` ಮನಸು ಹಕ್ಕಿ '
ಕನಸುಗಳ ಕಲರವ...
2.06.2011
ಕನ್ನಡ ಸಾಹಿತ್ಯ ಸಮ್ಮೇಳನ: ಶನಿವಾರದ ರಾತ್ರಿ ರಿಪೋರ್ಟು
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾರಕ್ಕಿಟ್ಟದ್ದು ಪುಸ್ತಕಗಳು, ಕನ್ನಡದ ಶುಭಾಶಯ ಪತ್ರಗಳು ಮತ್ತು ಕನ್ನಡ ಬರಹಗಳಿದ್ದ ಟೀ ಷರ್ಟ್ಗಳು. ನಮ್ಮದೇ ಪರಿಕಲ್ಪನೆಯ ನಕಲು ಮಾಡಿದ ಇನ್ನೊಂದು ಮಳಿಗೆಗೂ ವ್ಯಾಪಾರ ಜೋರಾಗಿತ್ತು. ಇಂದು ಊಟದ ಸ್ಟಾಲ್ಗಳಲ್ಲಿ ಜನರ ಸಂಖ್ಯೆ ಸ್ವಾಭಾವಿಕವಾಗಿ ಕಡಿಮೆಯಿತ್ತು. ಅಡಿಗರ ಟಿಫನ್ ಬಾಕ್ಸ್ ಸೈಜಿನ ಊಟ ತುಂಬಿಕೊಂಡಿದ್ದ ಪಾತ್ರೆಗಳನ್ನು ನೋಡಿ ಯಾರಿಗಾದರೂ ಹೋಗಿ ಉಣ್ಣಲು ಧೈರ್ಯ ಬಂದೀತೆ? ಜನ ಸಿಕ್ಕ ಹೋಟೆಲುಗಳಲ್ಲಿ ಹೊಟ್ಟೆ ತುಂಬಿಸಿಕೊಂಡರು. ಮುಂದಿನ ಸಮ್ಮೇಳನಗಳಲ್ಲಿ ಊಟದದ ವ್ಯವಸ್ಥೆಗಳನ್ನು ಲಕ್ಷಾಂತರ ಮಂದಿಗೆ ಊಟ ಹಾಕಿ ಅನುಭವವಿರುವ ಮಠಗಳು ಅಥವ ರಾಜಕೀಯ ನಾಯಕರಿಗೆ ವಹಿಸಬಹುದೆಂಬುದು ಜನಗಳ ಅಂಬೋಣ.
ಉಳಿದಂತೆ ಪುಸ್ತಕಗಳನ್ನು ಬರೆದು ಬೋರು ಹೊಡೆಸುತ್ತಿದ್ದ ಲೇಖಕರು ಮಳಿಗೆಗಳಲ್ಲಿ ಕಾಣಿಸಿಕೊಂಡದ್ದು, ಕೊಂಡವರಿಗೆ ಸಹಿ ಹಾಕಿ ಕೊಡುತ್ತಿದ್ದದ್ದು ವಿಶೇಷ. ವಿಜಯ ಕರ್ನಾಟಕದ ಮಾಜಿ ಸಂಪಾದಕರಾದ ಭಟ್ಟರು ಮತ್ತು ಅವರ ಶಿಷ್ಯರು ಮಳಿಗೆ ಮತ್ತು ಮೇಳದ ಅಂಗಳದಲ್ಲಿ ಹೆಚ್ಚಾಗಿ ಕಾಣಿಸಿಕೊಂಡರು. ಟಿ ವಿ, ಪತ್ರಿಕೆಗಳವರು, ಹಾಡುವವರು, ಕುಣಿಯುವವರು ಸುಳ್ಳು ಸುಳ್ಳೇ ಗಾಂಭೀರ್ಯದ ಪೋಸು ಕೊಡುತ್ತಾ ಒದ್ದಾಡಿದರು. ಪತ್ರಕರ್ತರು ನಿನ್ನೆಯ ಧೂಳಿನ ಸೇಡನ್ನು ನೆಲ ಕೆರೆದು ಧೂಳೆಬ್ಬಿಸಿ ತೀರಿಸಿಕೊಂಡರು. ಚಂಪಾ ಮತ್ತು ವಸುಧೇಂದ್ರ ಅವರವರ ಮಳಿಗೆಗಳನ್ನು ನಿಭಾಯಿಸಿದರು. ನಿನ್ನೆ ಮತ್ತು ಇಂದು ಸೇರಿದರೆ ಸಮ್ಮೆಳನದಲ್ಲಿ ಐದರಿಂದ ಆರು ಕೋಟಿಯ ಪುಸ್ತಕಗಳು ವ್ಯಾಪಾರವಾಗಿರಬಹುದೆಂದು ವ್ಯಾಪಾರಿಗಳ ಅನಧಿಕೃತ ಸಂಘವೊಂದು ಪ್ರಕಟಿಸಿದೆ. ಕನ್ನಡ ಮನಸ್ಸುಗಳಿಗೆ ಇದಕ್ಕಿಂದ ಹರ್ಷದ ಸಂಗತಿ ಬೇರೊಂದುಂಟೆ? ಬನ್ನಿ ನಾಳೆ ಈ ಅಂಕಿಗಳನ್ನು ಅಟ್ಟಕ್ಕೇರಿಸೋಣ. ಹಾಗೇ ನಮ್ಮ ಮಳಿಗೆಯ ಸಂಖ್ಯ ೮೪. ಮರೆತೀರಿ ಮತ್ತೆ...
Newer Posts
Older Posts
Home
Subscribe to:
Posts (Atom)
ಜನಪ್ರಿಯ ಲೇಖನಗಳು
ಕನ್ನಡದ ಕತ್ತಲೆಗೆ ಬ್ಲಾಗೀ ಟಾರ್ಚು :ಒಂದು ಬ್ಲಾಗೀ ಮಿಲನ
ಶ್ರೀಮಾತಾ, ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ. ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’...
ಇತ್ತೀಚಿನ ಅನಿಸಿಕೆಗಳು
ಇತ್ತೀಚಿನ ಬರಹಗಳು
"ಗಂಟೆ ಎಂಟಾಯ್ತು. ಇನ್ನೂ ಎಷ್ಟು ಹೊತ್ತು ಮಲಗ್ತೀರಾ"
ಬರಿದಾದ ಭೂಮಿಯ ಮಡಿಲು ತುಂಬಿದವರೂ ಇದ್ದಾರೆ!
ನಕಲಿ ಸಾರಾಯಿಯ ನರಮೇಧ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ
ಕನ್ನಡ ತಂತ್ರಾಂಶಗಳೂ, ಮಾತುಗಾರರೂ...
ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ...
ವಂಚನೆ ಅನ್ನೋದು...ಪುರಾತನ ಕಸುಬು
QuestNet:ಚಿನ್ನದಂತ ಮೋಸ
ಇಮ್ಮಡಿ ಜಗದೇವರಾಯ
ಕನ್ನಡದ ಕತ್ತಲೆಗೆ ಬ್ಲಾಗೀ ಟಾರ್ಚು
ಹಕ್ಕಿಯ ಸಂಗ್ರಹ
▼
11
(1)
▼
Feb 2011
(1)
ಕನ್ನಡ ಸಾಹಿತ್ಯ ಸಮ್ಮೇಳನ: ಶನಿವಾರದ ರಾತ್ರಿ ರಿಪೋರ್ಟು
►
10
(3)
►
Nov 2010
(1)
►
Oct 2010
(2)
►
09
(2)
►
Feb 2009
(1)
►
Jan 2009
(1)
►
08
(14)
►
Aug 2008
(1)
►
Jul 2008
(1)
►
Jun 2008
(2)
►
May 2008
(2)
►
Apr 2008
(1)
►
Mar 2008
(4)
►
Feb 2008
(3)
►
06
(14)
►
Dec 2006
(2)
►
Nov 2006
(2)
►
Oct 2006
(3)
►
Sep 2006
(1)
►
Aug 2006
(2)
►
Jul 2006
(2)
►
May 2006
(1)
►
Apr 2006
(1)
ಬಂದು ಹೋದವರ ಲೆಕ್ಕಾಚಾರ
ನಮ್ಮವರು
ಬನವಾಸಿ ಬಳಗ
ಕರ್ನಾಟಕ ರಕ್ಷಣಾ ವೇದಿಕೆ
ಸಂಪದ ಸಮುದಾಯ
ಕನ್ನಡಸಾಹಿತ್ಯ.ಕಾಂ(ಹೊಸ ಸಂಚಿಕೆ)
‘ಹಕ್ಕಿ’ಗೆ ಉಚಿತ ಚಂದಾದಾರರಾಗಿ
ನಿಮ್ಮ ಇಮೈಲ್ ವಿಳಾಸ ನೀಡಿ
ಗೂಗಲ್ ಫೀಡ್
ಸಂಪರ್ಕಿಸಿ
arehalliravi@gmail.com
ಹಕ್ಕಿಗಳು ಹಾರುತಿವೆ ನೋಡಿದಿರಾ?
ಪುಸ್ತಕ ಪ್ರೀತಿ
ಕಾಸರಗೋಡಿನವರು
ಮಳೆ ನೀರು ಸಂಗ್ರಹಿಸೋದು
ಕುಂಚ ಪ್ರಪಂಚ
ಜೋಗಿಮನೆ
ನೀ ಮಾಯೆ...
ಅಂತರಂಗ
ಅಮೃತ ಸಿಂಚನ
ಅಲೆಮಾರಿಯ ಅನುಭವಗಳು
ಅವಧಿ
ಇರುವುದೆಲ್ಲವ ಬಿಟ್ಟು!
ಇಸ್ಮಾಯಿಲ್ ಪುಟ
ಎ ಆರ್ ಮಣಿಕಾಂತ್ ಬ್ಲಾಗ್
ಕವಿತೆ
ಕುಂಟಿನಿ
ಕೆಂಡ ಸಂಪಿಗೆ
ಗುಬ್ಬಚ್ಚಿ
ಚೇತನಾ
ಟೀನಾ ಜೋನ್
ತುಂತುರು ಹನಿಗಳು
ತುಲಸಿವನ
ನವಿಲುಗರಿ
ನೆನಪು-ನೇವರಿಕೆ
ಬೊಗಳೆ ರಗಳೆ
ಮನಸ್ವಿನಿ
ಮಾನಸ
ಮೈಸೂರು ಪೋಸ್ಟು!
ಮೋಟುಗೋಡೆ
ಮೌನ ಗಾಳ
ಸುಪ್ತದೀಪ್ತಿ
-
Hit Counter