾಹಿತ್ಯ.ಕಾಂನ ಇತಿಹಾಸ, ಲೇಖಕರ ಅನಿಸಿಕೆಗಳು, ಪ್ರಬಂಧ ಮಂಡಿಸುವವರ ಪ್ರಬಂಧಗಳು, ಜಾಹೀರಾತುಗಳು)ಯ ಸಮಿತಿಯ ನೇತೃತ್ವ ವಸಿಷ್ಠ.
೪. ಕನ್ನಡಸಾಹಿತ್ಯ.ಕಾಂನ ಎಲ್ಲ ಬೆಂಬಲಿಗರ ಬಳಗಕ್ಕೆ ಒಂದೇ ತೆರನಾದ ನಿಗದಿತ ಮಟ್ಟಕ್ಕೆ ಬೇಕಾದ ಪರಿಕರಗಳು-letter head, logo, T-shirt with logo, dress code, media kit ಇತ್ಯಾದಿ ಪೂರೈಸುವಿಕೆಯ ನಿರ್ವಹಣೆಗಾಗಿನ ಸಮಿತಿಯ ನೇತೃತ್ವ ಕಿಶೋರ್‌ಚಂದ್ರ.
೫. ಮಾಧ್ಯಮ ಸಂಪರ್ಕಕ್ಕಾಗಿನ ಸಮಿತಿಯ ನೇತೃತ್ವ ರುದ್ರಮೂರ್ತಿ\ಅರೇಹಳ್ಳಿ ರವಿ
೬.ರಾಷ್ಟ್ರೀಯ ವಿಚಾರ ಸಂಕಿರಣದ ಅತಿಥಿಗಳ ಊಟೋಪಚಾರ ಇತ್ಯಾದಿ ಸೌಕರ್ಯಗಳಿಗಾಗಿನ ಸಮಿತಿಯ ನೇತೃತ್ವ ಗೋವಿಂದರಾಜು.
ಈ ವಿಚಾರ ಸಂಕಿರಣದ ಕಾರ್ಯಕ್ರಮ, ನೋಂದಾಯಿಸಿಕೊಂಡವರು ಮತ್ತು ವಿಶೇಷ ಆಹ್ವಾನಿತರಿಗೆ ಮಾತ್ರ. ಇದಕ್ಕೆ ಸಂಬಂಧಪಟ್ಟಂತೆ ನೋಂದಾವಣಿ ಶುಲ್ಕವನ್ನು ನಿಗದಿಗೊಳಿಸಬೇಕಾಗಿದೆ.
ಈ ಕುರಿತಂತೆ ಕಾರ್ಯಕ್ರಮದ ರೂಪುರೇಷೆಯಲ್ಲಿ ಕ್ರಿಯಾಶೀಲರಾಗಲು ಹೆಚ್ಚಿನ ಸದಸ್ಯರ\ಕಾರ್ಯಕರ್ತರ\ಸ್ವಯಂಸೇವಕರ ಅಗತ್ಯವೂ ಇದೆ.
ಸದಸ್ಯರು ತಮ್ಮ ಸಲಹೆ ಸೂಚನೆಗಳನ್ನು ಕಳಿಸಬಹುದು .
ಬೆಂಗಳೂರು ಸುತ್ತಮುತ್ತಲಿರುವ ಕನ್ನಡಸಾಹಿತ್ಯ.ಕಾಂ ಸದಸ್ಯರು, ಈ ವಿಷಯವನ್ನು ವಿವರವಾಗಿ ಚರ್ಚಿಸಲು ಸಭೆಯೊಂದನ್ನು ಕರೆಯಲಾಗಿದೆ.
ಸಭೆಯಲ್ಲಿ ಮೇಲೆ ಕಾಣಿಸಿದ ಸಮಿತಿಯ ನೇತೃತ್ವ ವಹಿಸಿರುವವರಲ್ಲದೆ ಉಳಿದ ಸರ್ವ ಸದಸ್ಯರೂ ಸಹ ಪಾಲ್ಗೊಳ್ಳಬೇಕಾಗಿ ಮನವಿ.
ಸಭೆಯ ದಿನಾಂಕ: ೧೬-೦೯-೨೦೦೬ ಶನಿವಾರ ಸಂಜೆ ೬.೦೦
ಸ್ಥಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡ
ಹಳೆ ಜಿಲ್ಲಾಧಿಕಾರಿ ಕಛೇರಿ ಆವರಣ
ಕೆಂಪೇಗೌಡ ರಸ್ತೆ
ಮೈಸೂರು ಬ್ಯಾಂಕ್ ವೃತ್ತದ ಬಳಿ
ಕಾವೇರಿ ಭವನದ ಪಕ್ಕ
ಬೆಂಗಳೂರು
ನಿಮ್ಮೆಲ್ಲರ ಆಗಮನದ ನಿರೀಕ್ಷೆಯಲ್ಲಿರುವ
ಕಿರಣ್
ನಿರ್ವಾಹಕ
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ
ದೂ: ೯೮೪೫೬ ೯೬೫೬೫
ಜನಪ್ರಿಯ ಲೇಖನಗಳು
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...
-
ಶ್ರೀಮಾತಾ, ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ. ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’...
-
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾ...
-
ಪುಸ್ತಕಗಳು ನಿಮ್ಮ ಮನೆಯಂಗಳಕ್ಕೆ...ಮನದಂಗಳಕ್ಕೆ. ಅತ್ತು ಹಗುರಾಗಲು ಹೆಗಲಿನಾಸರೆಯಿಲ್ಲ ನಕ್ಕು ಸಂಭ್ರಮಿಸಲು ಸಾವಿನನುಮತಿಯಿಲ್ಲ ಎಂದು ಬರೆಯುವ ವಿಕ್ರಮ ಹತ್ವಾರ್ ಮೊದಲ ...
-
"NAVILAADAVARU" a Kannada film realized by a small group of enthusiasts, is produced in just Rs 35000. We are screening this film ...
-
(ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ. ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರು...
-
ಬರಹಗಾರರು - ವಿಶಾಲಮತಿ , `ಪುಸ್ತಕ ಪ್ರೀತಿ' ಬ್ಲಾಗ್ ಅಂತರ್ಜಾಲದ ಓದುಗರಿಗೆ ಕನ್ನಡ ಪುಸ್ತಕಗಳ ಬಗೆಗಿನ ಪ್ರೀತಿಯನ್ನು ಬೆಳೆಸಬೇಕೆಂಬ ಉದ್ದೇಶದಿಂದ ಬ್ಲಾಗ್ ಪ್ರಪಂಚದಲ...
-
ಎಸ್.ಕೆ.ಕರೀಂಖಾನರಿಗೊಂದು ನುಡಿನಮನ..... ನಾಡಿನ ಹೆಸರಾಂತ ಜಾನಪದ ತಜ್ಞರಾಗಿದ್ದ ಎಸ್.ಕೆ.ಕರೀಂಖಾನರು ಇಂದು(೨೯-೦೭-೦೬,ಶನಿವಾರ) ನಮ್ಮನ್ನಗಲಿದ್ದಾರೆ. ಆ ಹಿರಿಯ ಜೀ...
-
Kannadasaahithya.com supporter’s group No.1855, 6th A Main, 2nd Stage,D Block, Rajajinagar, Bangalore-10 kannadasaahithya@yahoogroups.com ph...
-
ಕಂಪ್ಯೂಟಿಂಗ್ ವಾತಾವರಣದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕನ್ನಡಸಾಹಿತ್ಯಡಾಟ್ಕಾಂ ಸರ್ಕಾರಕ್ಕೆ ಸಲ್ಲಿಸಲಿರುವ ಮನವಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ...