7.29.2006

ಅಪರೂಪದ ಜಾನಪದ ಗಾರುಡಿಗ ಎಸ್.ಕೆ.ಕರೀಂಖಾನ್‍ ರವರು ಇನ್ನಿಲ್ಲ...

ಎಸ್.ಕೆ.ಕರೀಂಖಾನರಿಗೊಂದು ನುಡಿನಮನ.....
ನಾಡಿನ ಹೆಸರಾಂತ ಜಾನಪದ ತಜ್ಞರಾಗಿದ್ದ ಎಸ್.ಕೆ.ಕರೀಂಖಾನರು ಇಂದು(೨೯-೦೭-೦೬,ಶನಿವಾರ) ನಮ್ಮನ್ನಗಲಿದ್ದಾರೆ. ಆ ಹಿರಿಯ ಜೀವ ಜೈನ್ ಆಸ್ಪತ್ರೆಯ ಹಾಸಿಗೆ ಮೇಲೆ ಎಷ್ಟು ನರಳಿತೋ...? ಕನ್ನಡ ಮನೆ ಮಾತಲ್ಲದಿದ್ದರೂ, ಅವರು ಕನ್ನಡ ಜಾನಪದ ಕಲೆಯನ್ನು ಉಸಿರಾಗಿಸಿಕೊಂಡ ರೀತಿ ಅನನ್ಯ ಮತ್ತು ಅಪರೂಪ. ಕೊನೆಯ ದಿನಗಳಲ್ಲೂ ಸರ್ಕಾರಗಳು ಅವರಿಗೊಂದು ಸೂರು ಮಾಡಿಕೊಡಲಿಲ್ಲ. ಅವರನ್ನು ಸಂಬಂಧಿಕರ ಹಂಗಿನಲ್ಲೇ ಕೊನೆಯುಸಿರೆಳೆಯುವಂತೆ ಮಾಡಿಬಿಟ್ಟವು. ಹಿರಿಯ ಜೀವಕ್ಕೆ ನಮ್ಮೆಲ್ಲರ ಮನಸಾರ ನುಡಿ ನಮನಗಳಿರಲಿ.
ಸುಮಾರು ನಾಲ್ಕು ವರ್ಷಗಳ ಹಿಂದೆ ಕನ್ನಡ ಭವನದಲ್ಲಿ ಮನೆಯಂಗಳದ ಮಾತುಕಥೆಗೆ ಬಂದಿದ್ದ ಕರೀಂ ಖಾನರು ನನಗಗೊಂದು ಸೈಟೋ ಏನಾದರೂ ಕೊಡಿಸಿ...ಎಂದು ಪ್ರೇಕ್ಷಕರ ಮುಂದೆ ಅಕ್ಷ್ರರಶಃ ಬೇಡಿಕೊಂಡಿದ್ದರು. ಕೊನೆಯ ದಿನಗಳಲ್ಲೂ ಕನ್ನಡಿಗರು ಅವರಿಗೆ ಸಲ್ಲಿಸಬೇಕಾದ ಗೌರವ ಸಲ್ಲಿಸಲಿಲ್ಲ..
ಭಗವದ್ಗೀತೆಯನ್ನೊಳಗೊಂಡು ಅನೇಕಾನೇಕ ಕಾವ್ಯಗಳ ಬಗ್ಗೆ ಪಾಂಡಿತ್ಯ ಗಳಿಸಿದ್ದ ಕರೀಂಖಾನರು...ಹಿಂದೂ ದೇವರುಗಳ ಮೇಲೆ ಭಕ್ತಿಗೀತೆಗಳನ್ನು
ರಚಿಸಿ....ಭಕ್ತರು ನಾಚುವಂತೆ ಮಾಡಿದರು....
ಮುಸ್ಲಿಮರಲ್ಲಿ ಮುಸ್ಲಿಮರಾಗದೆ...ಹಿಂದುಗಳಲ್ಲಿ ಹಿಂದೂವಾಗದೆ...ಮನೆಯನೆಂದೂ ಕಟ್ಟಿಕೊಳ್ಳದೆ...ವಿಶ್ವಮಾನವರಾಗಿ ಅನಂತ ಚೇತನವಾಗುಳಿದ
ಕರೀಂ ಖಾನರಿಗೆ ಕರೀಂಖಾನರೇ ಸಾಟಿ....
ಮತ್ತೊಮ್ಮೆ ಹುಟ್ಟಿ ಬನ್ನಿ...ಜಾನಪದ ಕೊನೆಯಾಗುವಷ್ಟರಲ್ಲಿ....!!!

*******************

No comments:

ಜನಪ್ರಿಯ ಲೇಖನಗಳು