10.11.2006
A meeting with Prof.Sudhakar: Minutes by Arun,Mysore
ಭಾನುವಾರ ಅಕ್ಟೋಬರ್ ೧. ಆಯುಧ ಪೂಜೆ ದಿವಸ, ಮೈಸೂರಿಗೆ ದಸರ ಸಂಭ್ರಮ. ಮೈಸೂರೆಂಬ ರಾಜನಗರಿ ನವ ವಧುವಂತೆ ಅಲಂಕಾರಗೊಂಡು ಮೈಮರೆತಿತ್ತು. ಆ ಸಂದರ್ಭದಲ್ಲಿ ಬೆಂಗಳೂರಿನ ಹಬ್ಬ ಮರೆತು ಮೈಸೂರಿಗೆ ಬಂದವರು, ಅರೆಹಳ್ಳಿ ರವಿ ಮತ್ತು ಶ್ರಿನಿವಾಸ್.
ನನಗೆ ಫೋನ್ ಮಾಡಿ, ಮೈಸೂರಿಗೆ ಬಂದಿರುವ ವಿಷಯ ತಿಳಿಸಿದಾಗ ನನ್ನ ದಸರ ಉತ್ಸಾಹ ಇಮ್ಮಡಿಯಾದದ್ದು ಸುಳ್ಳಲ್ಲ . ಏಕೆಂದರೆ ಅವರಿಬ್ಬರೂ ಬಂದಿದ್ದು ಕನ್ನಡಸಾಹಿತ್ಯ.ಕಾಂ ನ ಪರವಾಗಿ. ಬಹಳ ಒತ್ತಾಯ ಮಾಡಿ ನಮ್ಮ ಮನೆಗೆ ಕರೆದುಕೊಂಡುಹೋಗಿ, ಅಲ್ಲಿ ಎಲ್ಲರೂ ಮಧ್ಯಾಹ್ನದ ಊಟ ಮುಗಿಸಿ, ಸುಧಾಕರ್ ರವರ ಮನೆ ತಲುಪಿದಾಗ ಸಮಯ ಮೂರೂವರೆ.
ಸುಧಾಕರ್ ಯಾರು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿರಬಹುದು.
ಸುಧಾಕರ್ ಅವರು ಮೈಸೂರು ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಭಾಗದಲ್ಲಿ ಸಿಸ್ಟಮ್ಸ್ ಇ೦ಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಕಂಪ್ಯೂಟಿಂಗ್ ವಲಯದಲ್ಲಿ ಅಪಾರ ಅನುಭವಿಗಳು. ಮೇಲಾಗಿ ಕನ್ನಡದ ಬಗ್ಗೆ ವಿಶೇಷ ಪ್ರೀತಿ. ಕಂಪ್ಯೂಟಿಂಗ್ ವಾತಾವರ
ಣದಲ್ಲಿ ಕನ್ನಡದ ಸಾರ್ವಭೌಮತ್ವ ಇರಲೇಬೇಕು ಎಂದು ಪ್ರತಿಪಾದಿಸಿದವರು. ಸದ್ಯಕ್ಕೆ ಲಿನಕ್ಸ್ ಕನ್ನಡ ಅವತರಣಿಕೆ ಮತ್ತು ಅದರ ವಿವಿಧ ಸಾಧ್ಯತೆಗಳ ಬಗ್ಗೆ ತೊಡಗಿಸಿಕೊಂಡಿದ್ದಾರೆ. ಬಿಡುವಿಲ್ಲದ ಉಪನ್ಯಾಸಗಳನ್ನೂ ಈ ವಿಷಯದಲ್ಲಿ ನೀಡುತ್ತಿದ್ದಾರೆ.
ಪರಸ್ಪರ ಕುಶಲೋಪರಿಯಾದ ನಂತರ ಕನ್ನಡ ಸಾಹಿತ್ಯ.ಕಾ೦ ನ ಇತ್ತೀಚಿನ ಚಟುವಟಿಕೆಗಳ ಬಗ್ಗೆ ರವಿ , ಸ್ತೂಲವಾಗಿ ಸುಧಾಕರರವರಿಗೆ ಹೇಳಿದರು.
ಸುಧಾಕರರವರಿಗೆ ಕನ್ನಡಸಾಹಿತ್ಯ.ಕಾಂ ಬಗ್ಗೆ ಈಗಾಗಲೇ ತಿಳಿದಿರುವ ಕಾರಣ ನೇರ ವಿಷಯಕ್ಕೆ ಬಂದೆವು.
ಮೈಸೂರಿನಲ್ಲಿ ಶುರುವಾಗಿರುವ ನಮ್ಮ ಕನ್ನಡ ಸಾಹಿತ್ಯ.ಕಾ೦ನ ಬೆ೦ಬಲಿಗರ ಬಳಗದ ಬಗ್ಗೆ ಅವರಿಗೆ ಮಾಹಿತಿ ನೀಡಿದೆವು.
ಮೈಸೂರಿನಂತಹ ಸಾಂಸ್ಕೃತಿಕ ನಗರಿ, ಐ.ಟಿ.ನಗರಿಯಾಗುವ ಲPಣಗಳನ್ನು ತೋರಿಸುತ್ತಿರುವ ಈ ದಿನಗಳಲ್ಲಿ ನಾವು ಸಾಂಸ್ಕೃತಿಕತೆ-ಭಾಷೆ-ಮಾಹಿತಿ ತಂತ್ರಜ್ಞಾನಗಳನ್ನು ಒಚಿದರೊಡನೊಂದು ಬೆಸೆಯುವ ಕಾರ್ಯವನ್ನು ಈಗಿನಿಂದಲೇ ಆರಂಭಿಸಬೇಕಾದ ಅಗತ್ಯವಿದೆ. ಮೈಸೂರಿನ ಬಳಗಕ್ಕೆ ಸಮಾನಾಸಕ್ತ ಚಿಂತಕರು, ಸಾಹಿತಿಗಳು, ಯುವ ಐ.ಟಿ ಎಂಜಿನೀಯರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸುಧಾಕರ್‌ರವರ ಸಹಕಾರ ಕೋರಿದೆವು. ಅವರು ಸಂತೋಷದಿಂದ ಒಪ್ಪಿಕೊಂಡು ತಾವೂ ಮೈಸೂರು ಕೆ.ಎಸ್.ಸಿ.ಬಳಗದ ಸದಸ್ಯರಾಗುವ ಇಚ್ಛೆ ವ್ಯಕ್ತಪಡಿಸಿದರು.
ಮೈಸೂರಿನ ಕವಿಗಳು, ಸಾಹಿತಿಗಳಿಗೆ, ತಂತ್ರಜ್ಞರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಲು ಶಕ್ತಿ ಮೀರಿ ಪ್ರಯತ್ನ ಪಡುವುದಾಗಿ ಭರವಸೆ ಕೊಟ್ಟರು.
ಈ ನಿಟ್ಟಿನಲ್ಲಿ ಬರುವ ಡಿಸೆ೦ಬರ್‌ನಲ್ಲಿ ಮೈಸೂರಿನಲ್ಲಿ, ಬೆ೦ಗಳೂರು ಹಾಗು ಮು೦ಬೈ ಮಾದರಿಯ ಸಮಾವೇಶದ ಆಲೋಚನೆ ಮು೦ದಿಟ್ಟಾಗ, ಸುಧಾಕರ್‌ರವರು ಸ೦ಪೂರ್ಣ ಬೆ೦ಬಲ ಸೂಚಿಸಿದರು.
ಬಹು ಮುಖ್ಯವಾಗಿ ಭಾರತದ ಸಂದರ್ಭದಲ್ಲಿ ಸಂಸ್ಕೃತಿ ಮತ್ತು ಮಾಹಿತಿ ತಂತ್ರಜ್ಞಾನ ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣದ ಬಗ್ಗೆ ಅವರೊಡನೆ ಬಹು ದೀರ್ಘವಾಗಿ ಚರ್ಚಿಸಿದೆವು. ಎರಡು ದಿನದ ಕಾರ್ಯಕ್ರಮದ ರೂಪುರೇಷೆ, ಸ್ಮರಣ ಸ೦ಚಿಕೆ, ಜಾಹೀರಾತು ಸಂಗ್ರಹ ಇತ್ಯಾದಿಗಳ ಬಗ್ಗೆ ಮಾತುಕತೆ ನಡೆಯಿತು. ನಮ್ಮಆಭಿಪ್ರಾಯಗಳಿಗೆ ಸ್ಪ೦ದಿಸಿ, ಸುಧಾಕರ್‌ರವರು ತಮ್ಮ ಸಲಹೆಗಳನ್ನು ಇತ್ತರು.
ನವೆ೦ಬರ್‌ನಲ್ಲಿ ಕರ್ನಾಟಕ ಸರ್ಕಾರ ಹಾಗು ಐ.ಟಿ ಸ೦ಸ್ಥೆಗಳ ಕನ್ನಡದ ತ೦ತ್ರಾ೦ಶ ಬೆಳವಣಿಗೆ ಕುರಿತಾದ ಅವಗಣನೆಯ ಬಗ್ಗೆ ಗಮನ ಸೆಳೆಯಲು, ಕನ್ನಡ ಸಾಹಿತ್ಯ.ಕಾ೦ ಹಾಗು ಬೆ೦ಬಲಿಗರ ಬಳಗ ಆಯೋಜಿಸುತ್ತಿರುವ ಒಚಿದು ದಿನದ ಉಪವಾಸ ಧರಣಿ ಮತ್ತು ಸಾತ್ವಿಕ ಪ್ರತಿಭಟನೆಗೆ, ತಾವು ಹಾಗು ಅವರ ಮಿತ್ರ ಬಳಗದ ಎಲ್ಲರು ಖುದ್ದು ಬಂದು ಬೆಂಬಲ ಸೂಚಿಸುವುದಾಗಿ ತಿಳಿಸಿದರು.
ಸುಮಾರು ೨ ಘ೦ಟೆಯ ಮಾತುಕತೆಯ ನ೦ತರ ಅಲ್ಲಿ೦ದ ಹೊರಟಾಗ ನಮ್ಮಲ್ಲಿ ಹೊಸ ಹುಮ್ಮಸ್ಸು ಕಾಣಿಸಿದ್ದು ಸ್ಪಷ್ಟವಾಗಿತ್ತು.
ಕನ್ನಡ ಮತ್ತು ತಾಂತ್ರಿಕತೆ ಬೆಸೆಯುವ ದಿಕ್ಕಿನಲ್ಲಿ ನಾವಿಟ್ಟಿರುವ ಪುಟ್ಟ ಹೆಜ್ಜೆಗೆ, ಹಿರಿಯರ ಬೆ೦ಬಲ ಅತ್ಯಗತ್ಯ.
ನಮ್ಮಲ್ಲಿ ಛಲ ಆಸೆಗಳೆರಡೆ ಸಾಲದು, ಕಾರ್ಯಕ್ಷಮತೆಯೂ ಬೇಕು.
ಸರಿಯಾದ ಸುಧಾಕರರವರಂಥಹ ಹಿರಿಯರಿಂದ ಉತ್ತಮ ಮಾರ್ಗದರ್ಶನವನ್ನು ನಾವು ಸದುಪಯೋಗ ಮಾಡಿಕೊಳ್ಳಬೇಕಿದೆ.
ಕನ್ನಡಸಾಹಿತ್ಯ.ಕಾಂ ಕನ್ನಡದ ಕಣ್ಣಲ್ಲಿ ವಿಶ್ವದ ಕನಸು
ಕನ್ನಡ ಸಾಹಿತ್ಯ.ಕಾ೦ ಬೆ೦ಬಲಿಗರ ಬಳಗಕ್ಕಾಗಿ,
ಅರುಣ್ (ಅಚರಾ)
ಜನಪ್ರಿಯ ಲೇಖನಗಳು
-
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾ...
-
ಅ ದು ಮೊದಲ ಮಹಾಯುದ್ಧದ ನಂತರ ಕಾಲ. ಮಿತ್ರ ಸೇನೆಯ ಎದುರು ಹೀನಾಯವಾಗಿ ಸೋತ ಜರ್ಮನಿ ತನ್ನ ಭೂಭಾಗಗಳನ್ನು ಕಳೆದುಕೊಂಡಿದ್ದಲ್ಲದೆ, ಯುದ್ಧ ನಷ್ಟವೆಂದು ಅಪಾರವಾದ ವೆಚ್ಚವನ್ನು...
-
www.samvaada.com Dear Friends, "Samvaada.com" is constantly orgainising film shows, film discourses and film readings in order...
-
"NAVILAADAVARU" a Kannada film realized by a small group of enthusiasts, is produced in just Rs 35000. We are screening this film ...
-
ಲೇಖಕರು: ಎಚ್.ಎಸ್. ಪ್ರಭಾಕರ ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ನಿಧನರಾದ ಪ್ರಯುಕ್ತ ಸರ್ಕಾರ ಜ.೨೮ ರಿಂದ ಫೆ.೩ ರವರೆಗೆ ಒಂದು ವಾರ ಶೋಕಾಚರಣೆ ಪ್ರಕಟಿಸಿದ್ದು ಸರಿ...
No comments:
Post a Comment