3.08.2008
`ವಿಷಾದ ಕಾಲ' : ಒಂದು ಕವನ
ನಡು ಮಧ್ಯಾಹ್ನದಲ್ಲೂ ಆವರಿಸುವ ದಟ್ಟ ಮಂಜು.
ಅದು ಮಂಜೋ, ಪ್ಲಾಸ್ಟಿಕ್ಕಿನ ಹೊಗೆಯೋ,
ಹೊತ್ತಗೆ ಸುಟ್ಟುಹೋದ
ಕಮಟು ಪರಿಮಳವೋ ಅರಿಯದೆ
ಮನ, ಮಲಿನ ಖೋಡಿ .
ಕಸದ ಹೊಳೆಯಲಿ ಹಾಯಿದೋಣಿ ವಿಹಾರ
ಸಂದುಗಳ ಬಂಧನದಲಿ ಸಣ್ಣ ಕುಸುಕು
ಮಬ್ಬಿನಲಿ ನಿಡಿ ನೋಟಕ್ಕೂ ಸಿಗದ ಕಪ್ಪು ಸೂರ್ಯ.
ಚೆಂಗನೆ ನೆಗೆವ ಜಿಂಕೆಯ ಕೊಂದು
ಕಮ್ಮನೆ ಮಾಂಸ ಹುರಿಯಲೋಸುಗ
ಹೊಗೆಮಂಜಿನ ಅಡಿ ಕರಕಲಾಯಿತು
ಬೂದಿ ಬಾನಾಯಿತು-ಬಯಸಿ
ಹಿಟ್ಟು ನಾದಿ ನಾದಿ ನೀರಾಗಿ
ಕರಗಿ ಕರಗಿ ಬೆಣ್ಣೆನುಣುಪು
ರಾಡಿ-ಜೇಡಿ ಪದರ ತೋಡಿ
ಉಸುಕು ನಿಚ್ಛಳ
ಭಾವಜಲದೊಡಗೂಡಿ.
ನಿಶ್ಛಲ ನಿರ್ವಾತ ನಿರಂತರ
Subscribe to:
Post Comments (Atom)
ಜನಪ್ರಿಯ ಲೇಖನಗಳು
-
ಕನ್ನಡಸಾಹಿತ್ಯ.ಕಾಂ ಗೆ ಆಗ ತಾನೆ ಒಂದು ಜಯ ದೊರಕಿತ್ತು. ಮೈಕ್ರೋಸಾಫ್ಟ್ನ 'ತುಂಗಾ' ಫಾಂಟ್ ವಿಚಾರದಲ್ಲಿ ಕನ್ನಡಸಾಹಿತ್ಯ.ಕಾಮ್ ನೆಡೆಸಿದ ಹೋರಾಟ, ಚರ್ಚೆಗಳು, ...
-
ಭಾನುವಾರ ಅಕ್ಟೋಬರ್ ೧. ಆಯುಧ ಪೂಜೆ ದಿವಸ, ಮೈಸೂರಿಗೆ ದಸರ ಸಂಭ್ರಮ. ಮೈಸೂರೆಂಬ ರಾಜನಗರಿ ನವ ವಧುವಂತೆ ಅಲಂಕಾರಗೊಂಡು ಮೈಮರೆತಿತ್ತು. ಆ ಸಂದರ್ಭದಲ್ಲಿ ಬೆಂಗಳೂರಿನ ಹಬ್ಬ...
-
ಸಮ್ಮೇಳನದ ಮಳಿಗೆಯಲ್ಲಿ ಶನಿವಾರ ನಮಗಂತೂ ಶುಭದಿನ. ಎದ್ದು ನ(ಗ)ರಿಗಳ ಮುಖ ನೋಡಿದ್ದರಿಂದಲೋ ಏನೋ ಭರ್ಜರಿ ನಲವತ್ತು ಸಾವಿರ ವ್ಯಾಪಾರ-೮*೮ ಮಳಿಗೆಯೊಂದರಲ್ಲೇ. ವ್ಯಾಪಾ...
-
ಪುಸ್ತಕಗಳು ನಿಮ್ಮ ಮನೆಯಂಗಳಕ್ಕೆ...ಮನದಂಗಳಕ್ಕೆ. ಅತ್ತು ಹಗುರಾಗಲು ಹೆಗಲಿನಾಸರೆಯಿಲ್ಲ ನಕ್ಕು ಸಂಭ್ರಮಿಸಲು ಸಾವಿನನುಮತಿಯಿಲ್ಲ ಎಂದು ಬರೆಯುವ ವಿಕ್ರಮ ಹತ್ವಾರ್ ಮೊದಲ ...
-
ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಶೇಷಾದ್ರಿಪುರಂ ವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಆಚರಿಸುತ್ತಿರುವ ಕನ್ನಡಸಾಹಿತ್ಯ.ಕಾಂ ನ ಐದನೇ ವಾರ್ಷಿಕೋತ್ಸವ, ...
-
ಮಾನ್ಯ ಮುಖ್ಯ ಮಂತ್ರಿಗಳು ಹಾಗು ಮಾಹಿತಿ ತಂತ್ರಜ್ಞಾನ ಸಚಿವರು, ಕರ್ನಾಟಕ ಸರ್ಕಾರ ಮಾನ್ಯ ಪ್ರಾಥಮಿಕ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಮಾನ್ಯ ಪ್ರೌಢ ಶಿಕ್ಷಣ ಸಚಿವರು ಕರ...
-
ಕನ್ನಡಸಾಹಿತ್ಯಡಾಟ್ಕಾಂ ಸಲ್ಲಿಸಲಿರುವ ಆಂದೋಲನದ ರೂಪ ತಾಳಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಂಚಲನವೊಂದು ಮೂಡುತ್ತಿದೆ. ಬೆಂಬಲ ವ್ಯಕ್ತಪಡಿಸಿದವರ ಪಟ್ಟಿ ಬೆಳೆಯುತ್ತಿ...
-
ಅಂ ತೂ ಕಳ್ಳಭಟ್ಟಿಯ ಹೆಸರಿನಲ್ಲಿ methyl alcohol ಅಥವ methanol ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ. ಸಾರಾಯಿ ನಿಷೇಧವಿರುವ ಕರ್ನಾಟಕ ಮತ್ತು ನಿಷೇಧವಿಲ್ಲದಿರುವ ತಮ...
-
(ಸುಮಾರು ಒಂದು ವರ್ಷದ ಹಿಂದೆಯೇ ಬರೆದ ಈ ವಿಮರ್ಶೆ ಕಾರಣಾಂತರಗಳಿಂದ ಪ್ರಕಟವಾಗಿರಲಿಲ್ಲ. ಮುಂಗಾರು ಮಳೆಯ ಅಗಾಧ ಯಶಸ್ಸನ್ನೂ ಮನಸ್ಸಲ್ಲಿಟ್ಟುಕೊಂಡು ಈ ವಿಮರ್ಶೆ ಮೂಡಿಬಂದಿರು...
-
ಲೇಖಕರು: ಎಚ್ ಎಸ್ ಪ್ರಭಾಕರ್ ಕೃಪೆ: ಸಂಯುಕ್ತ ಕರ್ನಾಟಕ ಹಾಸನ, ಜೆ.ಡಿ.ಎಸ್. ಭದ್ರಕೋಟೆಯಾಗಿದ್ದರೂ ಮುಂಬರುವ ಸಂಸತ್ ಚುನಾವಣೆಗಳಲ್ಲಿ ಸ್ವಲ್ಪ ಸಂಘಟಿತ ಶ್ರಮ ಹಾಕಿದ್ದರ...
1 comment:
ರವಿಯವರೇ,
ಈ ಕವನಕ್ಕೊಂದು ಚಿತ್ರ ಬರೆಯಬೇಕೆಂಬ ಆಸೆ ಆಯ್ತು..ಹಾಡು ಅರ್ಥ ಮಾಡ್ಕೊಳ್ತಾ ಇದಿನಿ..ಕೊನೆಯ ಪ್ಯಾರಾದ ಪದಗಳು ಕ್ಲಿಷ್ಟ ಅನ್ನಿಸ್ತಿದೆ ನಂಗೆ...ಮೊದಲ ಪ್ಯಾರಾದ ಪದಗಳ ಬಳಕೆ, ಜೋಡಣೆ ಅಧ್ಬುತ...ಇನ್ನೂಳಿದ ಪ್ಯಾರನ ಅರ್ಥ ಮಾಡ್ಕೊಳ್ತಾ ಇದಿನಿ :)...ನೀವು ಸುಲಭವಾಗಿಸ್ತಿರಿ ಅನ್ನೊ ನಂಬಿಕೆ ನನ್ಗಿದೆ...
Post a Comment