8.09.2006
ಕನ್ನಡಸಾಹಿತ್ಯ.ಕಾಂ ಕಾರ್ಯಕ್ರಮದ ಯಶಸ್ಸಿನ ಹಿಂದೆ.....
ಕನ್ನಡಸಾಹಿತ್ಯ.ಕಾಂ ಗೆ ಆಗ ತಾನೆ ಒಂದು ಜಯ ದೊರಕಿತ್ತು. ಮೈಕ್ರೋಸಾಫ್ಟ್‌ನ 'ತುಂಗಾ' ಫಾಂಟ್ ವಿಚಾರದಲ್ಲಿ ಕನ್ನಡಸಾಹಿತ್ಯ.ಕಾಮ್ ನೆಡೆಸಿದ ಹೋರಾಟ, ಚರ್ಚೆಗಳು, ಕೊನೆಗೆ ಕಂಪನಿ ತಪ್ಪುಗಳನ್ನು ಸರಿಪಡಿಸಲು ಒಪ್ಪಿಕೊಂಡಿದ್ದು, ಕೆ.ಎಸ್.ಸಿ ಗುಂಪಿನಲ್ಲಿ ಒಂದು ತೆರನಾದ ಉತ್ಸಾಹ ಮೂಡಲು ಕಾರಣವಾಗಿತ್ತು. ಬಳಗದ ನಿರ್ವಾಹಕ ಕಿರಣ್ ಫೋನ್ ಮಾಡಿ ಮೈಕ್ರೊಸಾಫ್ಟ್ ವಿರುದ್ಧದ ಜಯದ ಸಂತೋಷವನ್ನು ಹಂಚಿಕೊಳ್ಳಲು ಸದಸ್ಯರ ಸಭೆ ಆಯೋಜಿಸಿದರೆ ಹೇಗೆ ಎಂದು ಪ್ರಸ್ತಾಪ ಮುಂದಿಟ್ಟರು.
ರುದ್ರಮೂರ್ತಿಯವರು 'ಪದಪರೀಕ್ಷಕ'ದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರಿಂದಲೂ, ಕಿರಣ್‍ಗೆ ಅವರ ಕಛೇರಿಯಲ್ಲಿ ಬಿಡುವಿಲ್ಲದ ಕೆಲಸಗಳಿದ್ದುದ್ದರಿಂದಲೂ ಸಭೆ ಆಯೋಜಿಸುವ ಹೊಣೆ ನನ್ನ ಮೇಲೆಯೇ ಬಿತ್ತು. ಕಿರಣ್ ಅನುಪಸ್ಥಿತಿಯಲ್ಲಿ ಕೆ.ಎಸ್.ಸಿ.ಗುಂಪಿಗೆ ನಾನೇ ಒಂದು ಆಹ್ವಾನ ರೂಪದ ಮೇಲ್ ಹಾಕಿದೆ. ಆದರೆ ನನ್ನ ಸಭೆ ನೆಡೆಸುವ ಪ್ರಸ್ತಾವನೆಗೆ ಬಂದ ಪ್ರತಿಕ್ರಿಯೆಗಳು ಐದಾರು ಮಾತ್ರ. ಆಗ ಸ್ವಲ್ಪ ನಿರಾಸೆಯಾದರೂ ಅಷ್ಟು ಜನರೊಂದಿಗೆ ಶೇಖರರವರ ಮನೆಯಲ್ಲಿಯೇ ಒಂದು ಸಭೆ ಮಾಡಿ ಬಿಡೋಣವೆಂದು ಎಲ್ಲರನ್ನು ಫೋನ್ ಮೂಲಕ ಸಂಪರ್ಕಿಸಿದೆವು. ಆಗ ನಮಗೆ ಸಿಕ್ಕವರು ವಸಿಷ್ಠ ಮತ್ತು ಶ್ರೀಶಕಾರಂತ. ಜೊತೆಗೆ ಇನ್ನೊಂದಿಬ್ಬರು ಹಳೆಯ ಸದಸ್ಯರು ಬರುವುದಾಗಿ ಹೇಳಿದರು.
ಇತ್ತ ಶೇಖರರವರಿಗೆ ಉತ್ಸಾಹಿ ಸಾಫ್ಟ್‌ವೇರ್ ಎಂಜಿನೀಯರ್ ರಾಘವ ಕೋಟೆಕಾರ್ ಸಿಕ್ಕಿದ್ದರು. ತಲೆಯೊಳಗೆ ಗಿರಕಿ ಹೊಡೆಯುತ್ತಿದ್ದ ಕನ್ನಡದ CMS ಒಂದರ ಕಲ್ಪನೆಯನ್ನು ಶೇಖರರವರು ರಾಘವ ಮುಂದಿಟ್ಟಾಗ ಕನ್ನಡದ ಬಗ್ಗೆ ಅಪಾರ ಅಭಿಮಾನವಿಟ್ಟುಕೊಂಡಿದ್ದ
ಅವರು ಈ ಯೋಜನೆಯನ್ನು ತಕ್ಷಣ ಕೈಗೆತ್ತಿಕೊಳ್ಳೋಣವೆಂದು ಆಗಿನಿಂದಲೇ ಕೆಲಸ ಪ್ರಾರಂಭಿಸಿ ಬಿಟ್ಟರು. ಹೀಗೆ ಶೇಖರರವರ ಪರಿಕಲ್ಪನೆ, ವಿನ್ಯಾಸ ಹಾಗೂ ರಾಘವರವರ ಕೋಡಿಂಗ್‍ನೊಂದಿಗೆ 'ಸಂಪೂರ್ಣ' CMS ಯೋಜನೆ ಆರಂಭವಾಯಿತು.
ಯೋಜನೆ ಪ್ರಾರಂಭವಾದ ಒಂದು ತಿಂಗಳಿನ ನಂತರವೇ ಈ ಕುರಿತು ಗುಂಪಿನ ಸದಸ್ಯರಿಗೆ ತಿಳಿಯಿತು. ಶೇಖರರವರು ಈ ಯೋಜನೆ ಆರಂಭಿಕ ಹಂತದಲ್ಲಿರುವುದರಿಂದ ಇದರಲ್ಲಿ ಆಸಕ್ತಿ ಇರುವವರೆಲ್ಲರೂ ಪಾಲ್ಗೊಳ್ಳಬಹುದೆಂದು ಮುಕ್ತ ಆಹ್ವಾನವಿತ್ತರು. ಇದಕ್ಕೆ ಬಹಳ ಪ್ರತಿಕ್ರಿಯೆಗಳು ಬಂದರೂ, ಸಕ್ರಿಯವಾಗಿ ಅವರನ್ನು ತೊಡಗಿಸಿಕೊಳ್ಳಲು ನಮ್ಮಲ್ಲಿ ಮೂಲಸೌಲಭ್ಯಗಳ ಕೊರತೆಯಿತ್ತು. ಆದ್ದರಿಂದ ಇಬ್ಬರೇ ಯೋಜನೆಯಲ್ಲಿ ಮುಂದುವರಿಯಬೇಕಾದ ಅನಿವಾರ್ಯತೆ ಒದಗಿಬಂತು.
ಸಭೆ ಆಯೋಜಿಸುವ ನಮ್ಮ ಪ್ರಯತ್ನಗಳು ಸದಸ್ಯರ ಪಾಲ್ಗೊಳ್ಳುವಿಕೆಯ ಕೊರತೆಯಿಂದ ವಿಫಲವಾಗಿದ್ದವು. ಸಂಪೂರ್ಣ CMS ಅಭಿವೃದ್ಧಿ ಕೆಲಸ ಬಹಳ ವೇಗದಲ್ಲಿ ನೆಡೆಯುತ್ತಿತ್ತು. ಶೇಖರರವರು ಮತ್ತು ಕಿರಣ್ CMS ಬಿಡುಗಡೆಗೆ ಒಂದು ಕಾರ್ಯಕ್ರಮ ಮಾಡಿದರೆ ಹೇಗೆಂದಾಗ ನಾನು ಇದೆಲ್ಲಾ ಬಹಳ ಖರ್ಚಿನ ಬಾಬ್ತಲ್ಲವೆ ಎಂದೆ. ಆದರೆ ಕೆ.ಎಸ್.ಸಿ ಸದಸ್ಯರ ಬೆಂಬಲ ಸಿಗುವುದರ ಬಗ್ಗೆ ಶೇಖರರವರಿಗೆ ಬಹಳ ವಿಶ್ವಾಸವಿತ್ತು. ರುದ್ರಮೂರ್ತಿಯವರ ಪದಪರೀಕ್ಷಕವೂ ಬಳಕೆಗೆ ಸಿದ್ಧವಾಗುವ ಹಂತ ತಲುಪಿತ್ತು. ಸರಿ ಎರಡೂ ಸಾಫ್ಟ್‍ವೇರ್‌ಗಳನ್ನು ಒಟ್ಟಿಗೆ ಬಿಡುಗಡೆ ಮಾಡುವುದೆಂದು ನಿರ್ಧಾರ ಮಾಡಿದೆವು.ಕನ್ನಡಸಾಹಿತ್ಯ.ಕಾಂಗೆ ೬ನೇ ವಾರ್ಷಿಕೋತ್ಸವದ ಸಂಭ್ರಮವೂ ಜೊತೆಗೆ ಸೇರಿಕೊಂಡಾಗ ನಮ್ಮ ಉತ್ಸಾಹ ಇಮ್ಮಡಿಯಾಯಿತು.
ಕಿರಣ್ ಈ ಸಮಾರಂಭ ನೆಡೆಸುವ ಕುರಿತ ಒಂದು ವಿವರವಾದ ಆಹ್ವಾನವನ್ನು ಕೆ.ಎಸ್.ಸಿ.ಗುಂಪಿಗೆ ಮೈಲ್ ಮಾಡಿದರು. ಜೊತೆಗೆ ಕಾರ್ಯಕ್ರಮಕ್ಕೆ ಹಣದ ಅಗತ್ಯ ಬಹಳವಿದ್ದುದರಿಂದ ಸದಸ್ಯರು ತಮ್ಮ ಶಕ್ತ್ಯಾನುಸಾರ ಸಹಕಾರ ನೀಡುವ ಪ್ರಸ್ತಾವವನ್ನು ಇಡಲಾಯಿತು. ಆರಂಭಿಕವಾಗಿ ಕಾರ್ಯಕ್ರಮಕ್ಕೆ ಸುಮಾರು ಹತ್ತು ಸಾವಿರ ರೂಪಾಯಿಗಳು ಬೇಕಾಗಬಹುದೆಂದು ಅಂದಾಜಿಸಿದ್ದೆವು. ಹಣದ ಪ್ರಸ್ತಾವನೆಯಾದ ಒಂದು ವಾರದಲ್ಲೇ ಕಿರಣ್‍ರವರ ಖಾತೆಗೆ ಸದಸ್ಯರು ನೀಡಿದ ಹಣ ಹತ್ತು ಸಾವಿರವನ್ನು ದಾಟಿತ್ತು. ಮುಂದಿನ ನಮ್ಮ ಕಾರ್ಯ ಯೋಜನೆಗಳನ್ನು ರೂಪಿಸಲು ಇದು ನಮಗೆ ಬಹಳ ಉಪಯೋಗವಾಯಿತು.
ಹಣದ ವಿಷಯವೇನೋ ಆಯಿತು, ಕಾರ್ಯಕ್ರಮ ಸಂಯೋಜನೆಗೆ ಕಾರ್ಯಕರ್ತರು ಬೇಕಾಗಿದ್ದರು. ಏನೇ ಸಕ್ರಿಯವಾಗಿ ತೊಡಗಿಸಿಕೊಂಡರೂ ನಾವು ನಾಲ್ಕೈದು ಜನ ಮಾತ್ರ ಪಾಲ್ಗೊಂಡರೆ ಅದು ಸಮೂಹದ ಪ್ರಯತ್ನವಾಗಲಾರದು ಎಂಬುದು ನಮಗೆ ಗೊತ್ತಿತ್ತು. ಆದಕ್ಕೆ ವಿವಿಧ ಜವಾಬ್ದಾರಿಗಳನ್ನು ವಹಿಸಿಕೊಳ್ಳಲು ಸದಸ್ಯರಿಗೆಲ್ಲರಿಗೂ ಒಂದು ಆಹ್ವಾನ ನೀಡಿದೆವು. ಬಹಳ ಜನ ಉತ್ಸಾಹ ತೋರಿಸಿದರೂ ಎಲ್ಲರೂ ಒಂದೇ ಸಮಯದಲ್ಲಿ ಸಕ್ರಿಯವಾಗುವುದೂ ಸಾಧ್ಯವಿರಲಿಲ್ಲ.ಅದಕ್ಕೆ ಕೆಲಸಗಳನ್ನು ಹಂಚಿಕೊಂಡೆವು.
ಆಹ್ವಾನ ಪತ್ರಿಕೆ, ಪೋಸ್ಟರ್-ಮುದ್ರಣ, ಅತಿಥಿಗಳನ್ನು ಆಹ್ವಾನಿಸುವುದು,ಸಮಾರಂಭದ ಸ್ಥಳ ನಿಗಧಿ ಮಾಡುವುದು,ಸಮಾರಂಭಕ್ಕೆ ಬರಲು ಒಪ್ಪಿದ ಗಣ್ಯರನ್ನು ವೈಯಕ್ತಿಕವಾಗಿ ಅವರ ಮನೆಗೆ ಹೋಗಿ ಆಹ್ವಾನಿಸುವುದು, ಸಮಾರಂಭದಂದು ಬೇಕಾದ ವಸ್ತುಗಳ ಖರೀದಿ, ವೇದಿಕೆ ಸಿದ್ಧತೆ, ಊಟ ಇತ್ಯಾದಿ ವ್ಯವಸ್ಥೆಯಂತಹ ಚಟುವಟಿಕೆಗಳನ್ನು ಗುರುತಿಸಿ, ಇದನ್ನೆಲ್ಲಾ ನಿರ್ವಹಿಸಲು ಮುಂದೆ ಬಂದಿದ್ದವರ ನಡುವೆ ಕೆಲಸ ಹಂಚಿಕೊಂಡು ಕಾರ್ಯೋನ್ಮುಖರಾದೆವು.ಕೇವಲ ಒಂದು ವಾರದ ಅವಧಿಯಲ್ಲೇ ನಮ್ಮ ಕಾರ್ಯಕ್ರಮದ ಸಿದ್ಧತೆಗಳನ್ನು ಯಶಸ್ವಿಯಾಗಿ ಮಾಡಿಕೊಂಡೆವು.
* * *
ಇದು ನಮ್ಮ ಚೊಚ್ಚಲ ಪ್ರಯತ್ನವಾಗಿದ್ದುದರಿಂದ ಅನೇಕ ತಪ್ಪುಗಳಾಗಿರಬಹುದು. ಆದರೆ ತಪ್ಪುಗಳೇ ನಮ್ಮ ದಾರಿದೀಪಗಳೆಂಬುದು ಗೊತ್ತಿರುವ ಕಾರಣ ಮುಂದಿನ ನಮ್ಮ ನಡೆ ಉತ್ತಮವಾಗಿರುತ್ತದೆಂದು ಕೆ.ಎಸ್.ಸಿ ಸದಸ್ಯರು ಮತ್ತು ಹಿತೈಷಿಗಳಿಗೆ ಭರವಸೆ ನೀಡುತ್ತೇವೆ.
8.01.2006
ಕನ್ನಡ ಸಾಹಿತ್ಯ.ಕಾನ ಕಾರ್ಯಕ್ರಮದ ಆಹ್ವಾನ ಪತ್ರಿಕೆ
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಶೇಷಾದ್ರಿಪುರಂ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಆಚರಿಸುತ್ತಿರುವ ಕನ್ನಡಸಾಹಿತ್ಯ.ಕಾಂ ನ ಐದನೇ ವಾರ್ಷಿಕೋತ್ಸವ, ಸಂಪೂರ್ಣ CMS ಮತ್ತು ಕನ್ನಡ ಪದ ಪರೀಕ್ಷಕ ತಂತ್ರಾಂಶಗಳ ಬಿಡುಗಡೆ ಸಮಾರಂಭಕ್ಕೆ ತಮ್ಮನ್ನು ಪ್ರೀತಿಯಿಂದ ಆಹ್ವಾನಿಸುತ್ತದೆ.
ಸಮಾರಂಭದ ವಿವರಗಳು
ದಿನಾಂಕ: ಆಗಸ್ಟ್ ೬, ೨೦೦೬
ಸಮಯ: ಬೆಳಿಗ್ಗೆ ೧೦.೩೦ ಕ್ಕೆ
ಸ್ಥಳ: ಶೇಷಾದ್ರಿಪುರಂ ವಿದ್ಯಾಲಯ ಸಭಾಂಗಣ
ಶೇಷಾದ್ರಿಪುರಂ ವಿದ್ಯಾಲಯ (ಕಾಲೇಜು), ಬೆಂಗಳೂರು.
ಉದ್ಘಾಟನೆ ಹಾಗು ಸಂಪೂರ್ಣ CMS ಬಿಡುಗಡೆ :
ಶ್ರೀ ಯು.ಆರ್ ಅನಂತಮೂರ್ತಿ, ಚಿಂತಕರು, ಲೇಖಕರು
ಕನ್ನಡ ಪದ ಪರೀಕ್ಷಕದ ಬಿಡುಗಡೆ:
ಸಿದ್ಧಲಿಂಗಯ್ಯ
ಅಧ್ಯಕ್ಷರು - ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಮುಖ್ಯ ಅತಿಥಿಗಳು:
ರಾಮಚಂದ್ರ ಗೌಡ
ರೇಶ್ಮೆ, ಜವಳಿ ಹಾಗು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು
ಕರ್ನಾಟಕ ಸರ್ಕಾರ
ಬಿ ಕೆ ಚಂದ್ರಶೇಖರ್
ಮಾಜಿ ಸಚಿವರು
ಅಧ್ಯಕ್ಷತೆ
ಶ್ರೀನಾಥ ಶಾಸ್ತ್ರಿ
ಕನ್ನಡ ಗಣಕ ಪರಿಷತ್
೦೨.೩೦ ರಿಂದ ಚರ್ಚಾಗೋಷ್ಠಿ
೧. "ಕನ್ನಡದ ಸಂದರ್ಭದಲ್ಲಿ ಮಾಹಿತಿ ತಂತ್ರಜ್ಞಾನ"
೨. "ಕನ್ನಡಸಾಹಿತ್ಯ.ಕಾಂ ಮುಂದೇನು?"
ವಿಶೇಷ ಅಹ್ವಾನಿತರು -ನಮ್ಮೊಂದಿಗೆ:
ವಿವೇಕ ಶಾನಭಾಗ
ಜಯಂತ್ ಕಾಯ್ಕಿಣಿ
ಸುಮತೀಂದ್ರ ನಾಡಿಗ್
ಗಿರೀಶ್ ಕಾಸರವಳ್ಳಿ
ಎ.ಆರ್ ಶ್ರೀನಿವಾಸಯ್ಯ
ನರಹಳ್ಳಿ ಬಾಲಸುಬ್ರಹ್ಮಣ್ಯ
ಕೃಷ್ಣ ಪರಮೇಶ್ವರ ಭಟ್ಟ
ಡಾ.ಕೊಟ್ರಸ್ವಾಮಿ
ಡಾ. ಮಧುರಾ ಹೆಗ್ಡೆ
ಆರ್.ಸಿ ಕುಲಕರ್ಣಿ
ಶ್ರೀನಿವಾಸ ಶರ್ಮ
ಶ್ರೀನಿವಾಸ ರಾಜ
ವಿಜಯಾ ಸುಬ್ಬರಾಜ
ಗೀತಾಚಾರ್ಯ ಎನ್.
ಬೈರೇಗೌಡ ಜಿ.ಬಿ
ಹರೀಶ್ ಮಂಗಳಾ ಪ್ರಿಯದರ್ಶಿನಿ.
ಅಪ್ಪಟ ಕನ್ನಡದ ಕೆಲಸಕ್ಕೆ ತಪ್ಪದೆ ಬನ್ನಿ
ಬಳಗದ ಪರ್ವಾಗಿ
ಕಿರಣ್
ಸಂಪರ್ಕ: ೯೮೪೫೬ ೯೬೫೬೫
ಜನಪ್ರಿಯ ಲೇಖನಗಳು
-
( ಸ್ನೇಹಿತರೆ, ಲೇಖನ ಓದಿಯಾದ ಮೇಲೆ questnet ಮತ್ತು ಇದೇ ತರದ ಇನ್ನಿತರ ಚೈನ್ ಮಾರ್ಕೆಟಿಂಗ್ ಕಂಪನಿಗಳಿಂದ ನಿಮ್ಮ ಮತ್ತು ಪರಿಚಿತರಿಗಾದ ವಂಚನೆಯನ್ನು ದಯಮಾಡಿ comment ...
-
ಬರಹ: ಕಿರಣ್ ಎಂ ನಿರ್ವಾಹಕರು ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಬೆಂಗಳೂರು ಈ ಶಿಬಿರದ ಮಾಸ್ಟರ್ ಪ್ಲಾನ್ ಎರಡು ತಿಂಗಳು ಹಳೆಯದ್ದು. ಬೆಂಗಳೂರಿನ ಧಾವಂತದಲ್ಲಿ ನಮ್ಮನ್ನೆ...
-
ಕೆಲವೊಮ್ಮೆ ಹಾಗಾಗುತ್ತೆ. ಎದುರಾಗುವ ಪ್ರತಿ ಸನ್ನಿವೇಷವೂ ನಮಗೆ ವಿರುದ್ಧವಾಗಿ ವರ್ತಿಸುತ್ತಿರುತ್ತದೆ. ಕನ್ನಡ ಅಂತರ್ಜಾಲ ಜಗತ್ತಿನಲ್ಲಿ ಕನ್ನಡದ ಪ್ರಾತಿನಿಧ್ಯತೆಯನ್ನು ಐದ...
-
www.samvaada.com Dear Friends, "Samvaada.com" is constantly orgainising film shows, film discourses and film readings in order...
-
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾ...
-
ಅಂ ತೂ ಕಳ್ಳಭಟ್ಟಿಯ ಹೆಸರಿನಲ್ಲಿ methyl alcohol ಅಥವ methanol ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಸಾರಾಯಿ ನಿಷೇಧವಿರುವ ಕರ್ನಾಟಕ ಮತ್ತು ನಿಷೇಧವಿಲ್ಲದಿರುವ ತಮ...
-
"NAVILAADAVARU" a Kannada film realized by a small group of enthusiasts, is produced in just Rs 35000. We are screening this film ...
-
ಶ್ರೀಮಾತಾ, ಕ್ಷಮೆಯಿರಲಿ ನನ್ನ ಗಡಿಬಿಡಿ ಮತ್ತು ಹೊಸ ಹುಡುಗಿಯರನ್ನು ನೇರವಾಗಿ ಮಾತನಾಡಿಸಲಾಗದ ಲಘು ಸಂಕೋಚಕ್ಕೆ. ಬ್ಲಾಗೀ ಮಿಲನದಲ್ಲಿ ರಾಜೇಶ್ ನಿಮ್ಮನ್ನು ’ಮ್ಯುಸಿಸಿಯನ್’...
-
ಲೇಖಕರು: ಎಚ್ ಎಸ್ ಪ್ರಭಾಕರ್ ಕೃಪೆ: ಸಂಯುಕ್ತ ಕರ್ನಾಟಕ ಹಾಸನ, ಜೆ.ಡಿ.ಎಸ್. ಭದ್ರಕೋಟೆಯಾಗಿದ್ದರೂ ಮುಂಬರುವ ಸಂಸತ್ ಚುನಾವಣೆಗಳಲ್ಲಿ ಸ್ವಲ್ಪ ಸಂಘಟಿತ ಶ್ರಮ ಹಾಕಿದ್ದರ...
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...