10.23.2010
ಹಾಸನ ಸಕಲೇಶಪುರದಲ್ಲಿ ನವಿಲಾದವರು ಚಿತ್ರ-ಸಂವಾದ
ಸಂವಾದ ಡಾಟ್ ಕಾಂ(www.samvaada.com) ದೃಶ್ಯ ಮಾಧ್ಯಮಗಳಲ್ಲಿ ಅಕೆಡೆಮಿಕ್ ಅರಿವಿನ ಗುಣಮಟ್ಟದ ಪಠ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸದಭಿರುಚಿಯ ಚಿತ್ರ ಪ್ರದರ್ಶನ, ಸಂವಾದ, ಚಲನಚಿತ್ರ ಚಿಂತನ ಶಿಬಿರ ಇತ್ಯಾದಿಗಳನ್ನು ಆಯೋಜಿಸುತ್ತ ಬಂದಿದೆ. ಜೊತೆಗೆ ಈ ಎಲ್ಲಾ ಚಟುವಟಿಕೆಗಳನ್ನು ಅಂತರ್ಜಾಲ ತಾಣದಲ್ಲೂ ಲೇಖನ/ಪಠ್ಯ ರೂಪದಲ್ಲಿ ದಾಖಲಿಸುತ್ತಾ ಬಂದಿದೆ.
ಮೂವತ್ತೈದು ಸಾವಿರ ರೂಪಾಯಿಗಳ ವೆಚ್ಚದಲ್ಲಿ ಸಣ್ಣ ಹವ್ಯಾಸಿ ತಂಡವೊಂದನ್ನು ಬಳಸಿಕೊಂಡು ಸೃಷ್ಟಿಸಿದ 1 ಗಂಟೆ 15 ನಿಮಿಷದ ಅವಧಿಯ ದೃಶ್ಯಾಭಿವ್ಯಕ್ತಿ "ನವಿಲಾದವರು" ಚಿತ್ರ ಪ್ರದರ್ಶನವನ್ನು ಸಂವಾದ ಡಾಟ್ ಕಾಂ ಮತ್ತು ರೋಟರಿ ಕ್ವಾಂಟ, ಹಾಸನ ಜೊತೆಯಾಗಿ ಶ್ರೀ ಸಾಯಿ ಮೂವಿಲ್ಯಾಂಡ್ ಥಿಯೇಟರ್‌ನಲ್ಲಿ ಏರ್ಪಡಿಸಿವೆ.
ಚಿತ್ರರಂಗದ ಇಂದಿನ ಸಂದರ್ಭದಲ್ಲಿ ನೂರು ಸಾವಿರ ಲಕ್ಷ ದಶಲಕ್ಷ ಕೋಟಿ ದಶಕೋಟಿ ಮತ್ತು ನೂರುಕೋಟಿ ಎನ್ನುವುದು ಸರಳ ಅಂಕೆಗಳಾಗಿಬಿಟ್ಟಿವೆ. ವ್ಯಕ್ತಿಯೊಡನೆಯೆ, ನೂರು ಸಾವಿರಗಳೂ ನಗಣ್ಯವಾಗಿಬಿಟ್ಟಿವೆ. ಹಾಸ್ಯಾಸ್ಪದವೂ ಆಗಿವೆ.
ಮೂವತ್ತೈದು ಸಾವಿರದ ದೃಶ್ಯಾಭಿವ್ಯಕ್ತಿಯನ್ನು ಹಾಸ್ಯಾಸ್ಪದ ಚಟುವಟಿಕೆ ಎನ್ನಬೇಕೆ? ಅಥವ ಕೆಟ್ಟ ವಿಜೃಂಭಣೆಯ, ಅನೈತಿಕ ಸಂಭಾವನೆ/ವೆಚ್ಚದ ವಿರುದ್ಧ ಎತ್ತಿರುವ ಅರ್ಥಪೂರ್ಣ ಪ್ರಶ್ನೆ ಎಂದೆನ್ನಬೇಕೆ? ಈ ಪ್ರಶ್ನೆಗಳನ್ನು ಹೆಚ್ಚು ಮಹತ್ವಪೂರ್ಣ ಚರ್ಚೆಗೆ ಒಡ್ಡುವ ಆಶಯವನ್ನು ಸಂವಾದ ಡಾಟ್ ಕಾಂ ಹೊಂದಿದೆ.
ಹಾಸನದಲ್ಲಿ ‘ನವಿಲಾದವರು’
ವಿವರಗಳು ಕೆಳಕಂಡಂತಿವೆ.
ದಿನಾಂಕ: ಅಕ್ಟೋಬರ್ 24, ಭಾನುವಾರ
ಸಮಯ: ಸಂಜೆ 6 ಕ್ಕೆ
ಸ್ಥಳ: ಶ್ರೀ ಸಾಯಿ ಮೂವಿಲ್ಯಾಂಡ್ ಥಿಯೇಟರ್, ಹಾಸನ
ಸಂವಾದ ಮತ್ತು ಚರ್ಚೆಯಲ್ಲಿ ಭಾಗವಹಿಸುವವರು:
‘ನವಿಲಾದವರು’ ಚಿತ್ರತಂಡ
ಶೇಖರಪೂರ್ಣ, ಹಿರಿಯ ಚಿತ್ರ ವಿಮರ್ಶಕರು ಮತ್ತು ಸಂಪಾದಕರು ಕನ್ನಡಸಾಹಿತ್ಯ ಡಾಟ್ ಕಾಂ.
ವೆಂಕಟೇಶಮೂರ್ತಿ ಆರ್ ಪಿ(ಸಂಪಾದಕರು, ಜನತಾ ಮಾಧ್ಯಮ ದಿನಪತ್ರಿಕೆ)
ರೂಪ ಹಾಸನ
ಶ್ರೀಮತಿ ಭಾನು ಮುಷ್ತಾಕ್( ಲೇಖಕರು, ಇವರ ಕಥೆಗಳ ಆಧಾರಿತ ಹಲವು ಚಿತ್ರಗಳು ಪ್ರಶಸ್ತಿ ಗಳಿಸಿವೆ)
ಜೆ ಎಚ್ ನಾರಾಯಣ ಸ್ವಾಮಿ(ಜ ಹೋ ನಾ), ಲೇಖಕರು.
ಮಂಜುನಾಥ್(ಅಧ್ಯಕ್ಷರು, ಪ್ರೆಸ್ ಅಸೋಸಿಯೇಷನ್, ಹಾಸನ)
ಡಾ| ನರಹರಿ( ನಿವೃತ್ತ ಪ್ರಾಂಶುಪಾಲರು)
ಚಂದ್ರಶೇಖರ್ ಧೂಲೆಕರ್(ಕವಿ, ಲೇಖಕರು)
ಉದಯರವಿ (ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್)
ಮದನ್ ಗೌಡ(ಮಾಜಿ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್)
ಚಂದ್ರಶೇಖರ್ ಪೆಡಸೂರ್
ಡಾ| ಗೀತಾ ( ಪ್ರಾಂಶುಪಾಲರು, ಹಾಸನಾಂಬ ಬಿ ಎಡ್ ಕಾಲೇಜು)
ಸಕಲೇಶಪುರದಲ್ಲಿ ’ನವಿಲಾದವರು’
ವಿವರಗಳು ಕೆಳಕಂಡಂತಿವೆ.
ದಿನಾಂಕ: ಅಕ್ಟೋಬರ್ 25, ಸೋಮವಾರ
ಸಮಯ: ಸಮಯ : ಬೆಳಿಗ್ಗೆ 11ಕ್ಕೆ
ಸ್ಥಳ : ’ಮಕ್ಕಿ ತಿಟ್ಟ’ ಹೋಂ ಸ್ಟೇ, ದೊನ್ನಾಳಿ ಕಾಫಿ ಎಸ್ಟೇಟ್, ಸಕಲೇಶಪುರದ ಹತ್ತಿರ.
ಸಕಲೇಶಪುರದಲ್ಲಿ ಪ್ರದರ್ಶನ ಮತ್ತು ಸಂವಾದಕ್ಕೆ ಭಾಗವಹಿಸುವ ಎಲ್ಲರಿಗೂ ಊಟದ ವ್ಯವಸ್ಥೆಯಿದೆ
ಚಿತ್ರ ಪ್ರದರ್ಶನ ಮತ್ತು ಸಂವಾದಕ್ಕೆ ಭಾಗವಹಿಸುವವರು ಈ ಕೆಳಗಿನ ಮೊಬೈಲ್ ಗೆ ಸಂಪರ್ಕಿಸಬಹುದು:
99004 39930, 97317 55966
More Details on http://samvaada.com
ಧನ್ಯವಾದಗಳು,
No comments:
Post a Comment